ಕವಿಯ ಹುಚ್ಚುತನ

ಕವಿಯ ಹುಚ್ಚುತನ

ಕವನ

ದೃಷ್ಟಿ ಹರಿಯುವುದು ಎಲ್ಲೆಡೆಗೆ

ಹೇಗೆಂದರೆ ಹಾಗೆ,

ಶಾಂತವಾಗಿ ಚಲಿಸುವನು ಬಾಗಿಲನು ತೆರೆದರೆ

ಒಡೆದು ನುಗ್ಗುವನು ತೆರೆಯದಿದ್ದರೆ

ಅವನ ಸ್ವಭಾವವೇ ಹಾಗೆ.


 

ನೀವು,

ಎಲ್ಲೆಂದರಲ್ಲಿ ಬಿಟ್ಟು ಹೋಗುತಿರುವ

ನಿಮ್ಮ ತನಗಳನು ಹೊತ್ತು ತಂದು

ಎಸೆಯುವನು ಪುನಃ ಪುನಃ

ನಿಮ್ಮ ಮನಸಿನೊಳಗೆ.


 

ಶ್ಮಶಾನವಾಗಿರುವ ಬದುಕಿನಲಿ

ಮರುಗುವನು ನಲುಗುತಿರುವ ಜೀವಗಳಿಗೆ

ಕವಿತೆಗಳನು ಚೆಲ್ಲುವನು

ಉರಿವ ಮನಸುಗಳ ಮೇಲೆ-

ಸಾಂತ್ವನ ಹೇಳುವ ಸಲುವಾಗಿ


 

ಹೂತು ಹೋಗಿರುವ ಮಾನವೀಯತೆಯನು

ಹೆಕ್ಕಿಯಿಡುವನು ಹೇಗಿದೆಯೋ ಹಾಗೆಯೇ,

ಅವನ ಈ ಹುಚ್ಚು ತನವೆಲ್ಲ

ಬದುಕಿನ ರಹಸ್ಯದ ಕಡೆಗೆ,

ಮರೆಮಾಚಿದ ಸತ್ಯದೆಡೆಗೆ.


 

 

Comments