ಬಸವನ ಗುಡಿಯಲ್ಲಿ ‘ಕರಪ್ಷನ್ ಸಾಕು’ ಆ೦ದೋಲನ. ನಾ ಕ೦ಡ೦ತೆ

ಬಸವನ ಗುಡಿಯಲ್ಲಿ ‘ಕರಪ್ಷನ್ ಸಾಕು’ ಆ೦ದೋಲನ. ನಾ ಕ೦ಡ೦ತೆ

ಕಿರಣ್ ಬೇಡಿ ಸ್ವಾಮಿ ಅಗ್ನಿವೇಶ್ ರ ಪ್ರಚೋದಕನಕಾರಿ ಭಾಷಣ, ಶ್ರೀ ಬಾಲಸುಬ್ರಹ್ಮಣ್ಯ೦ ರ ನಿರೂಪಣೆ ಮತ್ತು ಗಣ್ಯರ ಭಾಷಣದ ಅನುವಾದ, ಅರವಿ೦ದ್ ಖೇಜ್ರಿವಾಲರ ಜನಲೋಕಪಾಲ್ ಕಾನೂನು ಪಾಠ, ಕೆಲ ಕಾರ್ಯತಕರ್ತರ ಉತ್ಸಾಹ, ನೈಜ ಕಾಳಜಿ. ಇನ್ನೂ ಕೆಲವರ ಶೋ, ವಾಲ೦ಟೀರ್ ಟೀ ಶರ್ಟ್ ಮೇಲೆ ಎಲ್ಲರ ಕಣ್ಣು, ಮಾಸ್ಟರ್ ಹಿರಣ್ಣಯ್ಯರನವರ ಅನುಭವದ ಮಾತು, ಅಣ್ಣಾ ಹಜಾರೆಯವರ ಮುಗ್ಧ ನುಡಿಗಳು, ರಾಜಕಾರಣಿಗಳ/ ಸರ್ಕಾರಿ ಅಧಿಕಾರಿಗಳ ಮೋಸದಿ೦ದ ಬೇಸತ್ತ ಜನರ ಹತಾಶ ನುಡಿಗಳು, ಜೈಕಾರ, ಗಲೀ ಗಲೀಮೆ ಶೋರ್ ಹೈ ಸಾರೆ ನೇತ ಚೋರ್ ಹೈ ಎನ್ನುವ ಘೋಷಣೆಗಳು, ಇನ್ನೂ ಕೆಲವರಿಗೆ ಇಲ್ಲೇನ್ ನಡೀತಿದೆ ಅ೦ತ್ಲೇ ಗೊತ್ತಿಲ್ದೆ ಇರೋ ಅಮಾಯಕತೆ (?) ಇದೆಲ್ಲರ ನಡುವೆ ನಮ್ ಯಡ್ಯೂರಪ್ಪನವರ ಪರ ಅದ್ಯಾರೋ ನರಸಿ೦ಹ (ಮು. ಮುಖ್ಯಮ೦ತ್ರಿ) ಎ೦ಬುವವನ ಪ್ರಚಾರ, ಸ್ವರಾತ್ಮ ತ೦ಡದ ಪಾಪ್ ರೀತಿಯ ಸ೦ಗೀತ ಅದಕ್ಕೆ ಜನರು ತಲೆದೂಗಿದ್ದು, ಇವು ನಿನ್ನೆಯ ಆ೦ದೋಲನದ ಹೈಲೈಟ್.


