ಸಂದರ್ಭ ಸಹಿತ ಕುವೆಂಪು ಕವನಗಳ ಸೊಗಸು - 4
ಸರಸ್ವತಿಯನ್ನು ಕುರಿತು ನಾನು ಪಿಹೆಚ್.ಡಿ. ಅಧ್ಯಯನ ಮಾಡುತ್ತಿದ್ದಾಗ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸರಸ್ವತಿಗೆ ಸಂಬಂಧಪಟ್ಟ ಕವಿತೆಗಳ ಹುಡುಕಾಟ ನಡೆಸುತ್ತಿದ್ದೆ. ಡಿ.ವಿ.ಜಿ., ಬೇಂದ್ರೆ, ಕುವೆಂಪು, ಬಿ.ಎಂ.ಶ್ರೀ., ಪು.ತಿ.ನ., ಜಿ.ಎಸ್.ಎಸ್. ಮೊದಲಾದ ಕವಿಗಳೆಲ್ಲರೂ ಸರಸ್ವತಿಯ ಬಗ್ಗೆ ಬರೆದಿದ್ದಾರೆ. ನಮ್ಮ ಮೇಷ್ಟ್ರು ಕೆ.ಆರ್.ಜಿ. ಆಗ ನನಗೆ ಕುವೆಂಪು ಅವರ ’ನಾಟ್ಯ ಸರಸ್ವತಿಗೆ’ ಎಂಬ ಕವಿತೆಯ ಬಗ್ಗೆ ಹೇಳಿಅದನ್ನು ಪರಿಶೀಲಿಸುವಂತೆ ಸೂಚಿಸಿದರು. ಅದು ನಾಟ್ಯಸರಸ್ವತಿಯ ವಿಗ್ರಹವೊಂದರ ಪ್ರೇರಣೆಯಿಂದಾಗಿ ರಚಿತವಾಗಿರುವ ಕವಿತೆ. “ನಾಗಮಂಗಲದ ಮಹಾಜನರು ಅರ್ಪಿಸಿಸಿರುವ ನಾಟ್ಯ ಸರಸ್ವತಿಯ ದಿವ್ಯಸಂದರವಾದ ಪಂಚಲೋಹ ವಿಗ್ರಹವನ್ನು ನಿರ್ದೇಶಿಸಿ, ದೇವೀ ಮೂರ್ತಿಯನ್ನು ನಿರ್ಮಿಸಿದ ಅಜ್ಞಾತ ಶಿಲ್ಪಿಗೆ ಕವಿಯ ಅನಂತ ಕೃತಜ್ಞತೆಯ ಫಲರೂಪವಾಗಿ.” ಎಂದು ಕವಿತೆಗೆ ಅಡಿ ಟಿಪ್ಪಣಿ ನೀಡಲಾಗಿದೆ. ಈ ಕವಿತೆ ಸೃಷ್ಟಿಯಾದ ಹಿನ್ನೆಲೆಯನ್ನು ಶ್ರೀಮತಿ ತಾರಿಣಿಯವರು ’ಮಗಳು ಕಂಡ ಕುವೆಂಪು’ ಕೃತಿಯ ’ತಂದೆಯವರ ಸಂಗೀತಾಸಕ್ತಿ’ ಎಂಬ ಬರಹದಲ್ಲಿ ದಾಖಲಿಸಿದ್ದಾರೆ. ಅವರ ಬರಹವನ್ನೇ ಇಲ್ಲಿ ಇಡಿಯಾಗಿ ಉಲ್ಲೇಖಿಸುತ್ತೇನೆ.
Comments
ಉ: ಸಂದರ್ಭ ಸಹಿತ ಕುವೆಂಪು ಕವನಗಳ ಸೊಗಸು - 4