ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
ಪೀಟರ್ ಪುಸ್ತಕದ ಅಂಗಡಿಗೆ ಬಂದು, "ಜ್ಞಾಪಕ ಶಕ್ತಿ ಹೆಚ್ಚಿಸುವುದು ಹೇಗೆ" ಎಂಬ ಪುಸ್ತಕ ಇದೆಯಾ ಎಂದು ಕೇಳುತ್ತಾನೆ,
ಅಂಗಡಿಯವ ಆ ಪುಸ್ತಕ ಕೊಟ್ಟು ೧೨೦ ರೂ ತೆಗೆದುಕೊಳ್ಳುತ್ತಾನೆ,
ಪೀಟರ್ ಇನ್ನೇನು ಪುಸ್ತಕ ತೆಗೆದುಕೊಂಡು ಹೊರಡುವ ಹೊತ್ತಿಗೆ ಅಂಗಡಿಯವ ಕೇಳುತ್ತಾನೆ
ಓದದೆ ಇದ್ದ ಮೇಲೆ ತಮಗೇಕೆ ಈ ಪುಸ್ತಕ?
ಪೀಟರ್ ಆಶ್ಚರ್ಯದಿಂದ 'ಓದುವುದಿಲ್ಲವೇ, ನಿನಗೆ ಯಾರು ಹೇಳಿದ್ದು?
ಅಲ್ಲ ಈ ಮುಂಚೆ ನಾಲ್ಕು ಬಾರಿ ಇದೆ ಪುಸ್ತಕವನ್ನು ತೆಗೆದುಕೊಂಡು ಹೋಗಿದ್ದೀರಾ ಪುನಃ ಕೊಳ್ಳುತ್ತಿದ್ದೀರಲ್ಲ ಅದಕ್ಕೆ ಕೇಳಿದೆ ಅಷ್ಟೇ ಎಂದ..
---------------------------------------------------------------------------------------------------------------------------------------------------------
ಏನಪ್ಪಾ ಪೀಟರ್ ಇನ್ನೂ ಆಫೀಸ್ ಅಲ್ಲೇ ಇದ್ದೀಯ, ಹೊಸದಾಗಿ ಮದುವೆ ಆಗಿದ್ದೀಯ ಮನೆಗೆ ಹೋಗುವುದಿಲ್ಲವೇ ಎಂದು ಕೇಳಿದ ಬಾಸ್
ಅದಕ್ಕೆ ಪೀಟರ್ ' ಸರ್ ನನ್ನ ಹೆಂಡತಿ ಕೂಡ ಇನ್ನೂ ಆಫೀಸ್ ಅಲ್ಲೇ ಇದ್ದಾಳೆ, ನಮ್ಮಿಬ್ಬರಲ್ಲಿ ಯಾರು ಮೊದಲು ಮನೆಗೆ ಹೋಗುವರೋ ಅವರು ಅಡಿಗೆ ಮಾಡಬೇಕು ಎಂದ'
----------------------------------------------------------------------------------------------------------------------------------------------------------
ಪೀಟರ್ ಏನಿದು ನಿಮ್ಮ ಕಥೆಯಲ್ಲಿ ಎಲ್ಲಿ ನೋಡಿದರೂ ಕಾರು ತಿರುಗಿತು, ಸ್ಕೂಟರ್ ತಿರುಗಿತು, ಬಸ್ಸು ತಿರುಗಿತು, ಅವನು ತಿರುಗಿದ , ಅವಳು ತಿರುಗಿದಳು ಎಂದು ಇದೆಯಲ್ಲ ಏನಿದು ಎಂದು ಕೇಳಿದ ಎಡಿಟರ್
ಅದಕ್ಕೆ ಪೀಟರ್ ' ಸರ್ ನೀವೇ ಹೇಳಿದಿರಲ್ಲ ಕಥೆಯಲ್ಲಿ ತಿರುವುಗಳಿರಬೇಕು ಆಗಲೇ ಜನರು ಓದುವುದು ಎಂದು' ಎಂದ.
----------------------------------------------------------------------------------------------------------------------------------------------------------
ಜಾನ್ - ನಾನು ಪ್ರತಿದಿನ ಗಡ್ಡವನ್ನು ಶೇವ್ ಮಾಡಿಕೊಳ್ಳುತ್ತೇನೆ, ನೀನು
ಪೀಟರ್ - ನಾನು ದಿನಕ್ಕೆ ಒಂದು ೫೦-೬೦ ಸಲ ಶೇವ್ ಮಾಡುತ್ತೇನೆ
ಜಾನ್ - ೫೦-೬೦ ಸಲ ನಿನಗೇನೂ ಹುಚ್ಚಾ?
ಪೀಟರ್ - ಇಲ್ಲ ಕಣೋ ನಾನು ಇತ್ತೀಚೆಗಷ್ಟೇ ಒಂದು ಸಲೂನ್ ಓಪನ್ ಮಾಡಿದೆ.
