ರಂಗು ರಂಗ ನಾಟ
ರಂಗು ರಂಗ ನಾಟ
ರಂಗಿನಾಟ ರಂಗು ರಂಗಿನಾಟ,
ಈ ಬದುಕೂಂದು ರಂಗಿನಾಟ
ಭುವಿಗೆ ಬರುವ, ಬಂದಾಗಿನಾಟ
ಕಂದಮ್ಮನ ಅಳುವಿನ, ನಗುವಿನಾಟ
ಬೆಳೆಯುವ, ಆಡುವ, ಕಲಿಯುವ
ನಲಿಯುವ, ಮೊಳೆಯುವ, ಕೊಂಡಿಯಾಟ
ರಂಗಿನಾಟ ರಂಗು, ರಂಗಿನಾಟ
ಈ ಬದುಕೊಂದು ರಂಗಿನಾಟ
ಮ್ಯೆ ಮನ ಬೆಳೆಯುವ, ಹೊಂಗನಸಿನಾಟ
ಕಣ್ ಮನ ತಣಿಸುವ, ಬೆಳದಿಂಗಳ ಬಾಳಿನಾಟ
ಜೊತೆಯಾಗಿ, ಸಂಗಾತಿಯಾಗಿ
ಬರವ ಬಯಕೆಯ ರಂಗಿನಾಟ
ಸಂಭಂದಗಳ ಮೆರವಣಿಗೆಯಲ್ಲಿ
ಮನದನ್ನೆ ಬರುವ ಘಳಿಗೆಯಾಟ
ರಂಗಿನಾಟ ರಂಗು, ರಂಗಿನಾಟ
ಈ ಬದುಕೊಂದು ರಂಗಿನಾಟ
ಮದುವೆ, ಮಕ್ಕಳ ಕನಸಿನಾಟ
ಬ್ರಹ್ಮಚಾರಿಯಾಗಿರುವುದೇ ರಂಗನಾಟ
ಧಾನ ಧರ್ಮಗಳ ಪ್ರಶಂಸೆಯ ಸವಿನೋಟ
ತುತ್ತು ಅನ್ನಕೂ ಪರದಾಡು ಎಂಬುದೇ ರಂಗನಾಟ
ರಂಗುರಂಗಿನ ವಾಹನದ ಓಡಾಟದ ನೋಟ
ಪಾದಯಾತ್ರೆಯು ಬರೆದಿದ್ದ ರಂಗನಾಟ
ರಂಗಿನಾಟ ರಂಗು, ರಂಗಿನಾಟ
ಈ ಬದುಕೊಂದು ರಂಗಿನಾಟ
ಅರಮನೆಯ ಜೀವನದ ಕನಸಿನ ಊಟ
ಸೊರಿಲ್ಲದೆ ಸೊರಗುವುದೇ ರಂಗನಾಟ
ಬಯಸಿದೆಲ್ಲವೂ ಬರುವಿದಿಲ್ಲ ಈ ಜೀವನದಲ್ಲಿ
ಬಯಸದೆ ಬರುವುದು ರಂಗನ ಮೊರೆಹೊಕ್ಕಲ್ಲಿ
ಬೇಡ ಬೇಡ ರಂಗು, ರಂಗಿನಾಟ,
ಬರಲಿ ರಂಗನೊಡನೆ ಭಕ್ತಿಯ ಒಡನಾಟ.
ರಂಗನಾಟವೇ ಚೆನ್ನ, ಅದು ಅನನ್ಯ
ಮನುಜನಾಗುವನು ಎಂದಿಗೊ ತಾ ಧನ್ಯ
-ಮಧ್ವೇಶ್