ಪ್ರೀತಿಗೂ ಪಡಿತರ ಪದ್ಧತಿ ಬೇಕೆ?

ಪ್ರೀತಿಗೂ ಪಡಿತರ ಪದ್ಧತಿ ಬೇಕೆ?

ಪ್ರೀತಿಗೂ ಪಡಿತರ ಪದ್ಧತಿ ಬೇಕೆ?

ಸಂಬಂಧಗಳ ಸ್ನೇಹ ಬಂಧಗಳ
ನಡುವೆಯೂ, ಸದಾ ಇತಿ
ಮಿತಿ ಇರಬೇಕು, ಯಾವುದೂ
ಅತಿಯಾಗದೇ ಇರಲೆಂಬ ಮಾತ
ಸದಾ ಕೇಳುತ್ತಿರುವೆವು ನಾವು

ಈ ಮಾತಿನಿಂದಾಗಿ ಕೇಳಿದೆ
ಪ್ರಶ್ನೆಯೊಂದ ನನ್ನೀ ಮನವು,
ನಮ್ಮ ಮನದ ಭಾವನೆಗಳನ್ನೂ
ಪಡಿತರ ಪದ್ಧತಿಯ ಮೂಲಕ
ವಿತರಿಸುತಿರಬೇಕೇ ನಾವು?

ಇದ್ದರೆ ಇರಲಿ ಇತಿ ಮಿತಿ ಎಲ್ಲವೂ
ದ್ವೇಷ, ಹಿಂಸೆ ಮತ್ತಶಾಂತಿಗೆ
ಮಿತಿಯಿಲ್ಲದಿರಲಿ ಜಗದಿ ಸದಾ
ಪ್ರೀತಿ, ಶಾಂತಿ ಮತ್ತಹಿಂಸೆಗೆ

ಪ್ರೀತಿ ಅದೆಷ್ಟು ಹಂಚಿದರೆಂದಿಗೂ
ಮಿತಿ ಮೀರಿದೆಯೆಂದೆನಿಸದು
ಶಾಂತಿಯನದೆಷ್ಟು ಹರಡಿದರೂ
ಅತಿಯಾಯ್ತೆಂದು ಅನಿಸುತಿರದು
ಕಟ್ಟು ಕಟ್ಟಳೆಯದೇಕೆ ಅಹಿಂಸೆಗೆ
ಎಂದೆನ್ನೀ ಮನ ಅನ್ನುತ್ತಲಿಹುದು!
***************

Rating
No votes yet

Comments