ಪ್ರೊಡಕ್ಷನ್ ನಂ -೧ ಭಾಗ-೫
’ಸಿನಿಮಾ ಅನ್ನೋದು ನಮ್ ಮೇಲೆ ಅಷ್ಟು ಪ್ರಭಾವ ಬೀರುತ್ತೆ ಅಂತ ನೀನು ಒಪ್ಕೊಳ್ತೀಯಾ? ’
ಸುಮತಿ ಕೌಶಿಕ್ ನ ದಿಟ್ಟಿಸುತ್ತಾ ಕೇಳಿದಳು.
’ಆ ದೃಷ್ಟಿಯನ್ನೇ ಎದುರಿಸುತ್ತಾ.. ಸಿನಿಮಾ ಪ್ರಭಾವ ನಮ್ಮ ಡೈಲಿ ಲೈಫಲ್ಲಿ ಗುರುತಿಸುವಷ್ಟರಮಟ್ಟಿಗೆ ಅಲ್ಲದಿದ್ದರು ಸೂಕ್ಷ್ಮವಾಗಿ ಗಮನಿಸಿದರೆ. ಒಂದಲ್ಲ ಒಂದು ರೀತಿಯಲ್ಲಿ ಅದರ ಪ್ರಭಾವದಿಂದ ಹೊರತಾಗಿರೋರು ಸಿಗೋದು ಕಷ್ಟ. ಆ ರೀತಿ ಸಿಗಬೇಕಂದರೆ ಆ ವ್ಯಕ್ತಿ ತನ್ನ ಜೀವಮಾನದಲ್ಲಿ ಯಾವತ್ತೂ ಯಾವ ಸಿನಿಮಾ ದೃಶ್ಯವನ್ನು ನೋಡಿರಲೇಬಾರದು. ಅನುಕರಣೆ ಎಂಬುದು ಮನುಷ್ಯನಿಗೆ ಹುಟ್ಟಿನಿಂದಲೇ ಬರುತ್ತದೆ. ಮಗು ಬೆಳೆಯುತ್ತಾ ಅದರ ಮನಸ್ಸಿಗೆ ಹೆಚ್ಚೆಚ್ಚುಪ್ರಭಾವ ಬೀರುವವರನ್ನೇ ಅನುಕರಿಸುತ್ತಾ ಸಾಗುತ್ತದೆ. ಪ್ರೌಡಾವಸ್ಥೆಯನ್ನು ತಲುಪುವ ಹೊತ್ತಿಗೆ ತನ್ನ ಮೇಲೆ ಪ್ರಭಾವ ಬೀರುವ ವಿಷಯ ವ್ಯಕ್ತಿಗಳನ್ನು ತಾನೇ ಆಯ್ಕೆಮಾಡಲು ತೊಡಗುತ್ತದೆ. ತನಗೆ ಬೇಕಾದ ವಿಷಯಗಳಿಗೆ ಸಂಬಂದಪಟ್ಟಂತೆ ತನ್ನ ಬೌದ್ದಿಕ ಸ್ಥಿತಿ ಆಯ್ಕೆ ಮಾಡುವ ಮಟ್ಟಿಗೆ ತನ್ನ ಜೀವನದಲ್ಲಿ ಆಯ್ಕೆ ಮಾಡಿಕೊಳ್ಲಲು ತೊಡಗುತ್ತದೆ.
ಇನ್ನು ಸಿನಿಮಾ ವಿಷಯಕ್ಕೆ ಬರೋದಾದ್ರೆ ತಮ್ಮ ಅನುಭವಗಳನ್ನು, ಅನಿಸಿಕೆಗಳನ್ನು, ಆಸೆಗಳನ್ನು ಅಭಿವ್ಯಕ್ತಿಗೊಳಿಸಲು ಇರುವ ಪ್ರಬಲ ಮಾಧ್ಯಮ ಸಿನಿಮಾ.
