ವಾಕ್ಪಥ ೧/೨
ಎಂದಿನಂತೆ ಅರ್ಧ ಘಂಟೆ ಮೊದಲೇ ಹೊರಟು "ವಾಕ್ಪಥ"ಕ್ಕೆ ಬಂದೆನು. ಬಾಗಿಲ ಬಳಿ ಪರಿಚಿತರು ಯಾರೂ ಕಾಣಿಸದಿದ್ದಾಗ, ಹಿಂದಿನಿಂದ "ನಿದಾನವಾಗಿ ಹೋಗ್ರೀ, ಏನಷ್ಟು ಅರ್ಜೆಂಟ್?" ಎನ್ನುವುದು ಕೇಳಿಸಿತು. ನೋಡಿದರೆ ಮೀನಾಕ್ಷಮ್ಮನವರು ಮಿಸ್ ರಂಜಿತಾ ಜತೆ ಬರುತ್ತಿದ್ದರು. ಅವರ ಜತೆ ನಿದಾನಕ್ಕೆ ಬಾಗಿಲು ದಾಟಿ ಒಳ ಬಂದಾಗ ಕಂಡ ಪರಿಚಿತರಿಗೆ ಕೈಬೀಸಿದೆ, ಹಿರಿಯರಿಗೆ ನಮಸ್ಕರಿಸಿದೆ, ಅಪರಿಚಿತರಿಗೆ ಮುಗುಳ್ನಕ್ಕೆ..(ಹುಬ್ಬುಗಂಟಿಕ್ಕಿದರು ಮೀನಾಕ್ಷಮ್ಮನವರು)
ಒಳಬರುತ್ತಿದ್ದಂತೇ ಮೀನಾಕ್ಷಮ್ಮನವರು "ಸಂಬಂಧಿಗಳಿಂದ ನಂಬಿಕೆದ್ರೋಹ, ಮೋಸ, ದಗಲ್ಬಾಜಿತನ"ದ ಬಗ್ಗೆ ತಮ್ಮ ಭಾಷಣ ಆರಂಭಿಸಿದರು. ಆರಂಭಿಸಿದ್ದೇ ಟಾಪ್ ಗೇರ್ನಲ್ಲಿ ರಿಂಗ್ ರೋಡಲ್ಲಿ ಬೈಕ್ ಸವಾರರು ಹೋದಂತೆ ನಾನ್ ಸ್ಟಾಪ್ ಓಡಿಸಿದ್ದೇ... ಸಮಯಪಾಲಕನಾದ ನನ್ನ ಅನೇಕ ಸಿಗ್ನಲ್ಗಳನ್ನು ಕ್ಯಾರೇ ಮಾಡಲಿಲ್ಲ. ದೇವರಾಣೆಗೂ ಹೇಳುತ್ತೇನೆ- ಕಾಫಿ ಸಪ್ಲೈ ಕೆಲಸವಾದರೂ ಆದೀತು, ಈ ಸಮಯಪಾಲಕ ಕೆಲಸ ಬೇಡವೇ ಬೇಡ.
ಕಣ್ಸನ್ನೆ ಮಾಡಿದ ಕೂಡಲೇ ಮಿಸ್ ರಂಜಿತಾರವರು "ಹಾಸ್ಟೆಲ್ ವಾಸ-ಕ್ಯಾಂಟಿನ್ ಊಟ"ದ ಬಗ್ಗೆ ಹೇಳಲು ಆರಂಭಿಸಿದರು. ಮೀನಾಕ್ಷಮ್ಮನವರು ಮಿಸ್. ರಂಜಿತಾರವರ ವಿಷಯದಲ್ಲೂ ಮೂಗು ತೂರಿಸಿದರು. ಕೊನೆಗೆ ಬೇರೆ ದಾರಿ ಕಾಣದೇ "ವಾಕ್ಪಥ"ವನ್ನು "ಮೋಡ ಜಾಸ್ತಿಯಾಗಿದೆ, ಮಳೆ ಬರುವ ಹಾಗಿದೆ, ಬೇಗ ಮನೆಗೆ ಹೋಗೋಣ" ಎಂದು ಹೇಳಿ ೧/೨ಕ್ಕೇ ( ವಾಕ್ಪಥ೧/೨) ಮೊಟಕುಗೊಳಿಸಲಾಯಿತು.
ಮುಂದಿನ ವಾಕ್ಪಥ- ಸ್ಯಾಂಕಿಟ್ಯಾಂಕ್ ಪಾರ್ಕಲ್ಲಿ- ಮುಂದಿನ ಆದಿತ್ಯವಾರ- ಬಹುಷಃ ಮೀನಾಕ್ಷಮ್ಮನವರು ಮುಂದಿನಸಲವೂ ಇದೇ ವಿಷಯದ ಬಗ್ಗೆ ಮಾತನಾಡಲಿರುವರು. ಕೇಳುವ ಆಸಕ್ತಿ ಇನ್ನೂ ಇದ್ದರೆ ಬರಬಹುದು.
-ಗಣೇಶ
Comments
ಉ: ವಾಕ್ಪಥ ೧/೨
In reply to ಉ: ವಾಕ್ಪಥ ೧/೨ by asuhegde
ಉ: ವಾಕ್ಪಥ ೧/೨
ಉ: ವಾಕ್ಪಥ ೧/೨
ಉ: ವಾಕ್ಪಥ ೧/೨
In reply to ಉ: ವಾಕ್ಪಥ ೧/೨ by manju787
ಉ: ವಾಕ್ಪಥ ೧/೨
In reply to ಉ: ವಾಕ್ಪಥ ೧/೨ by ಗಣೇಶ
ಉ: ವಾಕ್ಪಥ ೧/೨
ಉ: ವಾಕ್ಪಥ ೧/೨
In reply to ಉ: ವಾಕ್ಪಥ ೧/೨ by venkatb83
ಉ: ವಾಕ್ಪಥ ೧/೨
ಉ: ವಾಕ್ಪಥ ೧/೨
In reply to ಉ: ವಾಕ್ಪಥ ೧/೨ by partha1059
ಉ: ವಾಕ್ಪಥ ೧/೨
In reply to ಉ: ವಾಕ್ಪಥ ೧/೨ by RAMAMOHANA
ಉ: ವಾಕ್ಪಥ ೧/೨
In reply to ಉ: ವಾಕ್ಪಥ ೧/೨ by ಗಣೇಶ
ಉ: ವಾಕ್ಪಥ ೧/೨