ನಿತ್ಯ ನೂತನ ಪ್ರೇಮ ಚಿರಂತನ
ನಿನ್ನ ನೆನಪಿನ ಜೇನು ನನ್ನ ಕಾಡಿದೆ ನಲ್ಲ
ಅದಕೆ ಬರೆಯಲು ಕುಳಿತೆ ನಾನೊಂದು ಕವನ
ಗುರಿಯೊಂದು ನನಗಿಲ್ಲ ಪರಿಸರದ ಅರಿವಿಲ್ಲ
ಮೂಡಿಸಿದೆ ಹಾಳೆಯಲಿ ಆಂತರಿಕ ಕದನ
ಏನ ಬರೆಯಲಿ ಹೇಳು ತುಂಬೆ ಕವಿತೆಯ ಸಾಲು
ಪ್ರೇಮ ಕವಯಿತ್ರಿ ನಾನಲ್ಲವಲ್ಲ
ತಳಮಳವೊ ಕಸಿವಿಸಿಯೋ ಯಾವಭಾವನೆಯಿದೆಯೋ
ನನ್ನ ಮನದಳಲ ನಾ ತಿಳಿಯಲಿಲ್ಲ
ವಿರಹದುರಿ ದಹಿಸಿರಲು ಬಹಳ ಬಳಲಿದೆ ಮನವು
ಬರಹದಿಂ ವಿರಹವನುಪರಿಹರಿಸಲು
ಅರುಹಿದರೆ ಜಗಕೆನ್ನ ಮನದಿ ಮೀಟಿರುವ ಘನ
ತೆರಹದಾ ವಿರಹವನು ಮರೆಯಬಹುದು
ಮಾರ್ದವತೆ ತುಂಬಿದ್ದ ಕಣ್ಣೋಟದಿಂದನೀ
ಆರ್ದ್ರ ಗೊಳಿಸಿದೆ ಎನ್ನ ಹೃದಯವನ್ನು
ಸ್ಪಂದಿಸಿದೆ ಒಲುಮೆಯಲಿ ಮನದ ಭಾವನೆಗಳಿಗೆ
ಬಂಧಿಸಿದೆ ನಿನ್ನೊಲವ ಸುಧೆಯಿಂದಲಿ
ಇನಿದಾದ ನವಿರಾದ ಇನಿಯ ನಿನ್ನಯ ಸಂಗ
ಮನದಲ್ಲಿ ಮೀಟಿರಲು ಜಲತರಂಗ
ಮೌನ ಗೀತೆಗೆ ನೀನು ನುಡಿಸಿರಲು ಮೃದಂಗ
ತಾನನಕೆ ವಶವಾಯ್ತು ಅಂತರಂಗ
ನಿನ್ನೊಡನೆ ಒಡನಾಟ ನಿನ್ನೊಡನೆ ಚೆಲ್ಲಾಟ
ನಿನ್ನೊಡನೆ ಮನದೋಟ ಓಡುತಿರಲು
ನಿನ್ನೊಡನೆ ಕುಡಿನೋಟ ಬೆರೆತಿರಲು ಕನಸಿತ್ತು
ನಿನ್ನೊಡನೆ ಬಾಳಿನಾಟವ ನಡೆಸಲು
ಬಾಳಬಂಧನದಲ್ಲು ಭಾವಬಂಧನದಲ್ಲು
ಆತ್ಮಬಂಧನದಲ್ಲು ಜೊತೆಗೂಡಿದೆ
ನಿನ್ನೊಡನೆ ಜೀವನದ ರಾಗ ತಾಳದ ಬೆಸುಗೆ
ದೈವಬಂಧನವಾಗಿ ಪರಿಣಮಿಸಿದೆ
ಬೆರೆತಿರಲು ನನ್ನುಸಿರು ನಿನ್ನುಸಿರಿನಲ್ಲೀಗ
ನನ್ನಾತ್ಮ ನಿನ್ನಲ್ಲಿ ಒಂದಾಗಲು
ಪರಿಯನರಿಯದೆ ಎನ್ನ ಬಳಲಿಸದೆ ಬಳಿಸಾರು
ವಿರಹವನು ಪರಿಹರಿಸೆ ನನ್ನ ಸೇರು
ನನ್ ಹೃದಯ ಮಂದಿರದ ಅಭಿಷಿಕ್ತ ದೊರೆ ನೀನು
ನಿನ್ಹೃದಯದರಸಿಯು ತಾನೆ ನಾನು
