ಈ ಹೃದಯ ಕವಿಯಾಗಿ...!

ಈ ಹೃದಯ ಕವಿಯಾಗಿ...!

ಈ ಹೃದಯ ಕವಿಯಾಗಿ...!

(ಮತ್ತೊಂದು ಭಾವಾನುವಾದದ ಯತ್ನ)

ಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆ
ಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆ
ಅವರಿವರ ಗೀತೆಗಳ ಕೇಳುತ್ತಾ ಇರುವವಳೇ, ನನ್ನನ್ನೂ ನೀ ಆಲಿಸೇ

ಒಮ್ಮೆ ನೀ ಬಂದು ನೋಡಿಲ್ಲಿ ನಿನಗಾಗಿ, ನಾ ಹೇಗೆ ಬಾಳುತ್ತಿರುವೆ
ಒಮ್ಮೆ ನೀ ಬಂದು ನೋಡಿಲ್ಲಿ ನಿನಗಾಗಿ, ನಾ ಹೇಗೆ ಬಾಳುತ್ತಿರುವೆ
ನೀ ಮಾಡಿ ಹೋದ ಘಾಯಗಳ ಕಣ್ಣೀರ ನೂಲಿಂದ ಹೊಲಿಯುತ್ತಿರುವೆ
ನಿನ್ನ ವಿರಹದ ನೋವ ಹಿಡಿದು ನಾನನ್ನ ಅದೃಷ್ಟದ ಜೊತೆಗೆ ಜೂಜಾಡಿದೆ
ಜಗವನ್ನು ಜಯಿಸಿ, ನಿನ್ನಿಂದ ಸೋತೆ, ನನ್ನ ಆಟ ಹೀಗಾಗಿದೆ

ನಾ ಪ್ರೀತಿ ಮಾಡಿದ್ದು ಹೇಗೆಂದು ಕೇಳಿದರೆ ಅದಕ್ಕಿಲ್ಲ ಸಾಟಿ ಎಲ್ಲೂ
ನಾ ಪ್ರೀತಿ ಮಾಡಿದ್ದು ಹೇಗೆಂದು ಕೇಳಿದರೆ ಅದಕ್ಕಿಲ್ಲ ಸಾಟಿ ಎಲ್ಲೂ
ಧೂಳ ಕಣವಾಗಿದ್ದ ನಾ ನಿನ್ನ ಜ್ವಾಲೆಯಲ್ಲಿ ಉರಿದು ಆಗಿಹೆನೀಗ ಭಾನು
ನನ್ನಿಂದಾಗಿಯೇ ಇಲ್ಲಿ ವಿಶ್ವಾಸ ಉಳಿದಿಹುದು, ನೀನಿರುವೆ ಜೀವಂತವಿನ್ನೂ
ನಾನಿಲ್ಲದಾಗ ಕಣ್ಣೀರು ಸುರಿಸಿ, ಜಗ ಹುಡುಕಬಹುದೆನ್ನ ಗುರುತು

ಈ ಪ್ರೀತಿ ಒಂದು ಆಟಿಕೆಯು ಅಲ್ಲ, ಯಾರಾದ್ರೂ ಇದ ಕೊಳ್ಳಲು
ಈ ಪ್ರೀತಿ ಒಂದು ಆಟಿಕೆಯು ಅಲ್ಲ, ಯಾರಾದ್ರೂ ಇದ ಕೊಳ್ಳಲು
ನನ್ನಂತೆ ಬಹಳಷ್ಟು ಪರಿತಪಿಸಿ ನೀವು, ಬರಬಹುದು ಪ್ರೀತಿಸಲು
ನಾ ಅಲೆಮಾರಿ, ಎಲ್ಲಿಯದೋ ಪಯಣ, ನಾನಂತೂ ಸಾಗಿ ಬಿಡುವೆ
ಆದರೂ ನಾನು ಕಟ್ಟಿರುವ ಬಾಜಿಯನು, ನಾ ಗೆದ್ದು ಬಂದೇ ಬರುವೆ
ನಾ ಗೆದ್ದು ಬಂದೇ ಬರುವೆ
ನಾ ಗೆದ್ದು ಬಂದೇ ಬರುವೆ
**********
ಮೂಲ ಗೀತೆ:
ಚಿತ್ರ: ಗ್ಯಾಂಬ್ಲರ್
ಗಾಯಕ: ಕಿಶೋರ್ ಕುಮಾರ್

