ಪ್ರೊಡಕ್ಷನ್ ನಂ -೧ ಭಾಗ-೪

ಪ್ರೊಡಕ್ಷನ್ ನಂ -೧ ಭಾಗ-೪

ಧೀರ್ಘವಾದ ಧಂ ಎಳೆದುಕೊಂಡ ಅರವಿಂದ್ ಕಿಟಕಿಯಿಂದ ಹೊರಗೆ ನೋಡುತ್ತ , ತುಂಬಾ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಇಂದು ಉತ್ತರ ರೂಪದ ನಿರ್ಧಾರವನ್ನು  ನಿರ್ಧರಿಸಿದಂತಾ ಮುಖಭಾವದಲ್ಲಿ ಕಿಟಕಿಯ ಮೂಲಕ ಕಾಣುತ್ತಿದ್ದ ನಗರವನ್ನೇದಿಟ್ಟಿಸುತ್ತಿದ್ದ..

ಅವನ ಮುಖವನ್ನೇ ಗಮನಿಸುತ್ತಿದ್ದ ಕೌಶಿಕ್ ಮೆಸೇಜ್ ಬಂದದ್ದು ನೋಡಿ ಮೊಬೈಲ್ ತೆಗೆದು ನೋಡುತ್ತಾನೆ.

ಅವನೆಡೆಗೆ ತನಗೆ ಗೊತ್ತು ಈ ಸಂದೇಶ ಬಂದದ್ದು ಯಾರಿಂದ ಎಂಬಂತ ವ್ಯಂಗ್ಯದ ನಗೆಯ ಬೀರುತ್ತಾ ಮತ್ತೆ ಕಿಟಿಯೆಡೆಗೆ ತಿರುಗುತ್ತಾನೆ.

’ಅವಳದೇ ನಾ..?’

’ಹೌದು’

’ಏನಂತೆ..? ಡಿನ್ನರ್ ಗೆ ಹೋಗ್ಬೇಕಂತಾ..? (ವ್ಯಂಗ್ಯವಾಗಿ)’

’ಹೌದು-- ಇಲ್ಲ’

