ಜನುಮ ದಿನದ ಶುಭಾಶಯಗಳು..!
ನೀವು ನಿಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತೀರಾ? ಹೇಗೆ ಆಚರಿಸುತ್ತೀರಿ?
ನಾನಿಲ್ಲಿ ದೀಪ ಬೆಳಗಿಸುವ ಅಥವಾ ಆರಿಸುವ ಬಗ್ಗೆ ಮಾತಾಡುತ್ತಿಲ್ಲ, ಅದರ ಬಗ್ಗೆ ಸಾಮಾನ್ಯವಾಗಿ ಎಲ್ಲರೂ ಆಗಾಗ ಮಾತಾಡಿರುತ್ತಾರೆ. ಆದ್ದರಿಂದ ನಾನು, ಅದರ ಅನಂತರದ ಕಾರ್ಯಕ್ರಮ - ಭೋಜನದ ಬಗ್ಗೆ ಮಾತಾಡುತ್ತಿದ್ದೇನೆ. (ಊಟದ ಬಗ್ಗೆಯೇ ಯೋಚಿಸುತ್ತಾನೆ, ಹೊಟ್ಟೆಬಾಕ ಅಂದುಕೊಳ್ಳುತ್ತಿದ್ದೀರಾ....)!
ಸರಿ, ಏನು ಅಡುಗೆ ಮಾಡಿಸುತ್ತೀರಿ? ಚಿಕನ್, ಮಟನ್, ಫಿಶ್... ಬಾಯಲ್ಲಿ ನೀರೂರುತ್ತಿದೆಯೇ! ಸ್ವಲ್ಪ ಯೋಚಿಸಿ, ಹುಟ್ಟಿದ ದಿನ ಅನ್ನೋದು ಎಷ್ಟೊಂದು ಸಂತೋಷದ ದಿನ! ಆ ದಿನವನ್ನಾದರೂ ಒಳ್ಳೆಯ ತರಕಾರಿ ಊಟ ಮತ್ತು ಸಿಹಿ ತಿನಿಸುಗಳೊಂದಿಗೆ ಸಂಭ್ರಮಿಸಬಾರದೇ? ಆ ಒಂದು ದಿನವಾದರೂ ಪ್ರಾಣಿ ಹಿಂಸೆ ತೊರೆದು ಎಲ್ಲೆಲ್ಲೂ ಖುಷಿಯನ್ನು ಹಂಚಬಾರದೇ?
ಮದುವೆ ಮತ್ತು ಹಬ್ಬಗಳ ದಿನ ಸಾಮಾನ್ಯವಾಗಿ ಎಲ್ಲರೂ ಮಾಂಸಾಹಾರ ತೊರೆಯುತ್ತಾರೆ, ಜನುಮ ದಿನವನ್ನೂ "ಹುಟ್ಟು ಹಬ್ಬ" ಎಂದೇ ಆಚರಿಸುವುದರಿಂದ ಆ ದಿನವೂ ಹಬ್ಬದ ಸಂಭ್ರಮವೇ ಇರಲಿ ಎಂದು ಆಶಿಸೋಣವೇ?
Rating
Comments
ಉ: ಜನುಮ ದಿನದ ಶುಭಾಶಯಗಳು..!
In reply to ಉ: ಜನುಮ ದಿನದ ಶುಭಾಶಯಗಳು..! by kavinagaraj
ಉ: ಜನುಮ ದಿನದ ಶುಭಾಶಯಗಳು..!
ಉ: ಜನುಮ ದಿನದ ಶುಭಾಶಯಗಳು..!
In reply to ಉ: ಜನುಮ ದಿನದ ಶುಭಾಶಯಗಳು..! by ಭಾಗ್ವತ
ಉ: ಜನುಮ ದಿನದ ಶುಭಾಶಯಗಳು..!