ದಿಲ್ ಆಜ್ ಶಾಯರ್ ಹೈ ಗಮ್ ಆಜ್ ನಗ್ಮಾ ಹೈ ಶಬ್ ಯೆ ಘಝಲ್ ಹೈ ಸನಮ್
ದಿಲ್ ಆಜ್ ಶಾಯರ್ ಹೈ ಗಮ್ ಆಜ್ ನಗ್ಮಾ ಹೈ ಶಬ್ ಯೆ ಘಝಲ್ ಹೈ ಸನಮ್
ಗೈರೋಂ ಕೇ ಶೇರೋಂ ಕೊ ಓ ಸುನ್ ನೇ ವಾಲೇ ಹೋ ಇಸ್ ತರಫ್ ಭೀ ಕರಮ್

ಆಕೇ ಝರಾ ದೇಖ್ ತೋ ತೇರಿ ಖಾತಿರ್ ಹಮ್ ಕಿಸ್ ತರಹ್ ಸೇ ಜೀಯೆ
ಆಕೇ ಝರಾ ದೇಖ್ ತೋ ತೇರಿ ಖಾತಿರ್ ಹಮ್ ಕಿಸ್ ತರಹ್ ಸೇ ಜೀಯೆ
ಆಂಸೂ ಕೆ ದಾಗೇ ಸೇ ಸೀತೇ ರಹೇ ಹಮ್ ಜೊ ಜಖ್ಮ್ ತೂನೆ ದಿಯೇ
ಚಾಹತ್ ಕಿ ಮೆಹ್ ಫಿಲ್ ಮೆ ಗುಮ್ ತೆರಾ ಲೇಕರ್ ಕಿಸ್ಮತ್ ಸೆ ಖೇಲಾ ಜುಂವಾ
ದುನಿಯಾ ಸೇ ಜೀತೆ, ತುಜ್‍ಸೇ ಹಾರೆ, ಯು ಖೇಲ್ ಅಪ್ನಾ ಹುವಾ

ಹೈ ಪ್ಯಾರ್ ಹಮ್ನೇ ಕಿಯಾ ಕಿಸ್ ತರಹ್ ಸೆ, ಉಸ್ಕಾ ನಾ ಕೊಯೀ ಜವಾಬ್
ಹೈ ಪ್ಯಾರ್ ಹಮ್ನೇ ಕಿಯಾ ಕಿಸ್ ತರಹ್ ಸೆ, ಉಸ್ಕಾ ನಾ ಕೊಯೀ ಜವಾಬ್
ಝರ್ರತ್ ಹೈ ಲೇಕಿನ್ ತೇರಿ ಲವೂ ಮೆ ಜಲ್‍ಕರ್ ಹುಮ್ ಬನ್ ಗಯೇ ಅಫ್‍ತಾಬ್
ಹಮ್ ಸೆ ಹೈ ಜಿಂದಾ ವಫಾ ಔರ್ ಹಮೀ ಸೆ ಹೈ ತೆರಿ ಮೆಹಫಿಲ್ ಜವಾಂ
ಹುಮ್ ಜಬ್ ನ ಹೋಂಗೇ ತೊ ರೋ ರೋ ಕೆ ದುನಿಯಾ ಡೂಂಡೇಗೀ ಮೇರೆ ನಿಶಾನ್

ಎ ಪ್ಯಾರ್ ಕೊಯಿ ಖಿಲೋನಾ ನಹೀ ಹೈ ಹರ್ ಕೊಯಿ ಲೆ ಜೊ ಖರೀದ್
ಎ ಪ್ಯಾರ್ ಕೊಯಿ ಖಿಲೋನಾ ನಹೀ ಹೈ ಹರ್ ಕೊಯಿ ಲೆ ಜೊ ಖರೀದ್
ಮೇರಿ ತರಹ್ ಜಿಂದಗೀ ಭರ್ ತಡಪ್ ಲೊ ಫಿರ್ ಆನಾ ಉಸ್ ಕೆ ಖರೀಬ್
ಹುಮ್ ತೊ ಮುಸಾಫಿರ್ ಹೈಂ ಕೊಇ ಸಫರ್ ಹೋ ಹುಮ್ ತೊ ಗುಜರ್ ಜಾಯೇಂಗೇ ಹೀ
ಲೇಕಿನ್ ಲಗಾಯಾ ಹೈ ಜೊ ದಾಂವ್ ಹುಮ್ ನೇ ವೊ ಜೀತ್ ಕರ್ ಆಯೇಂಗೇ ಹೀ
ವೊ ಜೀತ್ ಕರ್ ಆಯೇಂಗೇ ಹೀ
ವೊ ಜೀತ್ ಕರ್ ಆಯೇಂಗೇ ಹೀ
 
Rating
No votes yet

Comments