ಒಲವೆಂದರೇನು?

ಒಲವೆಂದರೇನು?

ಬರಹ

ನಿನ್ನ ಅಪ್ಪುಗೆಯ ಬಿಗುವಲ್ಲಿ

ನಾ ಕರಗಬೇಕೊಮ್ಮೆ ಗೆಳತಿ

-------

 ನಿನ್ನ ಮುತ್ತುಗಳ ಮಳೆಯಲ್ಲಿ

ನಾ ತೋಯಬೇಕೊಮ್ಮೆ ಗೆಳತಿ

-------

ನಿನ್ನ ಬಿಸಿಯುಸಿರ ಬೇಗೆಯಲ್ಲಿ

ನಾ ಬೇಯಬೇಕೊಮ್ಮೆ ಗೆಳತಿ

-------

ನಿನ್ನ ನೆನಪುಗಳ ಗುಂಗಲ್ಲಿ

ನಾ ನನ್ನೇ ಮರೆಯಬೇಕೊಮ್ಮೆ ಗೆಳತಿ

-------

ನಿನ್ನ ಕಂಗಳ ಬೆಳಕಲ್ಲಿ

ನಾ ಕುರುಡಾಗಬೇಕೊಮ್ಮೆ ಗೆಳತಿ

-------

ನಿನ್ನ ಗುಂಡಗೆಯ ನಗಾರಿಯಲ್ಲಿ

ನಾ ಕಿವುಡಾಗಬೇಕೊಮ್ಮೆ ಗೆಳತಿ

-------

ನಿನ್ನ ಪಿಸುಮಾತುಗಳ ಮರ್ಮರದೊಳು

ನಾ ಮೂಗನಾಗಬೇಕೊಮ್ಮೆ ಗೆಳತಿ

------

ನಿನ್ನೊಳಗೆ ನಾನಾಗಿ

ನಾನಿಲ್ಲದಂತಾಗಿ

ನಿನಗೆ ನನ್ನನ್ನೇ

ನಾ ಒಪ್ಪಿಸಿಕೊಳ್ಳಬೇಕೊಮ್ಮೆ ಗೆಳತಿ