ಬಂಡೀಪುರದ ಪಸಿರ್ಬನಂ

ಬಂಡೀಪುರದ ಪಸಿರ್ಬನಂ

ಕವನ

ಉಂಡವರೇ ಬಲ್ಲರು ಹಳೆಗನ್ನಡದ ಸವಿಯನ್ನು....:-)


ನನ್ನ ಮೊದಲ ಹಳೆಗನ್ನಡ, ನಡುಗನ್ನಡ ( ಮಿಶ್ರಿತ) ಕವನ ಪ್ರಯತ್ನ......


 


----ಬಂಡೀಪುರದ ಪಸಿರ್ಬನಂ----


 


ಬಂಡೀಪುರದ ಪಸಿರ್ಬನವಂ ಸೀಳ್ದ,
ಪೆರ್ದಾರಿಯೊಳ್ ನಾಂ ಪೋಗಲು,
ಮರತೆ ಉಸಿರ್ಗಟ್ಟಿಸುವ ಪಟ್ಟಣಂಗಳ ವಾಹನನೀರಧಿಯುಂ.
ಮರೆತೆ ಮಸ್ತಿಷ್ಕವಂ ಕೆಡಿಪ ಸಂಕೀರ್ಣ ಕಾರ್ಯವಂ.
ಮರೆತೆ ಬಹದಾರಿಯ ದೂರಪಯಣದಾಯಾಸವಂ.


ವನದರಮನೆಯೊಳ್ ಕಾಲಿಡೆ ಪೊರಪೊಣ್ಮಿತೆಲ್ಲೆಡೆ,
ಭೀಮ ಪೆಮ್ಮರಪಡೆಗಳ್ ನಿನ್ದು.
ವೃಕ್ಷಸಾಗರಧಿಂ ಎರ್ದ ತಂಬೆರೆಲ್,
ಬಂದಪ್ಪಳಿಸಿದೆನ್ನ ಕಪೋಲ ತೀರವಂ.
ಪುಲುದಾರಿಯೊಳ್ ಚಿಮ್ಮಿ ಜಿಗಿದ ಪುಲ್ಲೆಹಿಂಡ ಕಂಡು,
ನೂರ್ಮಡಿಸಿಹುದಾನಂದ ಎನ್ನ ಮನದೊಳ್.
ಗಜ ಸಂಸಾರವೊನ್ದು, ಹಾದಿಬಳಿಯೊರ್ನಿಂದು,
ಕೋರಿದೆ ಸುಸ್ವಾಗತಂ ತನ್ನತಿಥಿಗಳಿಗೆ.
ಪೊರ್ಗಿನಲಿ ಗರಿಬಿದಿರ್ಚಿ ನಾಟ್ಯಗೈದಿಹ ಕೇಯೂರವಂ,
ಕಂಡೆನ್ನ ಮನ ಕುಣಿದಿರ್ಪುದದರ ಹೆಜ್ಜೆಗೆ.
ಬಾಂದಳದಿ ಪಾರಡಿಹ ಪೊಣರ್ವಕ್ಕಿಯುಂ ಕಂಡು,
ಮುಗಿಲಿಗೇರುವ ತವಕವುಕ್ಕಿದೆಯೆದೆಯೊಳ್ ಮೆಲ್ಗೆ.


ಬಾನ್ದಾರಿಯೊಳ್ ಮಿಹಿರ ಜಾರಿಹನ್ ಕ್ಷಿತಿಜವಂ ಮುತಿಡಲ್.
ಪೊಂಗದಿರ್ ಧಾರೆಗೆ, ಹೊಂಬಣ್ಣಮುಂ ಪಡೆದು. ತೇಲುತಿದೆ ಬೆಳ್ಮುಗಿಲ್.
ವನಕೇಳಿಯಾದೆನೆಗೆ ದೊರೆತಿಹುದೀ ರೋಮಹರ್ಷಾಪೂರ್ಣ ಬನದರ್ಷನಂ.
ಸುಮನೋಹರ ಸಗ್ಗದೃಷ್ಯವಂ ನೋಡ್ದೆನ್ನಮನಪೊನಲ್
 ಬರದಿ ಸೇರ್ದಿಪುದಾನಂದಸಾಗರವಂ.


                        - ಚಂದ್ರಹಾಸ
 

Comments