ಬಿಳಿಯ ನೆರಳು

ಬಿಳಿಯ ನೆರಳು

ಕವನ

ಇನ್ನೊಮ್ಮೆ ಓದಿ ಟೈಟಲ್ಲನ್ನು
ಮುಂದೆ ಓದುವ ಮುನ್ನ

ಕೆತ್ತಿದರೆ ಸಾಕು ಕಲ್ಲನ್ನು,
ಕೆತ್ತ ಬೇಕಿಲ್ಲ ನೆರಳನ್ನ

ಇನ್ನೊಮ್ಮೆ ಓದಿ ಟೈಟಲ್ಲನ್ನು
ಮುಂದೆ ಓದುವ ಮುನ್ನ

ಭೂಮಿಯ ನೆರಳು ಆ ಇರುಳು,
ಇರುಳಿಗಿಲ್ಲ ಬಿಳಿಯ ನೆರಳು

ಇನ್ನೊಮ್ಮೆ ಓದಿ ಟೈಟಲ್ಲನ್ನು
ಮುಂದೆ ಓದುವ ಮುನ್ನ

ಕಪ್ಪು ಬೆಳಕಿಲ್ಲ ಈ ಜಗದಲಿ
ಬಿಳಿಯ ನೆರಳು ಬೀಳಲು.

Comments