ಅದರಲ್ಲು ಮನುಷ್ಯನ ದೌರ್ಬಲ್ಯಗಳನ್ನು ಉದ್ದೀಪಿಸಿ ಅದಕ್ಕೊಂದು satisfaction ನೀಡುವುದರಲ್ಲಿ ಜನಪ್ರಿಯ ಸಿನಿಮಾಗಳು ಸದಾ ಮುಂದಿರುತ್ತವೆ. ಅದೇ ಆ ಸಿನಿಮಾಗಳ ಬಂಡವಾಳ
ಆದರೆ ಸೆಲ್ಯುಲಾಯ್ಡ್ ಜೀವನವನ್ನು ಅನುಕರಿಸಿ ಅಳವಡಿಸಿಕೊಂಡವರಲ್ಲಿ ಬಹುತೇಕರು ಯ್ಶಸ್ವಿಯಾಗಿರೋದು ತುಂಬಾ ಕಡಿಮೆ.
’ಅದು ಹೇಗೆ..?’ ಆಶ್ಚರ್ಯ ಮುಖಭಾವದಲ್ಲಿ ಸುಮತಿ ಕೌಶಿಕ್ ನೆಡೆಗೆ ನೋಡುತ್ತಾಳೆ.
ಸಿನಿಮಾ ಅನ್ನೋದು ನಿರಂತರ ಜೀವನದ ಆಯ್ದ ಭಾಗಗಳ ಸಮಯದ ಕೊಲಾಜ್ ಅಶ್ಟೇ ಹೊರತು ಅದು ಪೂರ್ಣ ಪ್ರಮಾಣದ ಜೀವನದಾಭಿವ್ಯಕ್ತಿ ಅಲ್ಲ. ಹಾಗಾಗಿ ಸಿನಿಮಾದ ಜೀವನ ಶೈಲಿಯನ್ನೆ ಅನುಕರಿಸಲು ಹೊರಟರೆ, ಸಿನಿಮಾದೊಳಗಿನ ಅಂಶಗಳ ಪುನರ್ ಅನುಕರಣೆಯ ಕೆಲವು ಕ್ಷಣಗಳಿಗೆ ಮಾತ್ರ ದು ಅನ್ವಯಿಸುತ್ತದೆ ಹೊರತು ಪೂರ್ತಿ ಜೀವನಕ್ಕಲ್ಲ.
ಉದಾಹರಣೆಗೆ ಸಿನಿಮಾದ ಯಾವುದೇ ಸಮಾರಂಭದಲ್ಲಿ ಇಡೀ ಮನೆಮಂದಿ ಕುಣಿದು ಸಂಭ್ರಮಿಸುವ ಕ್ಷಣಗಳು ಒಂದೇ ಹಾಡಿನಲ್ಲಿ ತುಂಬಲ್ಪಟ್ಟಿರುತ್ತದೆ. ಆದರೆ ಆ ಇಡೀ ಹಾಡು ನಿಜ ಜೀವನದ ಸಮಾರಂಭದಲ್ಲಿ ಪ್ಲೆ ಮಾಡಿದರೆ ಕೆಲವು ಕ್ಷಣಗಳಿಗಷ್ಟೇ ಸೀಮಿತವಾಗಿ ಮುಗಿದು ಹೋಗುತ್ತದೆ.
’ಹೌದು ಅದೂ ನಿಜ. ಹಾಗಾದ್ರೆ ನಾವು ಸಿನಿಮಾ ಮಾಡುವುದೇತಕ್ಕೆ? ಈಗ ನಾವು ಮಾಡುತ್ತಿರುವ ಸಿನಿಮಾ ಇಂತಹ ಯಾವುದನ್ನೂ ಉದ್ದಿಪಿಸುವುದಿಲ್ಲ. ಹಾಗಾದ್ರೆ ನಾವು ಈ ಸಿನಿಮಾನೆ ಮಾಡ್ಬಾರ್ದಾ?’
