ಶೀಲಳ ಸಾವು...

ಶೀಲಳ ಸಾವು...

ಪದ್ಮಿನಿ ಮಾಲೊಂದರಲ್ಲಿ ಶಾಪಿಂಗ್ ಮಾಡುವುದರಲ್ಲಿ ನಿರತಳಾಗಿದ್ದಳು. ಮನೆಗೆ ಬೇಕಾದ ವಸ್ತುಗಳನ್ನು, ಸೌಮ್ಯ ಹಾಗೂ ಶೀಲ ಳಿಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡು ಕೌಂಟರ್ ಬಳಿ ಬಂದು ಬಿಲ್ ಪಾವತಿಸಿ ಸಾಮಾನುಗಳನ್ನು ಕಾರಿನಲ್ಲಿ ತುಂಬಿಸುತ್ತಿದ್ದಳು. ಆಗ ಅವಳ ಮೊಬೈಲ್ ಗೆ ಕರೆಯೊಂದು ಬಂತು. ಅದು ಅವರ ಅಮ್ಮನ ಕರೆ ಆಗಿತ್ತು..

ಅವರ ಅಮ್ಮನ ಧ್ವನಿಯಲ್ಲಿ ದುಗುಡ ತುಂಬಿದ್ದನ್ನು ಗ್ರಹಿಸಿದ ಪದ್ಮಿನಿ ಗಾಭರಿಯಿಂದ ಅಮ್ಮ ಹೇಳು ಏನಾಯಿತು ಹೇಳು ಎಂದು ಕೇಳಿದಾಗ ಅವರ ಅಮ್ಮ ಹೇಳಿದ ಸುದ್ದಿ ಪದ್ಮಿನಿಯನ್ನು ಕ್ಷಣ ಕಾಲ ತಲ್ಲಣಗೊಳಿಸಿಬಿಟ್ಟಿತು.

ಪದ್ಮಿನಿ, ಸೌಮ್ಯ ಮತ್ತು ಶೀಲ ರಸ್ತೆ ಬದಿಯಲ್ಲಿ ಆಡುತ್ತಿದ್ದಾಗ ಕಾರೊಂದು ಬಂದು ಗುದ್ದಿ ಶೀಲ ಸ್ಥಳದಲ್ಲೇ ತೀರಿಕೊಂಡಳು. ಎಂದು ಹೇಳಿದರು ಪದ್ಮಿನಿ ಅಮ್ಮ.

ಪದ್ಮಿನಿಗೆ ಆದ ಶಾಕ್ ನಿಂದ ಸುಧಾರಿಸಿಕೊಂಡು ಬೇಗ ಬೇಗನೆ ಸಾಮಾನುಗಳನ್ನು ಕಾರಿಗೆ ತುಂಬಿಸಿ ಅಳುತ್ತಲೇ ಕಾರನ್ನು ಮನೆ ಕಡೆ ಡ್ರೈವ್ ಮಾಡಿದಳು.

ರಸ್ತೆಯುದ್ದಕ್ಕೂ ಟ್ರಾಫಿಕ್, ಪದ್ಮಿನಿ ಶೀಲ ಬಗ್ಗೆ ಯೋಚಿಸುತ್ತ ಅಳುತ್ತಲೇ ಡ್ರೈವ್ ಮಾಡುತ್ತಿದ್ದಳು..

ಸೌಮ್ಯ ಪದ್ಮಿನಿಯ ಮುದ್ದಿನ ಮಗಳು, ಒಂದು ದಿನ ಶಾಲೆಯಿಂದ ಬರುತ್ತಾ ಜೊತೆಯಲ್ಲಿ ಶೀಲ ಳನ್ನು ಕರೆತಂದಿದ್ದಳು. ಅಮ್ಮ ಇನ್ನು ಮುಂದೆ ಇವಳು ಇಲ್ಲೇ ಇರಲಿ, ಇವಳಿಗೆ ಯಾರೂ ಇಲ್ಲ, ಇನ್ನು ಮುಂದೆ ನನ್ನ ಜೊತೆ ಆಟ ಆಡಿಕೊಂಡು ಇಲ್ಲೇ ಇರಲಿ, ಇವಳಿಗೆ ಶೀಲ ಎಂದು ಹೆಸರಿಡೋಣ ಎಂದು ಮುದ್ದು ಮುದ್ದಾಗಿ ಹೇಳುತ್ತಿದ್ದಳು..

