ತೃಣಮಾತ್ರನ ಕನಸು

ತೃಣಮಾತ್ರನ ಕನಸು

ಬರಹ
ತೃಣಮಾತ್ರನ ಕನಸು ಎಲ್ಲ ಕರೆವರೆನ್ನ ತೃಣಮಾತ್ರ ನೋಡುತಿಹೆನು ಯಾವಾಗಲೂ ಕನಸು ಮಾತ್ರ ಕಂಡೆ ಕನಸಲಿ ಎಂಥ ದಿವ್ಯ ದರ್ಶನ ಎಂದೂ ಮಂಕಾಗಿರದ ಕನ್ನಡ ಮಾತೆಯನ್ನ ವಿಶ್ವದೆಲ್ಲೆಡೆ ಕನ್ನಡವೇ ಮನೆ ಮಾತು ಜಾತಿ ಧರ್ಮ ಕುಲವೆಲ್ಲವೂ ಕನ್ನಡಮಯವಾಗಿತ್ತು ಚಿನ್ನ ಬೆಳ್ಳಿ ವಜ್ರ ವೈಢೂರ್ಯಗಳ ಬೀದಿ ವ್ಯಾಪಾರ ಎಂದೆಂದೂ ಎಲ್ಲೆಡೆ ಹಬ್ಬದ ಸಡಗರ ನಿಸರ್ಗದತ್ತ ಸೌಂದರ್ಯ ನೋಡಿದೆಡೆಯೆಲ್ಲಾ ಹಸಿವು ನೀರಡಿಕೆಗಳ ಸುಳಿವೇ ಇಲ್ಲ ಇಲ್ಲೆಲ್ಲೂ ಬಡವ ಬಲ್ಲಿದ ಭೇದವೇ ತಿಳಿಯದ ಕಾಲ ಆಡಳಿತಗಾರರ ಅವಶ್ಯಕತೆಯೇ ಬೇಕಿಲ್ಲ ಎಲ್ಲ ಮನೆಗಳ ಕುಲದೇವಿ ಕನ್ನಡಮ್ಮ ಎಲ್ಲ ಮನಗಳ ಚಿಂತನೆಯಲ್ಲೂ ನನ್ನಮ್ಮ ಬೇಕಿಲ್ಲ ಯಾರಿಗೂ ಪಾರಿಭಾಷಿಕ ಕೋಶ ಹಳದಿ ಕೆಂಪು ಬಾವುಟ ಭೂಮ್ಯಾಕಾಶ ಹೊರಗಾದ ಗಲಾಟೆಗೆ ಬೆಚ್ಚಿ ಬಿದ್ದೆದ್ದೆ ಪರರ ಅಟ್ಟಹಾಸ ನೋಡಿ ಕುದಿದೆದ್ದೆ ಈ ಕನಸನ್ನು ನನಸಾಗಿಸಲು ಪಣ ತೊಟ್ಟಿರುವೆ ನನ್ನೊಡನೆ ಕೈ ಸೇರಿಸಿರೆಂದು ನಿಮ್ಮನು ಬೇಡುತಿರುವೆ ತ ವಿ ಶ್ರೀನಿವಾಸ,ಮುಂಬಯಿ -------------------------- ಕನಸು ಅಂದ್ರೇನು? ನಮ್ಮ ಮನಸ್ಸು ತುಂಬಾ ಚಂಚಲ. ಅದನ್ನು ಹಿಡಿದಿಡೋದು ಬಹಳ ಕಷ್ಟ. ಹಾಗೆ ಮಾಡಿದವನು ಪರಮಪುರುಷ ಅನ್ನಿಸಿಕೊಳ್ಳುವನು. ನಮ್ಮ ಮೆದುಳು ನಮ್ಮ ಹೃದಯದಂತೆ ಯಾವಾಗಲೂ ಕೆಲಸ ಮಾಡುತ್ತಲೇ ಇರುತ್ತದೆ. ಹಾಗೇ ಮನಸ್ಸಿನಲ್ಲಿ ಯಾವಾಗಲೂ ಏನಾದರೊಂದು ಯೋಚನೆಗಳು ಇದ್ದೇ ಇರುತ್ತವೆ. ಆದರೆ ಎಲ್ಲ ಯೋಚನೆಗಳನ್ನೂ ಬಹಿರಂಗಗೊಳಿಸಲಾಗುವುದಿಲ್ಲ. ಹಾಗೆ ಒಳಗೇ ಅದುಮಿಟ್ಟ ಯೋಚನೆಗಳು ಸುಷುಪ್ತಿ ಸ್ಥಿತಿಯಲ್ಲಿ ಇರುತ್ತದೆ. ಸೆರಗಿನಲ್ಲಿ ಕಟ್ಟಿಕೊಂಡ ಬೆಂಕಿಯಂತೆ ಅದು ಯಾವಾಗದರೊಮ್ಮೆ ಹೊರಗೆ ಬರಲೇ ಬೇಕು. ಸಾರ್ವಜನಿಕವಾಗಿ ಅದನ್ನು ಪ್ರದರ್ಶಿಸಲಾಗದೇ ಇದ್ದರೆ ಅದು ನಾವು ನಿದ್ದೆಮಾಡುತ್ತಿರುವಾಗ ಕನಸಿನ ರೀತ್ಯಾ ಹೊರ ಬಹುವುದು. ಎಲ್ಲರಲ್ಲೂ ಇರುವ ಇಚ್ಛೆ ಏನೆಂದ್ರೆ, ಈ ಕನಸನ್ನು ನನಸಾಗಿಸಬೇಕು ಅನ್ನುವುದು. ಸರಿಸುಮಾರು ಎಲ್ಲ ಜನಗಳಲ್ಲು ಇರುವುದು ಈ ಬಯಕೆ. ಹೇಗೆ ನಮ್ಮ ಯೋಚನೆಗಳ ಮೇಲೆ ನಮಗೆ ಕಡಿದಾಣವಿಲ್ಲವೋ ಹಾಗೇ ಯೋಚನೆಗಳು ಹುಚ್ಚುಚ್ಚಾಗಿ ಹರಿದಾಡುತ್ತಿರುತ್ತವೆ. ಹಲವು ಬಾರಿ ಹಾಗೆ ಕಂಡ ಕನಸನ್ನು ನನಸಾಗಿಸುವುದು, ತನ್ನೊಬ್ಬನಿಂದ ಸಾಧ್ಯವಿರುವಿದಿಲ್ಲ. ಆಗ ಇನ್ನೂ ಹೆಚ್ಚಿನ ಜನಗಳ ಸಹಾಯದ ಅಗತ್ಯವಿರುತ್ತದೆ. ಶತೃಗಳನ್ನು ಬಡಿದು ದೇಶವನ್ನೂ, ತನ್ನತನವನ್ನು ತಾನು ಕಾಪಾಡುವುದು ಒಬ್ಬ ರಾಜನಿಂದ ಸಾಧ್ಯವಿರದು. ಹಾಗೆ ನಾನೀ ಕನಸು ಕಾಣುತಿರುವೆ. ನನಗೆ ಅನ್ನಿಸಿದ ಹಾಗೆ ಎಲ್ಲ ಕನ್ನಡಿಗರಲ್ಲೂ ಇಂತಹ ಕನಸು ಇದ್ದೇ ಇದೆ. ಇದನ್ನು ನನಸಾಗಿವುದು ಅತ್ಯಗತ್ಯ. ನಾನೊಬ್ಬ ತೃಣಮಾತ್ರ = ನನ್ನಿಂದ ಸಾಧ್ಯವಾಗದು ಎಂದು ಕೈ ಕಟ್ಟಿ ಕೂರಲಾಗುವುದಿಲ್ಲ. ಆಗ ನಮ್ಮಂತೆಯೇ ಯೋಚಿಸುವವರನ್ನು ಕಲೆ ಹಾಕಬೇಕು. ಅಷ್ಟಕ್ಕೂ ಜನಬಲ ಸಾಕಾಗುವುದಿಲ್ಲ. ಆಗ ಕುಂಭಕರ್ಣನಂತೆ ಮಲಗಿರುವ ಸಹೋದರರನ್ನು ಎಬ್ಬಿಸಬೇಕಾದೀತು. ಅವರುಗಳೂ ಸಾಕಾಗುವುದಿಲ್ಲ. ಇದು ಹೇಳೀ ಕೇಳಿ ನಾವು ಮಾಡಲು ಹೊರಟಿರುವ ಮಹಾಯಜ್ನ್ಯ. ದ್ವಿಮನಸ್ಕರನೆಲ್ಲಾ ಈ ಹಾದಿಗೆ ತರಬೇಕು. ಇನ್ನೂ ಹೆಚ್ಚಿನದಾಗಿ ನಮ್ಮವರಲ್ಲದವರನ್ನೂ ನಮ್ಮೊಳಗೆ ತಂದುಕೊಂಡು ಅವರಿಗೆ ನಮ್ಮತನವನ್ನು ತುಂಬಿ ಅವರನ್ನೂ ಈ ಮಹತ್ಕಾರ್ಯಕ್ಕೆ ತೊಡಗಿಸಿದರೆ ಆಗ ಈ ಕನಸು ನನಸಾದೀತು ಎನ್ನುವುದು ನನ್ನ ಚಿಂತನೆ.