ನಡೆದಾಡುವ ನೈದಿಲೆ...ಓಡಾಡುವ porn ಮಸಾಲ

ನಡೆದಾಡುವ ನೈದಿಲೆ...ಓಡಾಡುವ porn ಮಸಾಲ

 

cheergirl ಗಳು ನಡೆದಾಡುವ ನೈದಿಲೆ ಅಲ್ಲ, ಓಡಾಡುವ porn ಗಳು. ಈ ಮಾತನ್ನು ಯಾವುದೇ ಸಂಪ್ರದಾಯವಾದಿ ಹೇಳಿದ್ದಲ್ಲ. ಕ್ರಿಕೆಟ್ ಆಟದಲ್ಲಿ ಸಿಕ್ಸರ್ ಗಳು ಸಿಡಿದಾಗ, ವಿಕೆಟ್ ಪತನಗೊಂಡಾಗ ಮಾದಕ ನೃತ್ಯ ಮಾಡಿ ಜನರನ್ನು ಆಟಗಾರರನ್ನು ಹುರಿದುಂಬಿಸಲು ನೇಮಕಗೊಂಡ, ಚಿಯರ್ ಗರ್ಲ್ ವೃತ್ತಿಯನ್ನು ಆರಿಸಿಕೊಂಡ ಹೆಣ್ಣು ಮಗಳ ಅಳಲು, ದುಮ್ಮಾನ ತುಂಬಿದ ಮಾತುಗಳು. ಕ್ರಿಕೆಟ್ ಮ್ಯಾಚ್ ಹೆಸರಿನಲ್ಲಿ ಜೊಳ್ಳು ಸುರಿಸುತ್ತಾ ಟೀವೀ ಪರದೆ ಮುಂದೆ ಕೂತು ಈ ಹುಡುಗಿಯರ ಹಾವಭಾವವನ್ನು ಆಸ್ವಾದಿಸುವ ನಾವು ಎಂದಾದರೂ ಈ ಹೆಣ್ಣುಮಕ್ಕಳ ಅರೆನಗ್ನ ಶೋಷಣೆಯ ಬಗ್ಗೆ ಆಲೋಚಿಸಿದ್ದೇವೆಯೇ? ಅವರುಗಳ ಹಾವ ಭಾವ, curve ಗಳನ್ನು ನೋಡುತ್ತಾ ಮೈಮರೆಯುವ ಉನ್ಮತ್ತ ಮನಸ್ಸು ಈ ಚಿಂತನೆಗೆ ತನ್ನ ಮೆದುಳನ್ನು ತಯಾರು ಮಾಡೀತೇ?  we are like walking porn ಎಂದು ಹೇಳುವ ಈ ಹುಡುಗಿಯ ಮಾತುಗಳು, ನಮ್ಮಲ್ಲಿ ಪ್ರತಿಭಟಿಸುವ ದನಿಯನ್ನು ಹುಟ್ಟು ಹಾಕೀತೇ?

೨೨ ವರ್ಷದ Gabriella Pasqualotto ಹೇಳುತ್ತಾಳೆ, it’s true. At parties, once people are drunk, they get really touchy-freely and misbehave, assuming that we’re easy girls,”- ಹೇಗಿದೆ ನೋಡಿ ಮೇಲಿನ ಆಕೆಯ ಮಾತುಗಳು. ಇಲ್ಲಿ ಒಂದು ಮಾತನ್ನು ನೆನಪಿಡಬೇಕು. ಯಾವಾಗ ಹೆಣ್ಣು ಕನಿಷ್ಠ ಉಡುಗೆ ತೊಡುತ್ತಾಳೋ, ಪ್ರಚೋದಕ ರೀತಿಯಲ್ಲಿ ಆಕೆಯ ಮೈ ಪ್ರದರ್ಶನ ನಡೆಯುವುದೋ, ಹಾವಭಾವ ಪ್ರದರ್ಶನ ಆಗುವುದೋ ಆದರೆ ತಪ್ಪು ಸನ್ನೆಗೆ ಎಡೆಮಾಡಿಕೊಟ್ಟು ಅವಳನ್ನು ಜನ ಸಾರ್ವಜನಿಕ ಉದ್ಯಾನ ಎಂದು ಭಾವಿಸಲು ಆರಂಭಿಸುತ್ತಾರೆ. easy girl ಎಂದು ಹಿಂಬಾಲಿಸುತ್ತಾರೆ. ಹಾಗಾದರೆ ಉಡುಗೆ ತೊಡುಗೆ ಯ ಶಿಷ್ಟಾಚಾರ ಹೆಣ್ಣಿಗೆ ಮಾತ್ರ ಸೀಮಿತವೋ? ಗಂಡು ಹೇಗೆ ಬೇಕಾದರೂ ಹಾಗೆ ವರ್ತಿಸಬಹುದೋ? ಅಲ್ಲ, ಗಂಡೂ ಸಹ ಮಾನವಾಗಿ ತೊಡಲು ಕಲಿಯಬೇಕು. ಆದರೆ ನಿಸರ್ಗದತ್ತವಾಗಿ ಗಂಡು ಹಚ್ಚು visual ಮತ್ತು ಹೆಣ್ಣು more practical ಆದ ಕಾರಣ ಹೆಣ್ಣು ಸ್ವಲ್ಪ ಜಾಗರೂಕಳಾಗಿರುವುದು ಕ್ಷೇಮ. 