’ಅದೇನು ಹೌದು-- ಇಲ್ಲ...? ನನಗೆ ಎಲ್ಲ ಗೊತ್ತು.. ನೀನು ಸಮರ್ಥಿಸಿಕೊಳ್ಳುವ ಅವಶ್ಯಕತೆ ಇಲ್ಲ. ತುಂಬಾ ಬುದ್ದಿವಂತೆ ಅಂತ ತನಗೆ ತಾನೆ ಅನ್ಕೊಂಡಿದ್ದಾಳೆ. ಈ ಸಿನಿಮಾ ಶುರುವಾದಗಿನಿಂದ ಗಮನಿಸ್ತಿದೀನಿ.. ಅವತ್ತು ಅಡಿಷನ್ ಗೆ ಅಂತ ನಿನ್ನನ್ನು ಕರೆಸಿಕೊಂಡಾಗಿಂದಲೇ ನಿನ್ನೆಡೆಗೆ ಅವಳ ವಿಶೇಷ ಆಸಕ್ತಿ ಇರೋದನ್ನ ನಾನು ಗಮನಿಸಿದ್ದೀನಿ. ಅಷ್ಟು ಜನ ಅಡೀಷನ್ ಗೆ ಬಂದಿದ್ರೂ ಅವರೆಲ್ಲರಲ್ಲಿ ನೀನೊಬ್ಬನೆ ಸೆಲೆಕ್ಟ್ ಆಗಿರೋದಷ್ಟೇ ಸಾಕು, ಅವಳ ಮನಸ್ಸಲ್ಲಿರೋದು ಏನೆಂದು ತಿಳ್ಕೊಳ್ಳೋದಿಕ್ಕೆ. ಈ ಸಿನಿಮಾ ಮಾಡಬೇಕು ಅಂತ ಹೇಳಿ ಕಥೆ ಬರೆಯೋದಿಕ್ಕೆ ಶುರು ಮಾಡಿದಾಗಿನಿಂದಲೂ ಕಥೆ ಎನು ಅಂತ ಕೇಳ್ತಾನೆ ಇದೀನಿ.. ಇಲ್ಲ ಸರ್ಪ್ರೈಸ್.. ಎಲ್ಲಾ ಮುಗೀಲಿ ಆಮೇಲೆ ಪೂರ್ತಿಯಾಗಿ ಹೇಳ್ತೀನಿ. ಮಧ್ಯ ಮಧ್ಯದಲ್ಲಿ ಬೇಡ. ಸ್ವಾರಸ್ಯ ಹೊರಟೋಗುತ್ತೆ. ಅಂತ ಹೇಳ್ತಿದ್ದೋಳು.ಫೇಸ್ ಬುಕ್ಕಲ್ಲಿ, ಬ್ಲಾಗಲ್ಲಿ ಅಡಿಷನ್ ಗೆ ಅನೌನ್ಸ್ ಮಾಡಿದ್ಮೇಲೆ ನನಗೆ ಹೇಳಿದ್ದು ."ಅರವಿಂದ್ ನಾಳೆ ನೀವು ಆಫೀಸ್ ಗೆ ಹೋಗೋದು ಬೇಡ, ಶೀಬಾ ಗೆ ಹೇಳ್ಬಿಡಿ ಅಲ್ಲಿನ ಕೆಲ್ಸ ನೋಡ್ಕೊಳ್ಳೋದಿಕ್ಕೆ. ನಾಳೆ ನನ್ ಸಿನಿಮಾಗೆ actors ನ ಸೆಲೆಕ್ಟ್ ಮಾಡ್ಕೊಳ್ಲೋದಿಕ್ಕೆ ಅಡಿಷನ್ ಗೆ  ಅನೌನ್ಸ್ ಮಾಡಿದ್ದೆ. ಸುಮಾರು ೩೦ ಜನ ಬರ್ತಿದ್ದಾರೆ. ನನಗೆ ಹೆಲ್ಪ್ ಮಾಡೋದಿಕ್ಕೆ ನೀವು ಇರ್ಬೇಕು" ಅಂತ. ಆಗ್ಲೂ ಕಥೆ ಏನು ಅಂತ ಕೇಳಿದ್ದಕ್ಕೆ ಈಗ ಟೈಂ ಇಲ್ಲ ಈ ಅಡಿಷನ್ ಎಲ್ಲಾ ಮುಗೀಲಿ ಆಮೇಲೆ ಹೇಳ್ತೀನಿ ಅಂತ ಜಾರ್ಕೊಂಡೋಳು, ಅಡಿಷನ್ ಶುರು ಆದಾಗ ಒಬ್ಬರಾದ ಮೇಲೆ ಒಬ್ಬರು ಬರ್ತಾ ಇದ್ರೆ ಇವಳಿಗೆ ಸಮಾಧಾನ ಆಗ್ತಾನೆ ಇರ್ಲಿಲ್ಲ. ಅಷ್ಟರಲ್ಲಿ ವರ್ಷಾ ಜೊತೆ ನೀನು ಅಲ್ಲಿಗೆ ಬಂದೋನು ಲಂಚ್ ಬ್ರೇಕಲ್ಲಿ ’ನಾನು ಮಾಡ್ಲಾ’ ಅಂತ ಕೇಳಿದ ತಕ್ಷಣ ಅವಳ ಮುಖದಲ್ಲಿ ಮಿಂಚು ಬಂದಂತಾಗಿದ್ದನ್ನು ನಾನು ಗಮನಿಸಿದ್ದೆ.’ 

’ನಾನು ಆಕ್ಸಿಡೆಂಟಲ್ಲಾಗಿ ಕೇಳಿದ್ದಲ್ಲ. ನನಗೆ ಮೊದಲಿಂದಲೂ actor ಆಗ್ಬೇಕು ಅನ್ನೋ ಆಸೆ ಇತ್ತು. ಅವತ್ತು ವರ್ಷಾ...  ಮೇಡಂ ಈ ಸಿನಿಮಾ ಮಾಡ್ತಿರೋ ವಿಷಯ ಹೇಳಿ ಬಲವಂತವಾಗಿ ನನ್ನನ್ನು ಕರೆದುಕೊಂಡು ಬಂದಿದ್ದು. ಆದರೆ ನಾನು ಕೇಳೋದಿಲ್ಲ. ಲಂಚ್ ಬ್ರೇಕ್ ಟೈಂ ಸಿಕ್ಕರೆ ನೀನೇ ಕೇಳು ಅಂತ ಹೇಳಿದ್ಲು . ಅದಕ್ಕೆ ಈ ಚಾನ್ಸು ಮಿಸ್ ಮಾಡ್ಕೋಬಾರ್ದು ಅಂತ ನಾನು ಕೇಳಿದ್ದು.’

