ಪ್ರೊಡಕ್ಷನ್ ನಂ -೧ ಭಾಗ-೩

ಪ್ರೊಡಕ್ಷನ್ ನಂ -೧ ಭಾಗ-೩

--೩--


ಕಿಟಕಿಯ ಬಳಿ ನಿಂತಿದ್ದ ರಶ್ಮಿ, ಗಾಜಿನ ಮೇಲೆ ಇಡೀ ನಗರದ ಛಾಯೆಯೇ ನಾನು,
ನನ್ನೊಳಗೆ ಇಡೀ ನಗರವೂ ಎಂಬಂತಿದ್ದ ಕೌಶಿಕ್ ನ ಪ್ರತಿಬಿಂಬದ ಮೇಲೆ ಕೈಯಾಡಿಸುತ್ತಾ ..
’ಕಳೆದೆರೆಡು ತಿಂಗಳಿಂದ ನನ್ನೊಳಗೆ ತಲ್ಲಣಗಳ ತಂಗಾಳಿಗೆ ಎದೆಯೊಡ್ಡು ನಿಂತ ಎಳೆಹೂವಿನಂತಾಗಿದೆ..
ಕಾಲ ತನ್ನ ವೇಗವನ್ನೇ ಕಳಕೊಂಡಂತೆ ಒಮ್ಮೆ ಅನಿಸಿದರೆ.. ಮತ್ತೊಮ್ಮೆ ಕಾಲದ ಈ ವೇಗಕ್ಕೆ ನಾನು ತಡೆದುಕೊಳ್ಳಬಲ್ಲೆನೇ ಎಂದೆಲ್ಲಾ ಅನಿಸುತ್ತದೆ.
ಕಳೆಯುತ್ತಿರುವ ಈ ಪ್ರತಿಯೊಂದು ಕ್ಷಣವನ್ನು ಸೆರೆಹಿಡಿದು ಶೇಖರಿಸಬೇಕನಿಸುತ್ತದೆ.
ಮರುಘಳಿಗೆಯಲ್ಲಿ ತನ್ನ ಪಾತ್ರದ ಅಂತ್ಯವನ್ನು ನೆನಸಿಕೊಂಡರೆ.. ಯಾಕಾದರು ಈ ಸಿನಿಮಾ ಮುಗಿಯುವ ಹಂತಕ್ಕೆ ಬಂತೋ ಎಂದನಿಸುತ್ತದೆ.
ಸಿನಿಮಾ ಮುಗಿಯಲು ಹೊರಟಿರುವ ಈ ಅಂತ್ಯದ ವೇಗಕ್ಕೆ ನಾನು ನನ್ನ ಪಾತ್ರದ ಮೂಲಕ ತಡೆದುಕೊಳ್ಳಬಲ್ಲೆನೇ ಎಂಬ ಭೀತಿ ನನ್ನೊಳಗೆ ಗೊಂದಲಗಳ ಬಿರುಗಾಳಿಎಬ್ಬಿಸಿದೆ’
 
ಅಂತಂದು ಹಾಗೇ ಕಿಟಿಯೊಳಗಿನ ನಗರಕ್ಕೆ ಬೆನ್ನು ಮಾಡಿ ನಿಲ್ಲುತ್ತಾಳೆ.
 
ಅಲ್ಲಿಯವರೆಗೂ ರಶ್ಮಿಯನ್ನೇ ನೋಡುತ್ತಾ ನಿಂತಿದ್ದ ಕೌಶಿಕ್ ಹಾಗೇ ಅಲ್ಲಿಂದ ದೃಷ್ಟಿಯನ್ನು ತನ್ನ ಪ್ರತಿಬಿಂಬದೆಡೆಗೆ ಬದಲಾಯಿಸಿ detail ಅನ್ನಿಸದ ತನ್ನ ಪ್ರತಿಬಿಂಬ ಅದರೊಳಗಿನ ನಗರವನ್ನೇ ದಿಟ್ಟಿಸುತ್ತ
’ನನಗೂ ಹಾಗೇ ಅನಿಸುತ್ತಿದೆ. ಅರ್ಥವಿಲ್ಲದ ಆಸೆಗಳ ಬೆನ್ನೇರಿ ನಾನೇಕೆ ನನ್ನ ಪಾತ್ರದ ಅಂತ್ಯ ನನಗಿಷ್ಟವಿಲ್ಲದ ಇನ್ನೊಂದು ಬದುಕಿನೊಂದಿಗೆ ಬೆಸೆದುಕೊಳ್ಳಬೇಕಿದೆಯೋ ಅರ್ಥವಾಗ್ತಿಲ್ಲ.
ಈ city lifeಲ್ಲಿ ಹಣವೊಂದೇನ ಮುಖ್ಯ?
ಪ್ರೀತಿ ಎಂಬ ಪದಕ್ಕೆ ಅರ್ಥನೇ ಇಲ್ವಾ?
ಹಾಗಾದ್ರೆ ನಮ್ಮಿಬ್ಬರ ಮಧ್ಯೆ ಬೆಸೆದಿರುವ ಈ ಬೆಸುಗೆಗೆ ಅರ್ಥ ಎನು?
ಅದಕ್ಕೆ ಅರ್ಥವೇ ಇಲ್ಲವೆನ್ನುವುದಾದರೆ ಅನಾಮಿಕವಾಗಿ Trainಲ್ಲಿ ಪರಿಚಯವಾದ ನಮ್ಮ ಪ್ರೀತಿ ಮುಂದೆ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುವಂತ ನಿರ್ಧಾರ ತೆಗೆದುಕೊಂಡು ಜೀವನದ ಈ ಬಹುಮುಖ್ಯ ಘಟ್ಟ ತಲುಪುವಂತೆ ಮಾಡಿದ್ದು ಬರೀ ಆಕರ್ಷಣೆಯಷ್ಟೇನಾ?’
 