ನಿನ್ನೊಲುಮೆ ದೇವನೆನಗಿತ್ತ ವರವಲ್ಲೇನು
ನಿನ್ನೊಲವ ಧಾರೆಯಲಿ ಮಿಂದೆ ನಾನು
ಕಣ್ಮುಚ್ಚಿ ಕ್ಷಣಕಾಲ ನಿನ್ನ ನೆನೆದರೆ ನಾನು
ನನ್ನ ಚೇತನ ವಾಯ್ತು ಅನಿಕೇತನ
ವಿಶ್ವ ಪ್ರೇಮದಿ ನಮ್ಮ ಆತ್ಮಗಳು ಬೆರೆತಾಯ್ತು
ನಿತ್ಯ ನೂತನ ಪ್ರೇಮ ಚಿರಂತನ
ಬಂದುಬಿಡು ಮೇಲಕ್ಕೆ ಹಾರೋಣ ನಭದಲ್ಲಿ
ವಾಸನಾತೀತವಾಗಿರುವ ನೆಲೆಯಲ್ಲಿ
ಸ್ವಚ್ಛಂದವಾಗಿ ಗರಿಗೆದರಿ ಕುಣಿದಾಡೋಣ
ಸಚ್ಚಿದಾನಂದನಾ ನಗರಿಯಲ್ಲಿ
Rating
Comments
ಉ: ನಿತ್ಯ ನೂತನ ಪ್ರೇಮ ಚಿರಂತನ
In reply to ಉ: ನಿತ್ಯ ನೂತನ ಪ್ರೇಮ ಚಿರಂತನ by raghumuliya
ಉ: ನಿತ್ಯ ನೂತನ ಪ್ರೇಮ ಚಿರಂತನ
ಉ: ನಿತ್ಯ ನೂತನ ಪ್ರೇಮ ಚಿರಂತನ
In reply to ಉ: ನಿತ್ಯ ನೂತನ ಪ್ರೇಮ ಚಿರಂತನ by asuhegde
ಉ: ನಿತ್ಯ ನೂತನ ಪ್ರೇಮ ಚಿರಂತನ
ಉ: ನಿತ್ಯ ನೂತನ ಪ್ರೇಮ ಚಿರಂತನ
In reply to ಉ: ನಿತ್ಯ ನೂತನ ಪ್ರೇಮ ಚಿರಂತನ by abdul
ಉ: ನಿತ್ಯ ನೂತನ ಪ್ರೇಮ ಚಿರಂತನ
ಉ: ನಿತ್ಯ ನೂತನ ಪ್ರೇಮ ಚಿರಂತನ
In reply to ಉ: ನಿತ್ಯ ನೂತನ ಪ್ರೇಮ ಚಿರಂತನ by ಗಣೇಶ
ಉ: ನಿತ್ಯ ನೂತನ ಪ್ರೇಮ ಚಿರಂತನ
ಉ: ನಿತ್ಯ ನೂತನ ಪ್ರೇಮ ಚಿರಂತನ
In reply to ಉ: ನಿತ್ಯ ನೂತನ ಪ್ರೇಮ ಚಿರಂತನ by kavinagaraj
ಉ: ನಿತ್ಯ ನೂತನ ಪ್ರೇಮ ಚಿರಂತನ
ಉ: ನಿತ್ಯ ನೂತನ ಪ್ರೇಮ ಚಿರಂತನ
In reply to ಉ: ನಿತ್ಯ ನೂತನ ಪ್ರೇಮ ಚಿರಂತನ by Chikku123
ಉ: ನಿತ್ಯ ನೂತನ ಪ್ರೇಮ ಚಿರಂತನ
ಉ: ನಿತ್ಯ ನೂತನ ಪ್ರೇಮ ಚಿರಂತನ
In reply to ಉ: ನಿತ್ಯ ನೂತನ ಪ್ರೇಮ ಚಿರಂತನ by manju787
ಉ: ನಿತ್ಯ ನೂತನ ಪ್ರೇಮ ಚಿರಂತನ