ಸೋನಿಯಾ ಗಾಂಧೀ, ರಹಿಮ್ ಮತ್ತು ರಾಮ್

ಸೋನಿಯಾ ಗಾಂಧೀ, ರಹಿಮ್ ಮತ್ತು ರಾಮ್

ಇದೊಂದು ಸಣ್ಣ ಹಾಸ್ಯ ಬರಹ. ಮಿಂಚಂಚೆಯಲ್ಲಿ ಬಂದದ್ದು.

ಇತ್ತೀಚಿಗೆ ಸೋನಿಯಾ ಗಾಂಧಿ ಅವರು ಒಂದು ಶಾಲೆಗೇ ಭೇಟಿ ಕೊಟ್ಟು ಅಲ್ಲಿರುವ ಹುಡುಗರ ಜೊತೆ ಸ್ವಲ್ಪ ಹೊತ್ತು ಮಾತನಾಡಿದ ನಂತರ ಮಕ್ಕಳೇ ಯಾರಿಗಾದರೂ ಏನಾದರೂ ಪ್ರಶ್ನೆ ಕೇಳಬೇಕೆಂದಿದ್ದರೆ ಕೇಳಬಹುದು ಎಂದಾಗ ಒಬ್ಬ ಹುಡುಗ ತನ್ನ ಕೈಯನ್ನು ಮೇಲೆ ಎತ್ತಿದ

ಸೋನಿಯಾ ಆ ಹುಡುಗನನ್ನು ನಿಲ್ಲಿಸಿ ನಿನ್ನ ಹೆಸರು ಏನೆಂದು ಕೇಳಿದಾಗ ಆ ಹುಡುಗ ರಹೀಂ ಎಂದು ಹೇಳಿದ.

ಸೋನಿಯಾ : ನಿನ್ನ ಪ್ರಶ್ನೆಗಳೇನು?

ರಹೀಂ :  ಸೋನಿಯಾ ಜಿ ನನಗೆ ಮೂರು ಪ್ರಶ್ನೆಗಳಿಗೆ ಉತ್ತರ ಬೇಕು. ಅವು ಯಾವುವೆಂದರೆ

೧) ಕೋರ್ಟಿನ ಆದೇಶವಿಲ್ಲದೇ ಬಾಬ ರಾಮ್ ದೇವ್ ಮೇಲೆ ಏತಕ್ಕೆ ದಾಳಿ ನಡೆಸಿದಿರಿ

೨) ಉಗ್ರ ಕಸಬ್ ಗೆ ಯಾಕಿನ್ನು ಶಿಕ್ಷೆ ಕೊಟ್ಟಿಲ್ಲ

೩) ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಯಾಕೆ ಬಾಬಾ ರಾಮ್ ದೇವ್ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಬೆಂಬಲ ಸೂಚಿಸುತ್ತಿಲ್ಲ?

ಅಷ್ಟರಲ್ಲಿ ಮಧ್ಯಾಹ್ನದ ಊಟಕ್ಕೆ ಗಂಟೆ ಬಾರಿಸಿತು. ಸೋನಿಯಾ ಹೇಳಿದರು ಎಲ್ಲರೂ ಊಟ ಮುಗಿಸಿ ಬನ್ನಿ ಆ ನಂತರ ಈ ಪ್ರಶ್ನೆಗಳಿಗೆ ಉತ್ತರಿಸುವೆ

ಊಟ ಆದ ನಂತರ ಮತ್ತೆ ಎಲ್ಲರೂ ಸೇರಿದರು. ಸೋನಿಯಾ ಮತ್ತೆ ಕೇಳಿದರು ಯಾರಿಗಾದರೂ ಏನಾದರೂ ಪ್ರಶ್ನೆ ಕೇಳಬೇಕು ಎಂದಿದ್ದಾರೆ ಕೇಳಿ ಎಂದರು. ಆಗ ಒಬ್ಬ ಹುಡುಗ ಕೈ ಎತ್ತಿದ ಸೋನಿಯಾ ಆ ಹುಡುಗನನ್ನು ನಿಲ್ಲಿಸಿ ಆತನ ಹೆಸರೆಂದು ಕೇಳಿದರು

ಹುಡುಗ : ನನ್ನ ಹೆಸರು ರಾಮ್

ಸೋನಿಯಾ : ನಿನ್ನ ಪ್ರಶ್ನೆಗಳೇನು ?

ರಾಮ್: ಸೋನಿಯಾ ಜಿ ನನಗೆ ಐದು ಪ್ರಶ್ನೆಗಳಿಗೆ ಉತ್ತರ ಬೇಕು. ಅವು ಯಾವುವೆಂದರೆ


೧) ಕೋರ್ಟಿನ ಆದೇಶವಿಲ್ಲದೇ ಬಾಬ ರಾಮ್ ದೇವ್ ಮೇಲೆ ಏತಕ್ಕೆ ದಾಳಿ ನಡೆಸಿದಿರಿ

೨) ಉಗ್ರ ಕಸಬ್ ಗೆ ಯಾಕಿನ್ನು ಶಿಕ್ಷೆ ಕೊಟ್ಟಿಲ್ಲ

೩) ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಯಾಕೆ ಬಾಬಾ ರಾಮ್ ದೇವ್ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಬೆಂಬಲ ಸೂಚಿಸುತ್ತಿಲ್ಲ?

೪) ಮಧ್ಯಾಹ್ನ ಊಟದ ಗಂಟೆ ಯಾಕೆ ೨೦ ನಿಮಿಷ ಮುಂಚೆ ಬಾರಿಸಿತು?

೫) ಮೊದಲು ಪ್ರಶ್ನೆ ಕೇಳಿದ ರಹೀಂ ಎಲ್ಲಿ?
Rating
No votes yet

Comments