ಸಾವು ನೀಡುವ ಬಗೆಯಾವುದು?
ಕವನ
ಮನಸಿನೊಳಗೆ ಮರೆತ ನೆನಪುಗಳು
ಮತ್ತೆ ಮತ್ತೆ
ಆರಿದ ಗಾಯವ ಕೆದಕಿ
ನೋವ ತರಿಸುವುದೇಕೆ.
ಮರೆತೆನೆಂದಿರುವ
ಮರೆಯಲು ನಿರ್ಣಯಿಸಿದ
ಮರೆಯಲೇಬೇಕಾದ
ಮನಸಿನ ದುಡುಕು
ನಿರ್ಣಯಗಳಿಗೆ
ಸಾವು ನೀಡುವ
ಬಗೆಯಾವುದು?
ಬಗೆಹರಿಸಲು ಪಟ್ಟ
ನೋವಿನಾ ಛಾಯೆಯ
ಮಸಿಯ ಅಳಿಸುವುದೆಂತ,
ಅರಿಯದೇ ಮನ
ದಿನದಿನವೂ ಕೊರಗಿ,
ಕಾಡುವ ಕಹಿ ನೆನಪುಗಳ
ಒರೆಸಿ ಸಿಹಿನೀರ
ತುಂಬುವುದು ಹೇಗೆ
ಎಂದರಿಯದೆ
ಸೊರಗಿರುವ ಮನದ
ಸಂತೈಸುವುದೆಂತ..?
ಮನದ ಮೈದಡವಿ
ಹೊಸ ಪಯಣಕೆ
ಅಣಿಯಾಗಿಸಿ
ಹುಡುಕುವ ಪ್ರತಿ
ದಾರಿಯಲಿ ತೊಡರಾಗುವ
ಹಳೆಯ ಕಹಿ ನೆನಪುಗಳ
ಕಲ್ಲಿನಾ ಮಳೆಗೆ
ಸಮಾದಿ ಕಟ್ಟುವುದಾದರು ಹೇಗೆ?
ಮಂಸೋರೆ.
Comments
ಉ: ಸಾವು ನೀಡುವ ಬಗೆಯಾವುದು?
ಉ: ಸಾವು ನೀಡುವ ಬಗೆಯಾವುದು?
In reply to ಉ: ಸಾವು ನೀಡುವ ಬಗೆಯಾವುದು? by ಹೇಮ ಪವಾರ್
ಉ: ಸಾವು ನೀಡುವ ಬಗೆಯಾವುದು?