ವಿಶ್ವ ತಂಬಾಕು ರಹಿತ ದಿನ ಮೇ ೩೧ ಇಷ್ಟ-ಕಷ್ಟ

ವಿಶ್ವ ತಂಬಾಕು ರಹಿತ ದಿನ ಮೇ ೩೧ ಇಷ್ಟ-ಕಷ್ಟ

 ವಿಶ್ವ ತಂಬಾಕು ರಹಿತ ದಿನ ಮೇ ೩೧


ಬೀಡಿ ಸಿಗರೇಟು ಸೇದುವವರಿಗೆ ಸೇದಬೇಡಿ ಎಂದರೆ ಸಿಟ್ಟು ಬರಬಹುದು. 
ಗುಟುಕ ಹಾಕುವವರಿಗೆ ಹಾಕಬೇಡಿ ಎಂದರೆ ಗುಟುರು ಹಾಕಬಹುದು. 
ನಮ್ಮ ದುಡ್ಡು, ನಮ್ಮ ಆರೋಗ್ಯ ನಷ್ಟ ಆದರೆ ಇವರಿಗೇನು ಕಷ್ಟ ಎನ್ನಬಹುದು.
ಧೂಮವನ್ನು ಹೊರಗೆ ಬಿಡದೆ ಪಾನ ಮಾಡಿದರೆ,ಗುಟುಕವನ್ನು ಉಗುಳದೆ ನುಂಗಿದರೆ ನಮ್ಮದೇನು ಅಭ್ಯಂತರ ಇಲ್ಲ.
ಆದರೆ ಹಾಗೆ ಮಾಡದೆ ಹೊರಗೆ ಉಗುಳಿ ಪರಿಸರ ಮಾಲಿನ್ಯ ಮಾಡುವುದು ಸರಿ ಅಲ್ಲ ಎನ್ನುವುದು ನನ್ನ ಅಭಿಮತ.
ಇನ್ನು ಗುಟುಕ ಹಾಕಿ ಉಗುಳಲಿಕ್ಕೆ ಇಂತ ಜಾಗ ಅಂತ ಇಲ್ಲ. 
ಎಲ್ಲೆಂದರಲ್ಲಿ ಉಗುಳೋರಿಗೆ ದಂಡ ಹಾಕುವ ಹಾಗಿದ್ದರೆ ಬಹಳಷ್ಟು ಹಣ ಸರಕಾರಕ್ಕೆ ಸೇರುತ್ತಿತ್ತೋ ಏನೊ. 
ಹೇಗಿದೆ ನೊಡಿ ಒಬ್ಬರ ಸಂತೋಷ ಇನ್ನೊಬ್ಬರ ದುಃಖ್ಖಕ್ಕೆ ಕಾರಣ. 
ನಾವು ಕಾಫಿ ಕುಡಿಯಲು ಹೋಟೆಲಿಗೆ ಹೋದರೆ ಕಾಫಿ ಜೊತೆ ಧೂಮಪಾನ ಫ಼್ರಿ. 
ಹೋಟೆಲ್ ಮಾಲಿಕ ಸುಮ್ಮನಿದ್ದರು ನಾವು ಸುಮ್ಮನಿರದೆ ಹೋಟೆಲಿಂದ ಹೊರಗೆ ಕಳಿಸುತ್ತಿದ್ದೆವು.
ಧೂಮಪಾನ ಮಾಡುವವರನ್ನು ನೋಡಿದಾಗಲೆಲ್ಲ ನನಗೆ ಅನ್ನಿಸುತ್ತಿದ್ದುದು ಹೀಗೆ.

ಇಷ್ಟ-ಕಷ್ಟ

ಧೂಮಪಾನ ಸೇವನೆ ಆರೋಗ್ಯಕ್ಕೆ ಹಾನಿಕರ
ಶಾಸನ ವಿಧಿಸಿದೆ ಎಚ್ಚರಿಕೆ.

ಸೇದುವರೇಕೆ ನಿರಂತರ
ಇಲ್ಲವೆ ಸಾವಿನ ಅಂಜಿಕೆ.

ಹೆಚ್ಚಾದರು ಬೀಡಿ ಸಿಗರೇಟಿನ ದರ
ಸುಡುವರೇಕೆ ಇಲ್ಲದೆ ಹಿಂಜರಿಕೆ.

ಉಂಟಾದರೂ ಹೃದಯಾಘಾತ ಕ್ಯಾನ್ಸರ್
ಬಲಿಯಾಗುವರೇಕೆ ಹಾಳು ಚಟಕೆ.

ಹೋದರೆ ಹೋಗಲಿ ಅವರ ಆರೋಗ್ಯ, ಹಣ ಎಂದರೆ
ನುಂಗದೆ ಬಿಡುವರೇಕೆ ಹೊಗೆ ನಮ್ಮ ಮುಖಕೆ.