ನಮ್ಮ ಶಿಕ್ಷಣದ ಗುಣಮಟ್ಟ

ನಮ್ಮ ಶಿಕ್ಷಣದ ಗುಣಮಟ್ಟ

ಪೀಯೂಸೀ ಫಲಿತಾಂಶ ಬಂದು ನಮ್ಮ ಮಕ್ಕಳ ಕಳಪೆ ಪ್ರದರ್ಶನ ಮತ್ತು ಕಳಪೆ ಪ್ರದರ್ಶನದ ಕಾರಣ ಉಂಟಾದ ಆತ್ಮಹತ್ಯೆಗಳ ಕುರಿತು ಒಬ್ಬರು ಇದೇ ತಾಣವೊಂದರಲ್ಲಿ ಚರ್ಚೆ ಶುರುಮಾಡಿದ್ದರು. ಅದಕ್ಕೆ ಬಂದ ಪ್ರತಿಕ್ರಿಯೆಗಳ “ಪ್ರಮಾಣ” ನೋಡಿದಾಗ ನಮಗಿರುವ ಈ ವಿಷಯದಲ್ಲಿ ನಮಗಿರುವ ಆಸಕ್ತಿಯ ಆಳ ತಿಳಿಯುತ್ತದೆ.

ನಮ್ಮ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆ ಬಗ್ಗೆ ಪ್ರತೀ ವರ್ಷ ಫಲಿತಾಂಶ ಗಳು ಬಂದಾಗ ಮಾತ್ರ ಮಾತನಾಡುವುದರಿಂದ ಯಾವುದೇ ಪ್ರಯೋಜನ ವಿಲ್ಲ. ನಮ್ಮ educator ಗಳು ಯಾವಾಗ ಶಿಕ್ಷಣದಲ್ಲಿ ನಾವೀನ್ಯತೆಯನ್ನು, ಕ್ರಾಂತಿಕಾರಿ ಮಾರ್ಪಾಡುಗಳನ್ನು ಮಾಡಲು ಆಸಕ್ತಿ, ಆಸ್ಥೆ ತೋರಿಸುವುದಿಲ್ಲವೋ ಅಲ್ಲಿಯವರೆಗೆ ಈ ವಿಷಯದ ಕುರಿತು ಬರೀ ಮಾತನಾಡುತ್ತಾ, ಚರ್ಚಿಸುತ್ತಾ ಕಾಲಹರಣ ಮಾಡಬೇಕಾಗುತ್ತದೆ. ಅವರುಗಳ ಉತ್ಸಾಹ ಎಲ್ಲಾ ಇರುವುದು ಸಂದು ಹೋದ ಚರಿತ್ರೆಯನ್ನು ಕೆದಕಿ ಯಾರೂ ನೋಡಿರದ ಕೇಳಿರದ ವಿಷಯಗಳ ಬಗ್ಗೆ “‘some’ಶೋಧನೆ” ನಡೆಸಿ ತೋಚಿದ ರೀತಿ ತಿರುಚಿ ಬರೆದು ತೃಪ್ತರಾಗೋದು. ಅಲ್ಲಿಗೆ ಸೀಮಿತ ಅವರುಗಳ ಕ್ರಿಯಾಶೀಲತೆ. ಇಂಥವರಿಂದ ಶಿಕ್ಷಣದ ಮಟ್ಟ ಸುಧಾರಿಸುವ ಕನಸು ಬೇರೆ ನಮಗೆ.   

ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ಕಾರಣ ಪ್ರೌಢರಲ್ಲದ ನಮ್ಮ ಎಳೆಯರು ಆತ್ಮಹತ್ಯೆ ಮಾಡಿ ಕೊಂಡಾಗ ನಮಗೆ ಅನುಕಂಪ ತೋರಲೇಬೇಕು. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗುವ ವ್ಯವಸ್ಥೆಯನ್ನು ಸರಿಪಡಿಸುವತ್ತ ಸಮಾಜ ಆಸಕ್ತಿ ವಹಿಸಬೇಕು. ನಮ್ಮ ಶಿಕ್ಷಣದ ಮಟ್ಟ ಮತ್ತು ಅದು ತರುತ್ತಿರುವ ಫಲಿತಾಂಶದ ಮಟ್ಟ ಮಾತ್ರ ನೋಡಿದರೆ ಸಾಲದು, ಶಿಕ್ಷಕರ ಮಟ್ಟ ಸಹ ಸ್ವಲ್ಪ ನೋಡಿ. ಶಿಕ್ಷಕರಾಗಲು ಎಷ್ಟು ಜನ ಬಯಸುತ್ತಿದ್ದಾರೆ? ಎಲ್ಲರ ಓಟ, ಇಂಜಿನಿಯರಿಂಗ್, ಮೆಡಿಸಿನ್, ಇನ್ಫೋ ಟೆಕ್ ಕಡೆಯೇ. ಏಕೆಂದರೆ ಹಣ ಇರುವುದು ಅಲ್ಲಿಯೇ. ಶಿಕ್ಷಕ ವೃತ್ತಿ ನಮ್ಮ ವ್ಯವಸ್ಥೆಯಲ್ಲಿ ಮತ್ತು ನಮ್ಮ ಸಮಾಜದಲ್ಲಿ glamorous ಅಲ್ಲ. prestigious ಅಲ್ಲ. ಕೈತುಂಬಾ ಸಂಬಳ ಸಹ ತಂದು ಕೊಡೋಲ್ಲ. ಪರಿಸ್ಥಿತಿ ಹೀಗಿರುವಾಗ ಶಿಕ್ಷಣದ ಗುಣಮಟ್ಟ ಸುಧಾರಿಸುವುದು ಕಷ್ಟವೇ. 

ಐರೋಪ್ಯ ದೇಶಗಳನ್ನು ತೆಗೆದುಕೊಂಡಾಗ ಶಿಕ್ಷಣ ಕ್ಷೇತ್ರದಲ್ಲಿ ‘ಫಿನ್ ಲೆಂಡ್’ ದೇಶದವರು ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಫಿನ್ ಲೆಂಡ್ ದೇಶದೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುತ್ತಿರುವ ಇನ್ನೆರಡು ದೇಶಗಳೆಂದರೆ ಸಿಂಗಪೂರ್ ಮತ್ತು ದಕ್ಷಿಣ ಕೊರಿಯಾ. ಶಿಕ್ಷಕರ ನೇಮಕಾತಿಯಲ್ಲಿ ಅನುಸರಿಸುವ ನಿಯಮಗಳು, ಮತ್ತು ಭಾವೀ ಶಿಕ್ಷಕರಿಗೆ ಇರಬೇಕಾದ ಅರ್ಹತೆಗಳ ಪರೀಕ್ಷೆಯಲ್ಲಿ ಸಾಮಾನ್ಯ ಪದವೀಧರರು ತೇರ್ಗಡೆ ಯಾಗುವುದು ಈ ದೇಶಗಳಲ್ಲಿ ತುಂಬಾ ಕಷ್ಟ. ನೇಮಕಾತಿಯಲ್ಲಿ ವಶೀಲಿ ಬಾಜಿ ನಡೆಯದೆ ಪ್ರತಿಭೆಗೆ ಮಾತ್ರ ಪುರಸ್ಕಾರ ಸಿಕ್ಕಿ ಅದಕ್ಕೆ ಹೊಂದುವ ವೇತನ ಸಹ ಸಿಕ್ಕಾಗ ಸಹಜವಾಗಿಯೇ ಶಿಕ್ಷಣ ಕ್ಷೇತ್ರ ಆಕರ್ಷಕವಾಗುತ್ತದೆ.   

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.

http://www.independent.co.uk/news/education/schools/are-finnish-schools-the-best-in-the-world-2289083.html

Rating
No votes yet