’ನೀನು ಬಯಸಿದ್ದು, ಕೇಳಿದ್ದು ಆಕ್ಸಿಡೆಂಟ್ ಅಲ್ಲದೇ ಇರಬಹುದು... ಆದರೆ ಈ ಸಿನಿಮಾದ ಕಥೆಯೊಳಗೆ ನಿನ್ನ ಎಂಟ್ರಿ ಆಕ್ಸಿಡೆಂಟಲ್ ಅನ್ನೋದು ಮಾತ್ರ ನನಗೆ ೧೦೦% ಗ್ಯಾರಂಟಿ ಇದೆ. ಯಾಕೆಂತಂದ್ರೆ.. ನೀನು ಕೇಳಿದ ಮೇಲೆ ಅವತ್ತು ಮೊದಲು ನಿನ್ನ ಅಡಿಷನ್ ಮುಗಿಸಿ ಆಮೇಲೆ ಉಳಿದವರನ್ನೆಲ್ಲಾ ಮಾಡಲೇ ಬೇಕಲ್ಲಾ ಅನ್ನೋ ರೀತಿಯಲ್ಲಿ ಮಾಡಿ , ನಿಮಗೆಲ್ಲಾ ಇನ್ಫಾರ್ಮ್ ಮಾಡ್ತೀವಿ ಅಂತ ಎಲ್ಲರನ್ನೂ ಕಳಿಸಿ, ಅಲ್ಲಿ ನಾನು ವರ್ಷಾ, ಇದ್ದಿವಿ ಅನ್ನೋದನ್ನು ಮರೆತು ನಿನ್ನೊಂದಿಗೆ ರಾತ್ರಿ ಹನ್ನೊಂದಾದ್ರು ಮಾತಾಡ್ತಾನೆ ಇದ್ಲು.’

’ನಾವು ಸಿನಿಮಾ ಕುರಿತಂತೆ ತಾನೇ ಮಾತಾಡ್ತಾ ಇದ್ದಿದ್ದು...?’

’ಹ್ಮ್.. ಮಾತೆಲ್ಲಾ ಸಿನಿಮಾಗೆ ಸಂಬಂದಪಟ್ಟಿದ್ದಾದ್ರು ಅವತ್ತು ಈಗ ಮಾಡುತ್ತಿರುವ ಸಿನಿಮಾದ ಕಥೆ ಏನಾದ್ರು ಹೇಳಿದ್ಲಾ..?’

’ಇಲ್ಲ.. ಇನ್ನೂ ಫೈನ್ ಟ್ಯೂನಿಂಗ್ ಇದೆ ಎಲ್ಲಾ ಮುಗಿದ್ಮೇಲೆ ಹೇಳ್ತೀನಿ ಅಂತ ಹೇಳಿದ್ರು.’

’ಫೈನ್ ಟ್ಯೂನಿಂಗ್ ಇದೆ ಅಂತಾಗಿದ್ರೆ ನನ್ ಹತ್ರ ಕಥೆ ರೆಡಿಯಾಗಿದೆ actors ನ ಫೈನಲ್ ಮಾಡಿದ್ರೆ ಶೂಟಿಂಗ್ ಶುರು ಮಾಡ್ಬಹುದು ಅಂತ ಹೇಳಿದ್ದೇಕೆ.’

’ಗೊತ್ತಿಲ್ಲ’

’ನಂಗೊತ್ತು. ನಿನ್ನ ಪರಿಚಯ ಆದ್ಮೇಲೆ ಇಡೀ ಸಿನಿಮಾ ಕಥೆ re-write ಮಾಡಿದ್ದಾಳೆ. ’

're-write..??? ಅದು ಹೇಗೆ ಹೇಳ್ತೀರಿ. ನಂಜೊತೆ ಮಾತಾಡ್ತಾ ಇದ್ದಾಗ, ಈಗೇನು experimental ಅನ್ನೋರೀತಿಯಲ್ಲಿ ಆಗ್ತಾ ಇದೆಯೋ, ಅದಕ್ಕೆ ಸಂಬಂಧಿಸಿದಂತೆ ನಮ್ಮಿಬ್ಬರ ಮಾತುಕತೆ ನಡೆದಿದ್ದು’