’ಇಂತಹುದೆ ಸಿನಿಮಾ ಮಾಡಬೇಕು.. ಮಾಡಬಾರದು ಎಮ್ದು ಯಾರು ಹೇಳುವುದೂ ಇಲ್ಲ. ಅದು ಹೇಳುವುದೂ ಸಾಧ್ಯವಿಲ್ಲ. ಸಿನಿಮ ಎನ್ನುವುದು ಅಭಿವ್ಯಕ್ತಿಯಷ್ಟೇ. ಅಲ್ಲಿ ನಿಮ್ಮ ವಿಚಾರಗಳನ್ನಾದರು ಹೇಳಬಹುದು ಅಥವ ನೀವು ಅನುಭವಿಸಿದ, ನಿಜ ಜೀವನದಲ್ಲಿ ಸಾಮೂಹಿಕವಾಗಿ ಕೊರತೆಯನ್ನು ಅನುಭವಿಸುವವರಿಗೆ ಸಕಾರಾತ್ಮಕವಾಗಿ ಉತ್ತೇಜಿಸುವಂತ ದೃಶ್ಯಮಾಧ್ಯಮವನ್ನು ಕಟ್ಟಿಕೊಡುವ ಸಾಧನ ಸಿನಿಮಾ ಅದು ನಿರ್ದೇಶಕರ ಮೇಲೆ ಅವಲಂಬಿತ.
ಆ ಅಭಿವ್ಯಕ್ತಿಯು ನೋಡುಗರಿಗೆ ನಿರ್ದೇಶಕನ ದೃಶ್ಟಿಕೋನವನ್ನು ಅನುಭವಿಸುವಂತಾದಲ್ಲೆ ಅದನ್ನು ಯಶಸ್ವಿ ಸಿನಿಮಾ ಎನ್ನಬಹುದು. ಹಾಗೆಂದ ಮಾತ್ರಕ್ಕೆ ಸಿನಿಮಾ ಅದೇ ದೃಷ್ಟಿ ಕೋನದಲ್ಲೇ ತಲುಪಬೇಕು ಎಂದೇನೂ ಇಲ್ಲ. ಯಾಕೆಂದರೆ ಪ್ರತಿ ನೋಡುಗನ ಅನುಭವಗಳು, ಅನುಭವಿಸುವ ಕ್ರಮವೂ ವಿಭಿನ್ನವಾದ ತಳಹದಿಗಳ ಮೇಲೆ ರೂಪುಗೊಂಡಿರುತ್ತವಾದ್ದರಿಂದ ಅವರ ಅನುಭವಕ್ಕೆ ಬರುವುದೂ ವಿಭಿನ್ನವಾಗೇ ಇರುತ್ತದೆ.’
’ನಿಮ್ಮೊಂದಿಗಿನ ಪ್ರತಿ ಚರ್ಚೆಯು ನಾನು ಮಾಡುತ್ತಿರುವ ಈ ಸಿನಿಮಾಗೆ ಮತ್ತಷ್ಟು ಸ್ಪೂರ್ತಿ ನೀಡುತ್ತದೆ. ಅಕಸ್ಮಾತ್ ನೀವು ಈ ಪ್ರಾಜೆಕ್ಟ್ ಒಳಗೆ ಬರದಿದ್ದಲ್ಲಿ ಈ ಸಿನಿಮಾ ಯಾವ ರೀತಿಯಲ್ಲಿ execute ಆಗ್ತಿತ್ತೋ ನನಗೇ ಗೊತ್ತಿಲ್ಲ.’
ಕೌಶಿಕ್ ನ ಕೈ ಹಿಡಿದುಕೊಂಡ ಸುಮತಿ.. ಮುಜುಗರಕ್ಕೊಳಗಾದಂತಿದ್ದ ಕೌಶಿಕನ ಕೈಯನ್ನು ಮತ್ತಷ್ಟು ಬಿಗಿಮಾಡ್ತಾ.
’ ಹೌದು ಕೌಶಿಕ್ ನನ್ ಗಂಡ ತುಂಬಾ ಒಳ್ಳೆಯವರು ನನ್ನ ಯಾವ ಆಸೆಗಳಿಗೆ ಅವರು ಅಡ್ದ ಬರೋದಿಲ್ಲ. ನನ್ನ ಯಾವುದೇ ಆಸೆಗಳಿಗೆ ಅವ್ರು ಅಡ್ಡ ಬರದೆ ಅದನ್ನು ಪೂರೈಸಲು ಸಹಕರಿಸ್ತಾರೆ. ಮದುವೆ ಆಗಿ ಮಗಳು ಹುಟ್ಟಿದ ಮೇಲೆನೂ ನನ್ನ ಬಗ್ಗೆ ಎಂದೂ ನಿರಾಸಕ್ತಿ ತೋರಿಸಿದವರಲ್ಲ ನನಗೆ ಮೊದಲಿಂದಲೂ ಸಿನಿಮಾ ಆಸಕ್ತಿ ಜಾಸ್ತಿ ಇದೆ ಅಂತ ಇಶ್ಟೊಂದು ಸಿನಿಮಾಗಳನ್ನು ತಂದ್ಕೊಟ್ಟಿದ್ದಾರೆ. ಅವರೆಲ್ಲೇ ಹೋಗಲಿ ಅಲ್ಲಿನ ಬೆಸ್ಟ್ ಅನ್ನೋ ಸಿನಿಮಾಗಲನ್ನ ತಗೊಂಡು ಬರ್ತಾರೆ. ಈ ಇಪ್ಪತ್ತು ವರ್ಷಗಳು ಕಳೆದದ್ದೇ ಗೊತ್ತಾಗ್ಲಿಲ್ಲ.
