ಕಟ್ಟುವಾಟ

ಕಟ್ಟುವಾಟ

ಕವನ
ಕಟ್ಟುವಾಟ ಅಂದಿನಿಂದ ಇಂದಿನವರೆಗೂ ನಮ್ಮದು ಕತ್ತಲೆಯ ಹಿಡಿದು ಕಟ್ಟುವ ಆಟ. ಅಂಬೆಗಾಲಿಡುತ್ತಲೇ ಹಂಬಲಿಸಿದೆವು ಬೇಕೇ ಬೇಕು ಬೆಳಕು ನಮಗೆ ಬೇಕು. ಕತ್ತಲೆಯೋ ಮುಸುಕ ಮರೆಯಲ್ಲೇ ನಗುತ್ತಿದೆ. ಭಾಸ್ಕರ ಬೆಳಕು ಬೀರುತ್ತಲೇ ತಸ್ಕರನಾದ. ಎಣ್ಣೆ, ಬತ್ತಿ ಇರುವವರೆಗೆ ಹಚ್ಚಿದ ಹಣತೆ, ಮೇಣ ಕರಗುವವರೆಗೂ ಮೋಂಬತ್ತಿ ಆರದಿರಲಿ ಎಂದು ಉರಿಸಿ ಉರಿದಿದ್ದೇವೆ. ಹಾದಿ ಬೀದಿಗಳಲ್ಲಿ ಬೆಳಕ ಸಾಲ ತಂದಿದ್ದೇವೆ ಕತ್ತಲೆಯ ಬೆನ್ನ ಹಿಂದೆಯೆ ಕಟ್ಟಿಕೊಂಡು ಬೆಳಕು, ಬಯಸುವವನಿಗೆ ಹೇಳುತ್ತಿದೆ ನಾನು ಬಂದ ದಾರಿಯಲಿ ಉದ್ದಕ್ಕೂ ಕತ್ತಲು, ಸುಂಕ ಕೇಳುತ್ತಲೇ ಬಿಡುತ್ತಿದೆ. ತೆತ್ತು ನನ್ನ ಉಳಿಸಿದರೆ, ನಿನಗೆ ಬೇಕು ಎನ್ನುವವರೆಗೆ ನಿನ್ನ ಬಳಿ ಉಳಿಯಬಲ್ಲೆ. ಬಳಿಕ ಇದ್ದೇ ಇರುತ್ತಲ್ಲ ಎಂದೂ ಸವೆಯದ ನನಗೆ ನನ್ನ ಹಾದಿ ನಿನಗೆ ನಿನ್ನ ಹಾದಿ ನಿಜದ ಬೆಳಕು ನಿನಗೆ ಸಿಗುವವರೆಗೆ’.

Comments