’ಹೌದಾ.. ಹಾಗಾದ್ರೆ ಬಾ ಇಲ್ಲಿ ಈ ಮೈಲ್ ನೋಡು .. ಅವಳು ಕಥೆ ಬರೆಯೋದಿಕ್ಕೆ ಶುರು ಮಾಡ್ದಾಗ ನನ್ ಫ್ರೆಂಡ್ ಹತ್ರ screenplay bareyOdikke ಹೆಲ್ಪ್ ಕೇಳಿದ್ಲಂತೆ. ಅವ್ನು ಬ್ಯುಸಿ ಇದ್ದಿದ್ರಿಂದ ರಿಪ್ಲೇ ಮಾಡಕ್ಕಾಗ್ಲಿಲ್ವಂತೆ. ಇವತ್ತು ಫೇಸ್ ಬುಕ್ಕಲ್ಲಿ ನಮ್ಮ ಮೇಕಿಂಗ್ ಫೋಟೋಸ್ ನೋಡಿ.. ನನಗೆ ಮೈಲ್ ಕಳಿಸಿದ್ದ . " ನನಗೆ ಗೊತ್ತು ನಿಮ್ಮ ಸಿನಿಮಾದ ಒನ್ಲೈನ್ ಏನೂ ಅನ್ನೋದು.. ಇದೇ ತಾನೆ ಅಂತ ಅವಳು ಕಳಿಸಿರೋ ಮೈಲ್ ನನಗೆ ಫಾರ್ವರ್ಡ್ ಮಾಡಿದ್ದಾನೆ. ಇದರಲ್ಲೆಲ್ಲೂ ನಾವು ಈಗ ಮಾಡಿರೋ ಸಿನಿಮಾದ ಕಥೆನೆ ಇಲ್ಲ.?’

ಕೌಶಿಕ್ ಮೈಲ್ ಓದಿ ಏನೂ ಮಾತಾಡದೇ ಮತ್ತೆ ಕಿಟಕಿ ಹತ್ರ ಹೋಗಿ ನಿಂತ್ಕೋತಾನೆ.

ಅಲ್ಲಿಗೆ ಬಂದು ಮತ್ತೊಂದು ಸಿಗರೇಟ್ ಹಚ್ಚಿ ಸುರುಳಿ ಸುರುಳಿಯಾಗಿ ಹೊಗೆ ಬಿಡುತ್ತಾ ಅರವಿಂದ್, ಹೊರಗಡೆ ನೋಡುತ್ತಾ..

’ಕೌಶಿಕ್.. ನನಗೆ ಇದು ಬರೀ ಸಂದೇಹ ಮಾತ್ರ ಅಲ್ಲ.. ಇದಕ್ಕೆ ಸಾಕಷ್ಟು ಪ್ರೂಫ್ ಕೂಡ ಇದೆ. ಅದರಲ್ಲೊಂದು ಅವತ್ತಿನ ಅಡಿಷನ್ ಮತ್ತು ಮೇಕಿಂಗ್ ವಿಡಿಯೋ ಕ್ಲಿಪ್ಸ್ ಅಲ್ಲಿ ನನ್ನ ಟೇಬಲ್ ಮೇಲಿದೆ ನೋಡು’

ಕೌಶಿಕ್ ಟೇಬಲ್ ಬಳಿ ಬಂದು ಅಲ್ಲಿ ಟೇಬಲ್ ಮೇಲೆ ಎರೆಡು ಸಿಡಿಗಳಿರೋದನ್ನು ನೋಡಿ ಎರಡನ್ನು ಎರಡು ಕೈಗಳಲ್ಲಿ             ಎತ್ಕೊಂಡು ಅರವಿಂದೆಡೆಗೆ ತಿರುಗುತ್ತಾನೆ.

ಓ ಎರಡಿದೆಯಾ ಅದರಲ್ಲಿ ಒಂದು ನಮ್ಮ ಸಿನಿಮಾದ ಇಲ್ಲಿಯವರೆಗೂ ಆಗಿರೂ ಶೂಟಿಂಗ್ ಫಸ್ಟ್ ಕಟ್ ಕಾಪಿ ಇದೆ, ಬೇಕಿದ್ರೆ ನೋಡಬಹುದು..( ಹಾಗೇ ಗೊಣಗುವ ರೀತಿಯಲ್ಲಿ) ’ನಿಮ್ಮಿಬ್ಬರ ರೊಮ್ಯಾನ್ಸ್ ನ್ನು ಕೂಡ’ ಅಂತಂದು,

ಟೇಬಲ್ ಹತ್ರ ಬಂದು.. ಲ್ಯಾಪ್ ಟಾಪ್ ಕ್ಲೋಸ್ ಮಾಡಿ ಬ್ಯಾಗಲ್ಲಿ ಇಟ್ಕೊಂಡು ಅರವಿಂದ ಹೊರಡ್ತಾನೆ. ಬಾಗಿಲ ಬಳಿ ಹೋಗಿ ಹಿಂತಿರುಗಿ ನೋಡ್ತಾನೆ ಕೌಶಿಕ್ ಲ್ಯಾಪ್ಟಾಪಲ್ಲಿ ವಿಡಿಯೋ ಪ್ಲೇ ಆಗ್ತಿರ್ತದೆ.

ಅದರಲ್ಲಿ ಕೌಶಿಕ್ ಮತ್ತು ಸುಮತಿ ನಿಂತಿರ್ತಾರೆ.

 

(ಮುಂದುವರೆಯುವುದು)