ಆದ್ರೆ.... ಅದೂ.. ಹ್ಮ್.. ನಿಜ ಹೇಳ್ತೀನಿ ಕೌಶಿಕ್ ಅವತ್ತು ನಿಮ್ಮ ಪರಿಚಯ ಆದಾಗಿನಿಂದ ನಿಮ್ಮ ಮೇಲೆ ನನಗೇ ಗೊತ್ತಿಲ್ಲದ ಆಕರ್ಷಣೆ ಶುರುವಾಗಿದೆ. ನಿಮ್ಮ ಹಾಗೆ ನನ್ನೆಜಮಾನ್ರು ಯಾವತ್ತು ಇಷ್ಟು ಧೀರ್ಘವಾಗಿ ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದೇ ಇಲ್ಲ. ಹಾಗಂತ ಅವರ ಬಗ್ಗೆ ತಿರಸ್ಕಾರನು ಇಲ್ಲ.. ಅದೇಕೋ ಗೊತ್ತಿಲ್ಲ ಈ ಸಿನಿಮಾ ಸ್ಟಾರ್ಟ್ ಮಾಡಿದಾಗಿನಿಂದ ಸಿನಿಮಾ ಜೊತೆಜೊತೆಗೆನೆ ನನ್ನ ಜೀವನದಲ್ಲು ಬದಲಾವಣೆ ಮಾಡ್ಕೋಬೇಕನಿಸ್ತಿದೆ ನೀವೆನಂತೀರಿ..?
ಸುಮತಿ ಸಡನ್ನಾಗಿ ಇವನಲ್ಲಿ ಹೀಗೆ ಕೇಳಿದ್ದರಿಂದ ಗಲಿಬಿಲಿಗೊಂಡ ಕೌಶಿಕ್ ’ ಅದು.... ಅದೂ ಊ..’ ಅಂತ ಕಿಟಕಿಯೆಡೆಗೆ ಮುಖ ಮಾಡ್ತಾನೆ..
ಡೋರ್ ಬೆಲ್ಲಾದ ಶಬ್ದ ಕೇಳಿ ಸೀನ್ pause ಮಾಡ್ತಾಳೆ ಸುಮತಿ.. ರಶ್ಮಿ ಎದ್ದು ಹೋಗಿ ಬಾಗಿಲು ತೆಗೀತಾಳೆ ಅಲ್ಲಿ ಅರವಿಂದ್ ಒಳಗೆ ಬರ್ತಾನೆ.
ಅರವಿಂದ್ ಒಳಗೆ ಬಂದ ತಕ್ಷಣ
ಸುಮತಿ.’ ಓ ಇಲ್ಲಿಗೆ ಬಂದ್ಬಿಟ್ರಾ?’
’ಹೂ ಕೆಳಗಡೆ ನೀನಿರ್ಲಿಲ್ವಲ್ಲಾ ಅದಕ್ಕೆ ಹುಡುಕ್ಕೊಂಡು ಇಲ್ಲಿಗೆ ಬಂದೆ. ಏನ್ಮಾಡ್ತಾ ಇದ್ರಿ..?’ ಟಿವಿ ಕಡೆಗೆ ನೋಡಿ.. ಇನ್ನೂ ಸಿನಿಮಾ ಮುಗಿದಿಲ್ವಾ ..?
(ಮುಂದುವರಿಯುವುದು)