----------------------------------------------------------------------------------------------------------------------------------------------------------
ಡಾಕ್ಟರ.. ಡಾಕ್ಟರ..ಡಾಕ್ಟರ..ಎಂದು ಅರ್ಜೆಂಟಾಗಿ ಓಡಿಬಂದ ಪೀಟರ್ ಡಾಕ್ಟರ ಬಳಿ ' ಡಾಕ್ಟರ ನಾನು ನಾಳೆ ಸಂಜೆ ಒಳಗಾಗಿ ಇಪ್ಪತ್ತು ಕಿಲೋ ಅಷ್ಟು ದಪ್ಪ ಆಗುವಂತೆ ಯಾವುದಾದರೂ
ಔಷಧಿ ಇದ್ದರೆ ಕೊಡಿ ಎಂದ.
ಡಾಕ್ಟರ ಆಶ್ಚರ್ಯದಿಂದ ಇದೇನಯ್ಯ ಎಲ್ಲರೂ ತೂಕ ತಗ್ಗಿಸಿಕೊಳ್ಳಲು ಔಷಧಿ ಕೇಳಿದರೆ ನೀನು ಹೆಚ್ಚಿಸಿಕೊಳ್ಳಲು ಕೇಳುತ್ತಿದ್ದೀಯಲ್ಲ ಎಂದರು,
ಅದಕ್ಕೆ ಪೀಟರ್ ಅದು ಹಾಗಲ್ಲ ಡಾಕ್ಟರ ನಾಳೆ ಸಂಜೆ ನನ್ನ ಅಭಿಮಾನಿಗಳು ನನಗೆ ಬೆಳ್ಳಿಯ ನಾಣ್ಯಗಳಿಂದ ತುಲಾಭಾರ ಮಾಡುತ್ತಿದ್ದಾರೆ ಅದಕ್ಕೆ ಎಂದ..
----------------------------------------------------------------------------------------------------------------------------------------------------------
ಪೀಟರ್ ತನ್ನ ಮಗನಿಗೆ - ನಾಚಿಕೆ ಆಗಲ್ವ ನಿಂಗೆ ಪರೀಕ್ಷೆಯಲ್ಲಿ ಫೈಲ್ ಆಗಿದೀಯ, ಅದೇ ಆ ಎದುರುಗಡೆ ಮನೆ ಸ್ಟೆಲ್ಲಾ ನೋಡು ೯೫ % ತಗೊಂಡಿದಾಳೆ ಆ ಸ್ಟೆಲ್ಲಾ ನ ನೋಡಿ
ಬುದ್ಧಿ ಕಲಿ, ಎಷ್ಟು ಒಳ್ಳೆ ಹುಡುಗಿ ಆ ಸ್ಟೆಲ್ಲಾ
ಪೀಟರ್ ನ ಮಗ - ಅಪ್ಪ ಮಾತು ಮಾತಿಗೆ ಸ್ಟೆಲ್ಲಾ ಸ್ಟೆಲ್ಲಾ ಅಂತ ಯಾಕಂತೀಯ, ಆ ಸ್ಟೆಲ್ಲಾನ ನೋಡಿ ನೋಡಿ ನೆ ನಾನು ಫೈಲ್ ಆಗಿದ್ದು.
----------------------------------------------------------------------------------------------------------------------------------------------------------
ಪೀಟರ್ ನ ಹೆಂಡತಿ ತನ್ನ ಸ್ನೇಹಿತೆಗೆ - ಅವರೇನೋ ದೊಡ್ಡ ಆಟಗಾರರೆಂದು ಅವರನ್ನು ಮದುವೆ ಆದರೆ ಮದುವೆ ಆದ ಮೇಲೆ ತಿಳಿಯಿತು
ಸ್ನೇಹಿತೆ - ಯಾಕೆ ಅವರು ಆಟಗಾರರಲ್ಲವೇ?
ಹೆಂಡತಿ - ಆಟಗಾರರೆ, ಹಳ್ಳಿಗಲ್ಲಿ ಬೊಂಬೆಗಳನ್ನು ಆಡಿಸುವವರಂತೆ...
----------------------------------------------------------------------------------------------------------------------------------------------------------
ಆಲಸ್ಯವಾದರೆ ಅಮೃತವೂ ವಿಷವಂತೆ
ನಿಧಾನ ಮಾಡಬೇಡ ಬೇಗ ಪ್ರೀತಿಸು
ಅವಸರವೇ ಅಪಘಾತಕ್ಕೆ ಕಾರಣ
ಆತುರ ಬೇಡ ಯೋಚಿಸಿ ಮದುವೆಯಾಗು
ಅಲ್ಲಲ್ಲಿ ಓದಿದ್ದು, ಅಲ್ಲಲ್ಲಿ ಕೇಳಿದ್ದು
Rating
Comments
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
In reply to ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ by prasannakulkarni
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
In reply to ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ by Chikku123
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
In reply to ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ by raghumuliya
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
In reply to ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ by partha1059
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
In reply to ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ by partha1059
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
In reply to ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ by gopaljsr
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
In reply to ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ by kavinagaraj
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
In reply to ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ by bhalle
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
In reply to ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ by ಗಣೇಶ
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ
ಉ: ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ:ಜಯಂತ್ .ತಿರುವುಗಳು-ಬೊಂಬೆಯಾಟ..??