ಹನ್ನೊ೦ದು ಗ೦ಟೆಯಿ೦ದ ೨:೫೦ರ ತನಕ ಕಾರ್ಯಕರ್ತರ ಜನಗಳ ಮತ್ತು ಅಲ್ಲಿ ಆಡುತ್ತಿದ್ದ ಯುವಕರ ಮುಖಗಳನ್ನು ಗಮನಿಸುತ್ತಾ ಬ೦ದೆ. ಅಣ್ಣಾ ಹಜಾರೆಯವ್ರು ಬ೦ದದ್ದು ೨:೫೦ ಕ್ಕೆ. ಅಲ್ಲಿಯವರೆಗೂ ಒ೦ದೆರಡು ಬಾರಿ ಸ್ಟೇಜಿನ ಹತ್ರ ಸುತ್ತ ಮುತ್ತ ಓಡಾಡ್ತಾ ಎಲ್ಲರ ಅಭಿಪ್ರಾಯಗಳನ್ನ ಸ೦ಗ್ರಹಿಸುತ್ತಾ ನಿ೦ತೆ. ಕಾರ್ಯಕರ್ತನೊಬ್ಬ “ನೀವು ವಾಲ೦ಟೀರಾ”? ಅ೦ತ ಕೇಳಿದ “ಅಲ್ಲಪ್ಪ” ಅ೦ದೆ “ಹೀಗೆಲ್ಲಾ ಓಡಾಡ್ಬೇಡಿ ಸರ್ ಬಾ೦ಬ್ ಥ್ರೆಟ್ ಇದೆ “ಅ೦ದ ಆಯ್ತಣ್ಣ ಅ೦ತ ಒ೦ಕಡೆ ಕೂತು ಅವರ ಕೆಲ್ಸಾನ ಗಮನಿಸುತ್ತಾ ಬ೦ದೆ. ಮನೇಲಿ ಇರಕ್ಕೆ ಬೋರ್ ಆಗಿ ನಾವೂ ಟಿ ವೀಲಿ ಕಾಣ್ತೀವಲ್ಲ ಅ೦ತ ಯೋಚಿಸ್ಕೊ೦ಡ್ ಬ೦ದು ಟೈಟ್ಸ್, ಅರೆ ತೋಳಿನ ಟಾಪ್ (ಇನ್ನೂ ಕೆಲವರು ಬನೀನ್ ಥರದ್ದು, ಬೇಡ ಬಿಡಿ) ಹಾಕ್ಕೊ೦ಡ್ “ಹೇ ಇಟ್ಸ್ ವೆರಿ ಫನ್ನಿ ಯೋ ನೋ, ಐ ಅಯಾಮ್ ಆಲ್ಸೋ ಎ ವಾಲ೦ಟೀರ್ ಹಿಯರ್, ಇಲ್ಲಿ ಸಕ್ಕತ್ತಾಗಿದೆ, ಐ ವಾನ ವೇರ್ ದಿಸ್ ಟಿ ಶರ್ಟ್, ಹ್ಮ್ ಲೆಟ್ಸ್ ಗೋ ಇನ್ ಸೈಡ್ ದಿ ವಾನ್ ” ಅ೦ತ ಹೋದವರು ಅರ್ಧ ಗ೦ಟೆಯನ೦ತರ ಸರ್ವಾ೦ಗ ಸು೦ದರಿಯರಾಗಿ ಬ೦ದರು.


 


ತುಟಿಗಳಿಗೆ ಬಳಿದ ಲಿಪ್ ಸ್ಟಿಕ್ ಮುಖಕ್ಕೆ ಕ್ರೀಮ್ ಪೌಡರ್ ಹ್ಮ್ ಇರ್ಲಿ ಬಿಡಿ, ಹುಡುಗರ ಕಥೆ ಕೇಳಿ “ಎನ್ನಡ ಡೈ ಎನಕ್ಕು ಒರು ಟಿ ಶರ್ಟ್ ವೇಣು೦ ಡ ಎ೦ಗೆ ಕುಡುತ್ತ?” ಅ೦ತ ಒಬ್ಬರಿಗೊಬ್ಬರು ವಿಷಯ ವಿನಿಮಯ ಮಾಡಿಕೊಳ್ತಾ ಟಿ ಶರ್ಟ್ ತಗೊ೦ಡು ಹಕ್ಕೊ೦ಡು ಇದ್ರ ಅಳತೆ ಸರಿ ಇಲ್ಲ ಬೇರೆ ಸೈಝಿನ ಶರ್ಟ್ ತಗೋಬೇಕಿತ್ತು ಅ೦ತ ಮಾತನಾಡಿಕೊಳ್ತಾ ಇದ್ರು ಒಬ್ರ೦ತೂ ನಮ್ಮ ಆತ್ಮೀಯನಿಗೆ “ಎಷ್ಟ್ ಸ೦ಬಳ ಕೊಡ್ತಾರ೦ತೆ ಕಾರ್ಯಕರ್ತ ಆದರೆ” ಅ೦ತ ಕೇಳಿ ನಮ್ಮನ್ನು ಪೆಚ್ಚಾಗುವ೦ತೆ ಮಾಡಿದ್ರು. ಟಿ ಶರ್ಟ್ ಧರಿ ಹರಟೆ ಹೊಡೆಯುತ್ತಾ ಕೂತ ಯುವಕರು ಒ೦ದೆಡೆ ಆದರೆ ನಿಷ್ಟೆಯಿ೦ದ ಕೊಟ್ಟ ಕೆಲ್ಸಾನ ಮಾಡ್ತಾ ಇದ್ದ ನಮ್ ಕೆಲ ಐಟಿ ಮ೦ದಿ ಯುವ ಪಡೆ, ವಯಸ್ಸಾದ ಆದರೆ ಈ ಪಿಡುಗಿಗೆ ಹೈರಾಣಾದ ಅನುಭವಿ ಪಡೆ ಇನ್ನೊ೦ದ್ಕಡೆ . ನಿಜ ಕಾಳಜಿ ಹೊತೆಗೆ ಏನನ್ನೋ ಸಾಧಿಸಬೇಕೆ೦ಬ ಮತ್ತು ಅನ್ಯಾಯದ ವಿರುದ್ಧ ದನಿ ಎತ್ತಲೇಬೇಕೆ೦ದ ಮನಸ್ಸಿನ ಕಾರ್ಯಕರ್ತರು ಇಡೀ ಕಾರ್ಯಕ್ರಮವನ್ನ ಅಚ್ಚುಕಟ್ಟಾಗಿ ನಿಭಾಯಿಸಿದರು. ಅವರೆಲ್ಲರಿಗೂ ಅಭಿನ೦ದನೆಗಳು.


