ನಿನ್ನ ಹೆಸರೇನು ??
ಕವನ
ರೈಲಿನಲ್ಲಿ ನಾ ಕಂಡೆ ನಿನ್ನನು ಎದುರಿನ ಆಸನದಲಿ
ಕಿಟಕಿಯಲಿ ಪಕ್ಕದಲಿ ನೀ ಕುಳಿತು ಆಚೆ ನೋಡುತಿರಲು
ಹೊರಗಿನಿಂದ ಬೀಸುತ್ತಿದ್ದ ಗಾಳಿಗೆ ನೀ ನಿನ್ನ
ಕೂದಲನ್ನು ಬದಿಗೊತ್ತಿದಾಗ ಕಂಡೆ ನಾ ನಿನ್ನ ವದನವ
ಆ ನಿನ್ನ ಮುದ್ದು ಮುಖವ ಕಂಡ ನನ್ನೊಳಗೆ
ಅರಿಯದ ಸಂತೋಷವೊಂದು ಉಂಟಾಯಿತು..
ನಿನ್ನ ಮಾತನಾಡಿಸುವ ಹಂಬಲದಿಂದ ಕೇಳಿದೆ
ನಿನ್ನ ಹೆಸರೇನೆಂದು? ನೀ ಉತ್ತರಿಸದೆ ಮೌನಿಯಾದೆ..
ಸುತ್ತಲಿದ್ದರೂ ಎಷ್ಟೊಂದು ಜನ, ನಾ ಮತ್ತೆ
ಮತ್ತೆ ಕೇಳಿದೆ ನಿನ್ನ ಹೆಸರೇನೆಂದು?
ಆದರೂ ನೀನ್ಯಾಕೋ ಹೇಳಲಿಲ್ಲ ನಿನ್ನ ಹೆಸರ
ನನ್ನ ಕಂಡರೆ ನಿನಗೆ ಕೋಪವೋ? ಭಯವೋ ?
ನಾ ನಿನ್ನ ಕೈ ಹಿಡಿದು ಮತ್ತೊಮ್ಮೆ ಕೇಳಿದೆ ನಿನ್ನ ಹೆಸರ
ಕೈಯ ಬಿಡಿಸಿಕೊಂಡು ನೀ ಅಳಲು ಶುರು ಮಾಡಿದೆ
ನಾ ಕೈಯಲ್ಲಿದ್ದ ಸಿಹಿಯನ್ನು ನಿನ್ನ ಕೈಯಲ್ಲಿಟ್ಟು ಕೇಳಿದೆ
ನಿನ್ನ ತಾಯಿಯ ಆಂಟೀ ಮಗುವಿನ ಹೆಸರೇನು??
Comments
ಉ: ನಿನ್ನ ಹೆಸರೇನು ??
In reply to ಉ: ನಿನ್ನ ಹೆಸರೇನು ?? by prasannakulkarni
ಉ: ನಿನ್ನ ಹೆಸರೇನು ??
ಉ: ನಿನ್ನ ಹೆಸರೇನು ??
In reply to ಉ: ನಿನ್ನ ಹೆಸರೇನು ?? by siddhkirti
ಉ: ನಿನ್ನ ಹೆಸರೇನು ??