ಸಮ್ಮತಿಯಿದೆ ನಿನ್ನೀ ಧಾಳಿಗೆ...

ಸಮ್ಮತಿಯಿದೆ ನಿನ್ನೀ ಧಾಳಿಗೆ...

ಕವನ

ಮುದ್ದು ಹುಡುಗಿ ಎದುರುನಿಂತು

ನಕ್ಕೆ ನೀನು ಬಿರಿದುಬಂದ

ಮಾತು ಮರೆತು ನಗುತ ನಿಂತೆ

ಜೊತೆಗೆ ನಾನು


 

ಸೆಳೆವ ತುಂಬು ಕಂಗಳಿಂದ

ನೋಟ ಸರಿಸಿ ಹೋದೆ ನೀನು

ಏಕೊ ಏನೋ ತಿಳಿಯಲಿಲ್ಲ

ಉಗುರುಕಚ್ಚಿ ನಿಂತೆ ನಾನು


 

ಮದರಂಗಿ ಬಿಡಿಸಿರುವೆ

ಈ ಹಾಳುಮನಸಲಿ

ಮುಂದುವರೆಯಲಿ ನಿನ್ನೀ ಧಾಳಿ

ನನ್ನೆದೆಯ ತೀರದಲಿ..

 

Comments