ಮಳೆ-ಕಾಲದ ತಯಾರಿ
ಅಂದು...................
ಬಿರುಬಿಸಿಲಿಗೆ ಬಿದ್ದಿರುವ
ಹಪ್ಪಳ, ಸಂಡಿಗೆ,ಸಾಸಿವೆ ಜೀರಿಗೆ
'ಬಸವಳಿದ ಅಮ್ಮನ ಮುಖ'ವಂತೆ..!
ಪುಟ್ಟ ಮಗುವಿನ ತುಂಟ ಮಾತು
ಕೈಯಲ್ಲೊಂದು ಹಪ್ಪಳ..
ಅಂಗಳದಲ್ಲಿ ಹನಿಯಲು ಬಿಟ್ಟ
ಕೊಬ್ಬರಿ ಎಣ್ಣೆಯ ಪಾತ್ರೆಯಲ್ಲಿ
ಸೂರ್ಯ ಸತ್ತು ಬಿದ್ದಿದ್ದಾನಂತೆ...!
ಅಪ್ಪ ಬೈಯುತ್ತಾ ತಂದಿಟ್ಟ
ಶೆಟ್ಟರ ಅಂಗಡಿಯ ಹೊಟ್ಟೆಯುಬ್ಬಿಸಿದ
ಮೆಣಸಿನ ಕಾಯಿ ...........
ಕುಡಿದ ನೀರನು ಕಕ್ಕಲು ಛಾವಣಿ ಮೇಲೆ ಮಲಗಿದೆಯಂತೆ !
ಉಪ್ಪಿನ ಮಧ್ಯೆ ಹಿಂಡಿ ಹಿಪ್ಪೆಯಾದ
ಮಾವಿನ ಮಿಡಿ...............
ಮನೆಯಲ್ಲೀಯೇ ಉಪ್ಪಿನ ಕಾಯಿ ತಯಾರಿ..
ಪುಟ್ಟ ಮಗನ ತುಂಟ ಮಾತುಗಳ
" ಹಳೆಯ ಸವಿ ನೆನಪುಗಳು"
ಇಂದು...............
ಕಾಂಕ್ರೀಟ್ ಕಾಡಿನ ಮಧ್ಯೆ ಕಳೆದು ಹೋದ
ಬದುಕನ್ನು ಮೆಲಕಿಸುವ
ತಾಯಿಯೆದುರು.............
ಪೇಟೆಯಿಂದ ಆಗಷ್ಟೇ ಬಂದ ಮಗ
ಲಿಜ್ಜತ್ ಪಾಪಡ್, ಪ್ಯಾರಾಚೂಟ್ ಆಯ್ಲ,
ಎಂ.ಟಿ.ಆರ್. ಉಪ್ಪಿನ ಕಾಯಿ ಪ್ಯಾಕ್ ಗಳನ್ನು
ಹೆಂಡತಿಯ ಕೈಗಿತ್ತು ....ಹುಸಿನಕ್ಕ
ಕಾಲ.....ಕಳೆಯುತ್ತದೆ
ಅಮ್ಮ ಮನದಲ್ಲೆ ನಸು ನಕ್ಕಳು
Comments
ಉ: ಮಳೆ-ಕಾಲದ ತಯಾರಿ
In reply to ಉ: ಮಳೆ-ಕಾಲದ ತಯಾರಿ by Saranga
ಉ: ಮಳೆ-ಕಾಲದ ತಯಾರಿ
ಉ: ಮಳೆ-ಕಾಲದ ತಯಾರಿ
In reply to ಉ: ಮಳೆ-ಕಾಲದ ತಯಾರಿ by Mohan Raj M
ಉ: ಮಳೆ-ಕಾಲದ ತಯಾರಿ
ಉ: ಮಳೆ-ಕಾಲದ ತಯಾರಿ
In reply to ಉ: ಮಳೆ-ಕಾಲದ ತಯಾರಿ by ನಂದೀಶ್ ಬಂಕೇನಹಳ್ಳಿ
ಉ: ಮಳೆ-ಕಾಲದ ತಯಾರಿ