ಹೊಂಗೆ ಮರವೆ
ಕವನ
****** ಹೊಂಗೆ ಮರವೆ ******
ಮನೆಯಂಗಳದ ಹೊಂಗೆ ಮರವೆ
ನಿನ್ನಡಿಯಲಿ ಬಿಸಿಲ ಮರೆವೆ
ನೀ ತಣ್ಣೆಳಿನ ಸೌಖ್ಯ ತೋರೆ
ನಾ ಅದನು ಸುಖದಿ ಹೀರೆ
ಬಿಸಿಲ ಬವಣೆ ಮರೆವೆನು
ವನದಾರಿಯ ನೆನೆವೆನು.
ಮನೆ ಮುಗಿಲನು ಮೀರಿ ಬೆಳೆದೆ.
ನೆಳಲ ರಾಶಿಯನ್ನೇ ಸುರಿದೆ.
ಮನವ ಹಗುರ ಮಾಡಿ ನಿಂದೆ.
ಮನೆಗೆ ಶಾಂತಿ ಚಿನ್ಹೆ ತಂದೆ.
ಮನೆಯ ಸೊಬಗು ಹೆಚ್ಚಿದೆ.
ಮನವು ನಲಿದು ಕುಣಿದಿದೆ.
ಮನೆಮಹಡಿಯಲಿ ನಾನು ಕುಳಿತೆ
ಕಣ್ಣು ಮುಚ್ಚಿ ನೆರಳ ಜೊತೆ.
ಆ ನೆರಳ ಪರ್ಯಂಕದೊಳು,
ತುಂಬಿ ಬಂದ ತಬೆರಲು,
ಚಿಂತೆಗಳನು ದೂಡಿತು.
ಪ್ರಕ್ಷುಬ್ಧತೆಯ ಕಳೆಯಿತು.
ಎಂಥ ಸೊಗಸು ನಿನ್ನಭಿಮುಖವು
ನಿನ್ನೊಡಲಲಿ ನಲಿವ ಮನವು
ಧನ್ಯ ಧನ್ಯ ಧನ್ಯವು.
ನಿನ್ನಸಿರಿನ ಪ್ರತಿ ಉಸಿರಲು
ನನ್ನ ಉಸಿರು ಬೆರೆಯಲು
ನಾನೇರುವೆ ಸಂತೃಪ್ತಿ ಮುಗಿಲು.
ನಾನು ನೀರು ಹೊಯ್ಧೆ ಅನ್ದು.
ಅದಕೆ ನೆರಳ ದಾನವಿಂದು.
ಸ್ವೀಕರಿಸಿಹೆನು ನಿನ್ನ ಬಳಿಯೆ ನಿಂದು
ನಮ್ಮೀರ್ವರ ಈ ಅವತರಣುವು
ಸ್ನೇಹ ಸಮನ್ವಿತ ಸಾಪೇಕ್ಷವು
ಸುಧೀರ್ಘವಾಗಿ ಮೆರೆಯೆ ಈ ರಮ್ಯ ಸಂಭಂಧವು !!
- ಚಂದ್ರಹಾಸ ( ೨೨-೦೫-೨೦೧೧ )