ಹೆಣ್ಣು ಮಾನವಾಗಿ ಉಡಬೇಕು ಎಂದು ಹಿರಿಯರು ಹೇಳುತ್ತಿದ್ದರು. ಸಂಜೆಯ ಹೊತ್ತು ಮನೆಯ ಜಗುಲಿಯ ಮೇಲೋ, ಮೆಟ್ಟಿಲುಗಳ ಮೇಲೋ ಕೂತ ಹೆಣ್ಣು ಮಗಳಿಗೆ ತಾಯಿ ಗದರಿಸುವುದಿದೆ, ಕಾಲಿನ ಮೇಲೆ ಲಂಗ ಎಳೆದು ಕೋ ಎಂದು. ದಾರಿ ಹೋಕರಿಗೆ ತನ್ನ ಮಗಳ ಹಾವ ಭಾವ ಯಾವುದೇ ರೀತಿಯ ಕೆಟ್ಟ ನೋಟ ಕ್ಕೆ ಎಡೆ ಮಾಡಿ ಕೊಡಬಾರದು ಎಂದು ತಾಯಿಯಾದವಳ ಕಾಳಜಿ, ಮುತುವರ್ಜಿ. ಈ ಮುತವರ್ಜಿ ಆ ತಾಯಿಗೆ ತನ್ನ ಸಂಸ್ಕಾರ ಕಲಿಸಿರುತ್ತದೆ.   

ಮುಂದುವರೆಯುತ್ತಾ “ಗೇಬ್ರಿಯೆಲಾ” ಹೀಗೆ ಟ್ವೀಟಿಸುತ್ತಾಳೆ, people treat us like ‘pieces of meat’- ಇಲ್ಲದೆ ಏನಂತೆ, ಹೌದು ಚರ್ಮದ ಪ್ರದರ್ಶನ ಹೆಚ್ಚಾದಾಗ ಮೈ ಮನಸ್ಸು ಮಾಂಸ ದ ತುಂಡಿಗಾಗಿ ಹಾತೊರೆಯುವುದು ಸಹಜವೇ.

To the citizens, we are practically like walking porn!.... it is complete voyeurism...the men see your face, then your boobs, your butt, and then your boobs again..ಭಾಷೆಯ ಮರ್ಯಾದೆಯನ್ನು ಬದಿಗಿಟ್ಟು ಬರೆಯಬೇಕಾದೀತೆನ್ನುವ ಆತಂಕದಿಂದ  ಮೇಲಿನದನ್ನು ಭಾಷಾಂತರಿಸಿಲ್ಲ. ತಲೆಯ ಮೇಲೆ ಮೊಳೆ ಹೊಡೆವ ರೀತಿಯಲ್ಲಿಲ್ಲವೇ ಮೇಲಿನ

ಚೀರ್ ಗರ್ಲ್ಸ್ ಇಲ್ಲದೆಯೂ ಕ್ರಿಕೆಟ್ ರಂಜಕ, ಮೋಹಕ. ಇವರಿಲ್ಲದೆಯೂ ಕ್ರಿಕೆಟ್ ಆಟವನ್ನು ಆಸ್ವಾದಿಸ ಬಹುದು. ಒಂದೊಮ್ಮೆ ಆಸ್ವಾದಿಸಿಯೂ ಇದ್ದೇವೆ. ಎಷ್ಟೋ ಜನ ಈ ಚಿಯರ್ ಗರ್ಲ್ ಗಳ ಕಾರಣ ಕ್ರಿಕೆಟ್ ಆಟದ ಬಗ್ಗೆ ಆಸಕ್ತಿ ಹುಟ್ಟಿಸಿ ಕೊಂಡಿದ್ದಾರೆಂದೂ ಕೇಳಿದ್ದೇನೆ.  

ಆದರೆ ದಿನಗಳೆದಂತೆ, ಕಾಲ ಚಕ್ರ ಓಡುತ್ತಿರುವಂತೆ ನಮ್ಮ ಅಭಿರುಚಿಗಳೂ ಬದಲಾಗುತ್ತಿವೆ ಒಳ್ಳೆಯದರಿಂದ ಕೆಡುಕಿನ ಕಡೆಗೆ. ಇಂದು ನಮ್ಮ ಹೆಣ್ಣು ಮಕ್ಕಳು ತಮ್ಮ ಫೇಸ್ ಬುಕ್ ಪ್ರೊಫೈಲ್ ನಲ್ಲಿ “ relationship: its complicated” ಎಂದು ಬರೆಯಲು ಹಿಂದೆ ಮುಂದೆ ನೋಡುತ್ತಿಲ್ಲ. ಈಗ ಎಲ್ಲವೂ ‘ಕೂಲ್’.     

 
Rating
No votes yet

Comments