ನನ್ನಿಂದಂತೂ ಸಾಧ್ಯವೇ ಇಲ್ಲ...

ನನ್ನಿಂದಂತೂ ಸಾಧ್ಯವೇ ಇಲ್ಲ...

ಕವನ

 

ಈ ದಾರಿ ತುಂಬಾ ಉದ್ದವಿರುವಂತಿದೆ
ಎಷ್ಟು ನಡೆದರೂ ಹೆಜ್ಜೆಗಳೇ ಮೂಡುತ್ತಿಲ್ಲ
ನಡೆದು ನಡೆದು ದಣಿದ ಪಾದಗಳು
ಬಿಳಿಚಿಕೊಂಡ ಮುಖ 
ಸುಕ್ಕುಗಟ್ಟಿದೆ ಚರ್ಮ ಬಾಗಿದ ಬೆನ್ನನ್ನೊತ್ತು
ನನ್ನಿಂದಂತೂ ನಡೆಯಲು ಸಾಧ್ಯವೇ ಇಲ್ಲ..

ಹಿಂದೆ ತಿರುಗಿ ನೋಡುತ್ತೇನೆ
ಆಸರೆಯ ಕೈಬೆರಳುಗಳೇನಾದರೂ
ಸ್ವರ್ಶಿಸಬಹುದೇ ಎಂದು..

ಕೆಲವು ಬೆನ್ನುಗಳು ಮಾತಾಡುತ್ತಿವೆ
ಮುಸಿ ಮುಸಿ ನಗುತ್ತ
“ನಿನ್ನ ಚಿನ್ನದ ಚಮಚ”
“ಬೆಳ್ಳಿಯ ತಟ್ಟೆ”
“ಹೊನ್ನಿನ ಮಂಚ”
ಯಾವುದೂ ನಿನ್ನ ಜೊತೆಗೆ ಬರಲ್ಲಿಲ್ಲವೇನು ?..

ನನ್ನ ಬಿಟ್ಟು ಬೇರಾರು 
ನನ್ನ ಹಿಂಬಾಲಿಸಲಿಲ್ಲ.
ಯಾವ ಭೋಗ ಭಾಗ್ಯವೂ
ನನ್ನ ದಾರಿಯನು ಸುಗಮಗೊಳಿಸಲಿಲ್ಲ
ಮನಸ್ಸು ಮಂಕಾಗುತ್ತಿದೆ
ದಾರಿ ಮಂಜಾಗುತ್ತಿದೆ
ಪಾದಗಳು ಸೋಲುತ್ತಿವೆ..

ಈ ದಾರಿ ತುಂಬಾ ಉದ್ದವಿದೆ
ನನ್ನಿಂದಂತೂ ಪೂರ್ಣಗೊಳಿಸಲು ಸಾಧ್ಯವೇ ಇಲ್ಲ
ಅಗೋ ಅ ಆಳವಾದ ಗುಣಿಯಲ್ಲಾದರೂ
ಮಲಗಿ ವಿಶ್ರಾಂತಿ ಪಡೆಯಲೆತ್ನಿಸುತ್ತೇನೆ
ಮುಂದೆ ಒಂದೆಜ್ಜೆಯಿಡುವುದಕ್ಕೂ ನನ್ನಿಂದ ಸಾಧ್ಯವೇ ಇಲ್ಲ..

                                                                                             ವಸಂತ್

Comments