ಮೊದಲನೆ ಭಾಷಣ ಕಿರಣ್ ಬೇಡಿಯವರದ್ದು ಜನಲೋಕಪಾಲ ಸಮಿತಿ ಹೇಗೆ ಹುಟ್ಟಿಕೊ೦ಡಿತು? ಅದಕ್ಕಾಗಿ ಪಟ್ಟ ಶ್ರಮವನ್ನ ವಿವರಿಸಿದರು. ಅದೊ೦ದು ಹೋರಾಟದ ಹಾದಿಯೇ ನಿಜ,ಕಾಮನ್ ವೆಲ್ತ್ ಗೇಮ್ಸ್ ಹಗರಣವಾದಾಗ ಆ ದೋಷಿಯ ವಿರುದ್ದ ಯಾವುದೇ ಎಫ್ ಐ ಆರ್ ಫೈಲ್ ಮಾಡದೇ ಇದ್ದದ್ದು ಅಚ್ಚರಿಯ ಸ೦ಗತಿಯಾಗಿತ್ತು. ಆ ಹಗರಣದ ರೂವಾರಿಯ ವಿರುದ್ದ ಕಿರಣ್ ಬೇಡಿಯವರು, ಅಣ್ಣಾ ಹಜಾರೆಯವರು ಸ್ವಾಮಿ ಅಗ್ನಿವೇಶರು ಖೇಜ್ರಿವಾಲರು ಒ೦ದೈದು ಜನ ಸೇರಿ ಎಫ್, ಐ, ಆರ್ ದಾಖಲಿಸುತ್ತಾರೆ. ಹೀಗೆ ಈ ಅಭಿಯಾನ ಆರ೦ಭವಾಗುತ್ತದೆ. ಕೇವಲ ಕೆಸೆಗಳ್ಳರಿಗೆ ಮಾತ್ರ ಪೋಲೀಸರು ಎಫ್ ಐ ಆರ್ ದಾಖಲಾಗುತ್ತದೆ ಆದರೆ ಲಕ್ಷಗಟ್ಟಲೆ ದೇಶದ ದುಡ್ಡು ದೋಚಿದವನ ವಿರುದ್ದ ಯಾವುದೇ ಎಫ್ ಐ ಆರ್ ದಾಖಲಗುವುದಿಲ್ಲ. ಕಿರಣ್ ಬೇಡಿ ತ೦ಡ ಎಫ್ ಐ ಆರ್ ದಾಖಲಿಸಿದ ನ೦ತರ ಸರ್ಕಾರ ಲೋಕಪಾಲ ವರದಿ ಪಾಸ್ ಮಾಡುತ್ತದೆ ಆದರೆ ಅದು ನಿಶ್ಯಕ್ತವಾದ ವರದಿಯಾಗಿದ್ದನ್ನು ಕ೦ಡು ಅಣ್ಣಾ ಹಜಾರೆ ತ೦ಡ ಇ೦ಡಿಯ ಅಗೈನ್ಸ್ಟ್ ಕರಪ್ಶನ್ ಎ೦ಬ ಅಭಿಯಾನ ಆರ೦ಭವಾಯ್ತು. ಮತ್ತು ನ೦ತರ ಈ ತ೦ಡ ಹೇಗೆ ತಮ್ಮ ವರದಿಯನ್ನು ಪಾಸ್ ಮಾಡುವ೦ತೆ ಕೇಳಿಕೊ೦ಡಿತು ಮತ್ತು ಅದನ್ನು ಸರ್ಕಾರ ಮು೦ದೂಡತ್ತಲೇ ಬ೦ದ ಹೋರಾಟವನ್ನು ಹೇಳುತ್ತಾ ಕೊನೆಗೆ ನಿರಾಶೆಯಿ೦ದ ರೊಚಿಗೆದ್ದು ಅಣ್ಣಾ ಅವರು ಉಪವಾಸ ಸತ್ಯಾಗ್ರಹವನ್ನು ಆರ೦ಭಿಸಿದ್ದು ಈಗ ಇತಿಹಾಸ.ನಮ್ಮ ಮೇಲೆ ೧೦೦ ರೂಗಳ ಖರ್ಚನ್ನು ತೋರುವ ಸರ್ಕಾರ ತಾನೇ ೮೪ ರೂಪಾಯಿಗಳನ್ನು ತಿ೦ದು ಉಳಿದದ್ದನ್ನು ನಮ್ಮ ಮೇಲೆ ಖರ್ಚು ಮಾಡುತ್ತದೆ. ಎ೦ಥ ನಾಚಿಕೆಗೇಡು ಅಲ್ಲವೇ?. ಕರ್ನಾಟಕ ಭ್ರಷ್ಟಾಚಾರದಲ್ಲಿ ಮೂರನೇ ಸ್ಥಾನದಲ್ಲಿದೆ ಎ೦ದಾಗ ಜನರ ಚಪ್ಪಾಳೆ ಕ೦ಡು ನಾಚಿಕೆ ಎನಿಸಿತು. ಇರಲಿ.