ಶೀಲ ಮಾತ್ರ ಹಸಿವಿನಿಂದ ಹೊಟ್ಟೆಗಿಲ್ಲದೆ ಕೃಶವಾಗಿ ಏನೂ ಮಾತನಾಡದೆ ಸುಮ್ಮನಿದ್ದಳು.

ಮಗಳ ಕೋರಿಕೆಯನ್ನು ಪದ್ಮಿನಿಯ ಗಂಡ ನಿರಾಕರಿಸಿದರೂ ಪದ್ಮಿನಿ ಒಪ್ಪಿಗೆ ನೀಡಿದಳು. ಸೌಮ್ಯ ಳ ಕುಶಿಗೆ ಮಿತಿಯೇ ಇರಲಿಲ್ಲ.

ಸೌಮ್ಯ ಹಾಗೂ ಪದ್ಮಿನಿಯ ಆರೈಕೆಯಿಂದ ಶೀಲ ನಿಧಾನವಾಗಿ ಸುಧಾರಿಸಿಕೊಂಡಳು.

ಕೆಲವೇ ದಿನಗಳಲ್ಲಿ ಎಲ್ಲರಿಗೂ ಬಹಳ ಆಪ್ತವಾಗಿಬಿಟ್ಟಲು..ಮೊದಮೊದಲು ನಿರಾಕರಿಸಿದ ಪದ್ಮಿನಿಯ ಗಂಡನಿಗೂ ಶೀಲ ಆಪ್ತವಾಗಿಬಿಟ್ಟಲು.

ಪದ್ಮಿನಿ ಎಲ್ಲೇ ಹೋದರು ಸೌಮ್ಯ ಹಾಗೂ ಶೀಲ ಇಬ್ಬರನ್ನೂ ಕರೆದೊಯ್ಯುತ್ತಿದ್ದಳು..ಆದರೆ ಇಂದೇಕೋ ಸೌಮ್ಯಗೆ ಶೀಲ ಜೊತೆ ಆಟವಾಡುತ್ತಿರು ಬೇಗನೆ ಬಂದು ಬಿಡುತ್ತೀನಿ ಎಂದು ಶಾಪಿಂಗ್ ಗೆ ಬಂದು ಬಿಟ್ಟಿದ್ದಳು. ಅದೇ ಶೀಲ ಳ ಸಾವಿಗೆ ಕಾರಣವಾಯಿತು ಎಂದು ತನ್ನನ್ನು ತಾನು ಬೈದುಕೊಳ್ಳುತ್ತಿದ್ದಳು.

ಅಷ್ಟರಲ್ಲೇ ಹಿಂದಿನಿಂದ ಹಾರನ್ ಸದ್ದು ಕೇಳಿ ಎಚ್ಚೆತ್ತು ಕಾರನ್ನು ಮುಂದೆ ನಡೆಸಿ ಮನೆ ಬಳಿ ಬಂದಳು.

ಆಗಲೇ ಮನೆ ಮುಂದೆ ಗಾಡಿ ಬಂದು ನಿಂತಿತ್ತು..ಒಳಗಿನಿಂದ ಇಳಿದ ಇಬ್ಬರು ಶೀಲ ಳನ್ನು ತೆಗೆದುಕೊಂಡು ಹೋಗಲು ಒಳಗೆ ಹೋಗುತ್ತಿದ್ದರು..

ಒಳಗಿನಿಂದ ಬಂದ ಸೌಮ್ಯ ಅಮ್ಮ ಶೀಲ........ಎಂದು ಅಳಲು ಶುರು ಮಾಡಿದಳು..

ಜೊತೆಯಲ್ಲೇ ಬಂದ ಪದ್ಮಿನಿ ಗಂಡ ಸೌಮ್ಯ ಳನ್ನು ಸಮಾಧಾನ ಮಾಡುತ್ತಾ ಹೇಳಿದ

ಶೀಲ ಒಳ್ಳೆಯ ನಾಯಿ...ಹೋಗಲಿ ಬಿಡು ಇನ್ನೊಂದು ನಾಯಿ ತಂದು ಅದಕ್ಕೂ ಶೀಲ ಅಂತಾನೆ ಹೆಸರಿಡೋಣ ಎಂದ...ಎಲ್ಲರೂ ಸಮಾಧಾನಗೊಂಡು ಮನೆಯೊಳಗೇ ಹೋದರು...

   

 

Rating
No votes yet

Comments