ಭಾರತವೆಂಬ ಮೂಱಕ್ಷರ
ಭಾರತವೆಂಬ ಮೂಱಕ್ಷರಂಗಳ ಕುಱಿತು ಅದೇನನ್ನು ನೀ ಬಲ್ಲೆ |
ಬಲುಹಿನ ಸಿಂಧೂ ದ್ರಾವಿಡ ಸಂಸ್ಕೃತಿ ಅಱಿಯದವಂಗೆ ಬಱೇ ಬಲ್ಲೆ ||
ಆರ್ಯ ದ್ರಾವಿಡ ವೇಸರ ನಾಗರ ಸಕಲದಱ ಸಂಗಮವಿದುವೇ |
ಲಲಿತ ಕಲೆಗಳ ಕಾವ್ಯ-ಸಂಗೀತದ ತವರೂರಿದು ಸಂಶಯವಿದೆಯೇ ||
ಸಾವಿರ ಭಾಷೆ ಸಾವಿರ ಪಂಥವೂ ಸಾಗರದಂತೆ ಸಮಾಹಿತವೂ |
ತತ್ತ್ವವಿಜ್ಞಾನದ ಜೀವಿತ ಕಲೆಗಳ ಆಗರದಂತಿಹ ಲಿಖಿತಗಳೂ ||
ವಾಸ್ತುವಿದ್ಯೆ ರಸ-ರಾಜತಂತ್ರವ ಕಲಿಸುವ ಹಲ ಬಗೆಯ ಗ್ರಂಥಗಳೂ |
ನಾಟ್ಯಶಾಸ್ತ್ರದ ಆಯುರ್ ವಿಜ್ಞಾನದ ಬೆಣಚ್ಚನ್ನು ಬೀರುವ ದೊಂದಿಗಳೂ ||
ಭಾಷೆಗಳೊಳ್ ಅತಿ ಶ್ರೇಷ್ಠವದೆನಿಸಿದ ಸಂಸ್ಕೃತಕ್ಕೂ ಜನ್ಮಸ್ಥಾನವಿದು |
ಮಿಗಿಲುಗಳೊಳ್ ಬಲು ಮಿಗಿಲು ತಾನೆನಿಸಿದ ಕನ್ನಡಕ್ಕೂ ಇದು ತಾಯ್ನಾಡು ||
Rating
Comments
ಉ: ಭಾರತವೆಂಬ ಮೂರಕ್ಷರ
ಉ: ಭಾರತವೆಂಬ ಮೂರಕ್ಷರ
ಉ: ಭಾರತವೆಂಬ ಮೂರಕ್ಷರ
ಉ: ಭಾರತವೆಂಬ ಮೂರಕ್ಷರ
ಉ: ಭಾರತವೆಂಬ ಮೂಱಕ್ಷರ