ಬದುಕು-ಬಯಲುಗಳ ನಡುವೆ
ಕವನ
ಬದುಕು-ಬಯಲುಗಳ ನಡುವೆ
ಬದುಕು-ಬಯಲುಗಳ ನಡುವೆ ಬಾಗಿಲು
ಅತ್ತ ಸರಿದರೆ ಬಯಲು
ಇತ್ತ ಸರಿದರೆ ಬಾಗಿಲು
ಇದೆಂಥ ಮಾಯೆ ಸೆಳೆತ
ಒಳ ಬರುವುದೋ... ಹೊರ ಹೋಗುವುದೋ....!!
ಬಾಗಿಲು ತೆರೆದಿದೆಯೋ!? ಮುಚ್ಚಿದೆಯೋ!?
ತೆರೆದದ್ದೆಂದರೆ
ಒಳ ಬರಲೋ ಹೊರ ಹೋಗಲೋ
ಮುಚ್ಚಿದ್ದೆಂದರೆ
ಒಳ ಬಾರದಂತೆಯೋ ಹೊರ ಹೋಗದಂತೆಯೋ
ಆಹಾ ವಿಧಿಯೆ!
ಈ ಬಾಗಿಲೆಂದರೆ ಏನು?
ಅರ್ಥ ಹುಡುಕುತ್ತಾ ಹೊಸ್ತಿಲಲ್ಲೇ ನಿಂತಿರುವೆ
ಮೂರು ದಿನದ ಬದುಕಿಗೋ
ಮುಕ್ತಿ ಹಾದಿಯ ಬಯಲಿಗೋ
ಒಯ್ದತ್ತ ಒಯ್ಯಿ ಪ್ರಭುವೆ ಶರಣಾಗಿರುವೆ
Comments
ಉ: ಬದುಕು-ಬಯಲುಗಳ ನಡುವೆ
ಉ: ಬದುಕು-ಬಯಲುಗಳ ನಡುವೆ
ಉ: ಬದುಕು-ಬಯಲುಗಳ ನಡುವೆ
ಉ: ಬದುಕು-ಬಯಲುಗಳ ನಡುವೆ
ಉ: ಬದುಕು-ಬಯಲುಗಳ ನಡುವೆ