ಇನ್ನೊಂದ್ ಸ್ವಲ್ಪ ನಗುತ್ತೀರ?

ಇನ್ನೊಂದ್ ಸ್ವಲ್ಪ ನಗುತ್ತೀರ?

_____________________________________________________________________________________________________________________

ಜಡ್ಜ್ : ಪದೇ ಪದೇ ಕೋರ್ಟಿಗೆ ಬರುತ್ತೀಯಲ್ಲ ನಿನಗೆ ನಾಚಿಕೆ ಇಲ್ಲವೇ?

ಪೀಟರ್ : ನಾನಾದರೂ ಪರವಾಗಿಲ್ಲ ಅವಾಗವಾಗ ಬರುತ್ತೀನಿ, ನೀವು ಪ್ರತಿದಿನ ಬರುತ್ತೀರಾ ನಿಮಗೆ ಇಲ್ಲದ ನಾಚಿಕೆ ನನಗೇಕೆ..

_____________________________________________________________________________________________________________________

ಪೀಟರ್ ದಾರಿಯಲಿ ಹೋಗುತ್ತಿದ್ದ ದೊಡ್ಡ ಮನುಷ್ಯನನ್ನು ' ಸರ್ ಕಟ್ಟಿಂಗ್ ಸಲೂನ್ ಗೆ ಹೇಗೆ ಹೋಗಬೇಕು' ಎಂದ,

ಆತ : ತಲೆಕೂದಲು, ಗಡ್ಡ ಚೆನ್ನಾಗಿ ಬೆಳೆಸಿಕೊಂಡು ಹೋಗಬೇಕು ಎಂದ..

_____________________________________________________________________________________________________________________

ಹೆಂಡತಿ : ರೀ ನೋಡಿದ್ರಾ ನನ್ನ ಉಪವಾಸದ ಫಲಿತವಾಗಿ ಈ ಬಾರಿ ಮನೆಯಲ್ಲಿ ಇನ್ನೂರು ರೂಗಳಷ್ಟು ಅಕ್ಕಿ ಉಳಿಯಿತು

ಗಂಡ : ಅದೇನೋ ಸರಿ, ಆದರೆ ಹಣ್ಣಿನ ಅಂಗಡಿಯವನಿಗೆ ಇನ್ನೂ ಸಾವಿರ ರೂ ಬಾಕಿ ಇದೆ.

____________________________________________________________________________________________________________________

ಪೀಟರ್ ತನ್ನ ಸ್ನೇಹಿತನಿಗೆ ಹೇಳುತ್ತಿದ್ದ, ನಾನೊಂದು ಶಪಥ ಮಾಡಿದ್ದೇನೆ ಕುಡಿತ, ತಂಬಾಕು ಚಟ ಇರುವವರನ್ನು ಆ ಚಟದಿಂದ ಬಿಡಿಸಬೇಕು ಎಂದುಕೊಂಡಿದ್ದೇನೆ

ಸ್ನೇಹಿತ : ಇದುವರೆಗೂ ಯಾರಿಗಾದರೂ ಬಿಡಿಸಿದ್ದೀಯ?

ಪೀಟರ್ : ಇದುವರೆಗೂ ೯೯೯ ಜನಕ್ಕೆ ಬಿಡಿಸಿದ್ದೇನೆ..

ಸ್ನೇಹಿತ : ಹಾಗಿದ್ದರೆ ಇನ್ನೊಬ್ಬರಿಗೆ ಬಿಡಿಸು, ೧೦೦೦ ಆಗುತ್ತದೆ..

ಪೀಟರ್ : ಅದೇ ಆಲೋಚಿಸುತ್ತಿದ್ದೇನೆ, ನಾನು ಬಿಡಬೇಕೋ ಬೇಡವೋ ಎಂದು.

____________________________________________________________________________________________________________________

ಏನೋ ಪೀಟರ್ ಒಂದೇ ತೆರನಾದ ಎರಡು ಪುಸ್ತಕ ಇಟ್ಟುಕೊಂಡಿದ್ದೀಯ ಕೈಯಲ್ಲಿ?

ಅದೇನಿಲ್ಲ ಈ ಪುಸ್ತಕ ಓದಿದರೆ ಅರ್ಧ ಪರೀಕ್ಷೆ ಪಾಸ್ ಆದಂತೆ, ಅದಕ್ಕೆ ಎರಡು ಪುಸ್ತಕ ಇಟ್ಟು ಕೊಂಡರೆ ಪೂರ್ತಿ ಪರೀಕ್ಷೆ ಪಾಸ್ ಆಗಬಹುದೆಂದು..

