"ಕದಿರ್ " - ಏನಿದು?
ನಾನು ದಿನಾಲು ಆಪೀಸ್ ಗೆ ಹೋಗುವಾಗ ಬೆಂಗಳೂರಿನ ಪದ್ಮನಾಭನಗರದಿಂದ ಕದಿರೇನಹಳ್ಳಿ ಮೂಲಕ ಹಾದು ರಿಂಗ್ ರೋಡ್ ಸೇರುತ್ತಿದ್ದೆ. ಇದರಲ್ಲೇನು ವಿಶೇಷ ಅಂದ್ಕೊಂಡ್ರಾ? ಆವಾಗ್ಲೆ ಹುಟ್ಟಿದ್ದು ತವಕ.. ಏನಿದು ಕದಿರೇನಹಳ್ಳಿ...ಇಂತ ಹೆಸರು ಬೇರೆಲ್ಲೊ ಕೇಳಿಲ್ವಲ್ಲ ಅಂತ ಅನ್ಕೊತ್ತಾ ಇದ್ದೆ.
ಇಂದು ಅದರರ್ಥವನ್ನು ನಿಘಂಟುವಿನಲ್ಲಿ ನೋಡುವ ಸುಯೋಗ ಬಂತು....
ಕ.ಸಾ.ಪ ಪ್ರಕಟಿಸಿರುವ ಕನ್ನಡ ನಿಘಂಟುವಿನ ಪ್ರಕಾರ
ಕದಿರ್ (ನಾ) - ಕಿರಣ, ಕಾಂತಿ, ಹೊಳಪು, ಧಾನ್ಯದ ತೆನೆ.
ಕದಿರು (ಕ್ರಿ) - ಮಿಂಚುವುದು , ಪ್ರಕಾಶಿಸುವುದು.
ಕದಿರೇನಹಳ್ಲಿ ಎಂದರೆ ಮಿಂಚುವಹಳ್ಳಿ !!?
-ಜೈ ಕರ್ನಾಟಕ
Rating