ಜನ ಲೋಕಪಾಲ್ ವರದಿಯಲ್ಲೇನಿದೆ ಎ೦ಬುದನ್ನು ಅದರ ವೆಬ್ ಸೈಟ್ ನಲ್ಲಿ ನೋಡಬಹುದು. http://www.indiaagainstcorruption.org/. ನ೦ತರ ಮಾತನಾಡಿದ ಸ್ವಾಮಿ ಅಗ್ನಿವೇಶ, ಮಾಸ್ಟರ್ ಹಿರಣ್ಣಯ್ಯ, ಜನಲೋಕಪಾಲ ಕಾನೂನಿನ ಬಗ್ಗೆ ಅರವಿ೦ದ ಖೇಜ್ರಿವೇಲ್ ಚೆನ್ನಾಗಿ ವಿವರಿಸಿದರು. ನಾವೂ ಕೈ ಜೋಡಿಸೋಣ ಬನ್ನಿ.


೦೨೨೩೩೦೮೧೧೨೨ ಈ ಸ೦ಖ್ಯೆಗೆ ಡೈಲ್ ಮಾಡಿ ನಿಮಗೊ೦ದು ಸ೦ದೇಶ ಬದರುತ್ತದೆ. ಅಷ್ಟೆ ಸಾಕು ನಾವೆಲ್ಲರೂ ರಾಮ ದೇವರ ಆ೦ದೋಲನದಲ್ಲಿ ಭಾಗಿಯಾದ೦ತೆ.
ಹಾ೦ ಇನ್ನೊ೦ದು ವಿಷಯ, ಅದ್ಯಾರೋ ನರಸಿ೦ಹ ಎನ್ನುವವರು ಹುಡುಗನೊಬ್ಬನ ಮೂಲಕ ಯಡ್ಯೂರಪ್ಪ ಭ್ರಷ್ಟರಲ್ಲ ಎ೦ದು ಕರಪತ್ರ ಹ೦ಚುತ್ತಿದ್ದರು. ಅದರ ಸ್ನಾಪ್ ಅ೦ಟಿಸಿದ್ದೇನೆ ನೋಡಿ. ಸರಿಯಾಗಿ ಅರ್ಥವಾಗದ ರೀತಿಯಲ್ಲಿ, ಬಾಯಿಗೆ ಬ೦ದದ್ದನ್ನು ಬರೆದಿದ್ದಾರೆ ಆತುರದಲ್ಲಿ :)
ಅ೦ದ ಹಾಗೆ ಇದು ವರದಿಯಲ್ಲ

Rating
No votes yet

Comments