_______________________________________________________________________________________

ಪೀಟರ್ : ಡಾಕ್ಟರ ಈ ಮಧ್ಯೆ ಸರಿಯಾಗಿ ನಿದ್ರೆ ಬರುತ್ತಿಲ್ಲ

ಡಾಕ್ಟರ : ನೋಡಿ ನಿದ್ರೆ ಮಾಡಲು ಪ್ರಶಾಂತವಾದ ವಾತಾವರಣ, ಮೆತ್ತನೆಯ ಹಾಸಿಗೆ, ಒಳ್ಳೆಯ ದಿಂಬು, ಸಣ್ಣನೆ ಉರಿಯುವ ನೀಲಿ ಬಲ್ಬ್, ಕಿಟಕಿಗಳಿಗೆ ಚಂದದ ಕರ್ಟನ್ ಗಳು, ಸುಗಂಧಭರಿತ ಅಗರಬತ್ತಿ ಇದಿಷ್ಟು ಇದ್ದಾರೆ ನಿದ್ರೆ ತಾನೇ ತಾನಾಗಿ ಬರುತ್ತದೆ.

ಪೀಟರ್ : ಆದರೆ ಆಫೀಸಿನಲ್ಲಿ ಇದೆಲ್ಲ ವ್ಯವಸ್ತೆ ಎಲ್ಲಿರುತ್ತದೆ ಡಾಕ್ಟರ?

________________________________________________________________________________________

ರೈಲ್ವೆ ಸ್ಟೇಷನ್, ಅಥವಾ ಬಸ್ ಸ್ಟ್ಯಾಂಡ್ ನಲ್ಲಿ ಇಬ್ಬರು ಭಿಕ್ಷೆ ಬೇಡುವರು ಹಾಗೆಯೇ ಇಬ್ಬರು ಸಾಫ್ಟ್ ವೇರ್ ನವರು bheti ಆದರೆ ಕೇಳುವ ಒಂದೇ ಪ್ರಶ್ನೆ ಯಾವುದು?

 

ನಿಂದು ಯಾವ "ಪ್ಲಾಟ್ ಫಾರ್ಮ್"!!!

_________________________________________________________________________________________

ಸ್ಟೆಲ್ಲಾ ...ಸ್ಟೆಲ್ಲಾ..ಅರ್ಜೆಂಟಾಗಿ ನಿಮ್ಮ ತಾಯಿಯನ್ನು ರೂಮಿನೊಳಗೆ ಹೋಗಿ ಬಾಗಿಲು ಹಾಕಿಕೊಳ್ಳಲು ಹೇಳು, ಒಂದು ಗಂಟೆಯವರೆಗೂ ಆಚೆ ಬರಬೇಡ ಎಂದು ಹೇಳು, ನಮ್ಮ ಬಾಸ್ ಬರುತ್ತಿದ್ದರೆ ಎಂದ ಪೀಟರ್..

ಅಲ್ಲಾರಿ ನಿಮ್ಮ ಬಾಸ್ ಬಂದರೆ ನನ್ನ ತಾಯಿ ಯಾಕೆ ಒಳಗೆ ಹೋಗಬೇಕು?

ಅದು ಹಾಗಲ್ವೆ, ನನ್ನ ಅತ್ತೆ ತೀರಿಕೊಂಡರು ಎಂದು ಮೂರು ದಿನದಿಂದ ರಜೆಯಲ್ಲಿದ್ದೇನೆ ಅದಕ್ಕೆ ಎಂದ ಪೀಟರ್..

_______________________________________________________________________________________________________________________

ಡಾಕ್ಟರ ನಾನು ತುಂಬಾ ಬಡವ ನಿಮ್ಮ ಫೀಸ್ ಕಟ್ಟುವಷ್ಟು ಹಣ ನನ್ನಲ್ಲಿಲ್ಲ.. ದಯವಿಟ್ಟು ನನ್ನ ಖಾಯಿಲೆಯನ್ನು ಗುಣ ಮಾಡಿ

ಜೀವಿತಾವಧಿವರೆಗೂ ನಿಮ್ಮ ಕುಟುಂಬದ ಕೆಲಸಗಳನ್ನು ಒಂದು ಪೈಸ ಸಹಾ ಇಲ್ಲದೆ ಮಾಡುತ್ತೇನೆ.

ಡಾಕ್ಟರ - ಸರಿ ಹಾಗೆ ಆಗಲಿ, ಆದರೆ ನೀನೇನು ಕೆಲಸ ಮಾಡುತ್ತೀಯ?

ಪೀಟರ್ - ಸ್ಮಶಾನದಲ್ಲಿ ಹೆಣ ಸುಡುವ ಕೆಲಸ...

---------------------------------------------------------------------------------------------------------------------------------------------------------------------------------------

 

 

 

Rating
No votes yet

Comments