ಕೌಶಿಕ್ ನ ಕೈಹಿಡಿದುಕೊಂಡ ರಶ್ಮಿ..
’ ನನ್ಗೇಕೋ ಭಯ ಆಗ್ತಿದೆ’
 
ಹಿಡಿದ ಕೈಗಳೊಂದಿಗೆ ರಶ್ಮಿಯನ್ನು ಸೆಳೆಯುತ್ತಾ ಕೌಶಿಕ್
’ ಭಯಪಡೋ ಅವಶ್ಯಕತೆ ಇಲ್ಲ. ನಾವು director ಜೊತೆ ಮಾತಾಡೋಣ.
. ನಮಗಾಗಿ ಅಲ್ಲದಿದ್ದರೂ...(.ಮೌನ..)
ನಾವು ನಮ್ಮ ಪಾತ್ರಗಳನ್ನು ನಾವು ಬಯಸಿದಂತೆ ಅಂತ್ಯಗೊಳಿಸೋಣ..
ಅದಕ್ಕೆ ಒಪ್ಪದಿದ್ದಲ್ಲಿ ಪಾತ್ರವನ್ನೇ ನಮಗೆ ಬೇಕಾದಂತೆ ಬದಲಾಯಿಸಲು ಪ್ರಯತ್ನಿಸೋಣ’ಅಂತಂದು ರಶ್ಮಿಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ.
ಅವನ ಬಿಸಿಯಪ್ಪುಗೆಯ ಮಧುರ ನೆರೆಯೊಳಗೆ ಮುಳುಗಿದ ರಶ್ಮಿ ಹಾಗೇ ಮೈಮರೆಯುತ್ತಾಳೆ..
ಆಗ ಹೊಸ ಮೈಲ್ ಬಂತೆಂಬ ಸಂದೇಶ ಕೌಶಿಕ್ ನ ಮೊಬೈಲ್ ಗೆ ಬರುತ್ತದೆ.
ಅದನ್ನು ನೋಡಿದ ಕೌಶಿಕ್ ಲ್ಯಾಪ್ಟಾಪ್ ಓಪನ್ ಮಾಡಿ ಮೈಲ್ ನೋಡುತ್ತಾನೆ .
ಬಾಸ್ ನ ಪರ್ಸನಲ್ ಸೆಕ್ರೆಟ್ರಿ ವಿಡಿಯೋ ಒಂದನ್ನು ಕಳಿಸಿರುತ್ತಾಳೆ..
ಕೌಶಿಕ್ ಲ್ಯಾಪ್ಟಾಪ್ ಓಪನ್ ಮಾಡಿದ್ದನ್ನು ನೋಡಿದ ರಶ್ಮಿ ಅಡುಗೆಮನೆ ಕಡೆಗೆ ಹೋಗುತ್ತಾಳೆ
ಕೌಶಿಕ್ ಲ್ಯಾಪ್ಟಾಪ್ ನ್ನು ಎತ್ತಿಕೊಂಡು ಹಾಗೇ ಬೆಡ್ರೂಮಲ್ಲಿ ಹೋಗಿ ಹಾಸಿಗೆ ಮೇಲೆ ಕೂತು ವಿಡಿಯೋ ಪ್ಲೇ ಮಾಡ್ತಾನೆ.
ಅದರಲ್ಲಿ ಕೌಶಿಕ್ ಮತ್ತು ಬಾಸ್ ಮಾತಾಡ್ತಿರ್ತಾರೆ.
 
(ಮುಂದುವರೆಯುವುದು)