ಅಂಕೆಯಲ್ಲಿರು ನೀ ಶಂಕೆ

ಅಂಕೆಯಲ್ಲಿರು ನೀ ಶಂಕೆ

ಕವನ

 ಅಂಕೆಯಲ್ಲಿರು ನೀ ಶಂಕೆ 

----------------------

ಅಂಕೆಯಲ್ಲಿರು ನೀ ಶಂಕೆ 

ಅನಗತ್ಯದಾಳಕ್ಕೆ ಇಳಿಯದಿರು.

ಸಂಶಯ ಸುಳಿಯೊಳಗೆ 

ಭಾವನೆಗಳನು ನೂಕದಿರು.

 

ನ್ಯಾಯ, ನೀತಿಗಳಲಿ ಶೋಧಿಸು 

ನೀ ವ್ಯಕ್ತಿ, ವಸ್ತು, ಸ್ಥಿತಿಯ.

ಕಾಣಲಿ ನಿನ್ನ ಕಣ್ಗಳು 

ಸತ್ಯಾಸತ್ಯಗಳ ಸ್ಪಷ್ಟತೆಯ.

 

ಕಪಟ ನಾಟಕಗಳಿಗೆ ದಾರಿ ತಪ್ಪದೆ,

ಮೋಸ ವಂಚನೆಗಳಿಗೆ ಮಣಿಯದೆ,

ದ್ವೇಷ ಮತ್ಸರಗಳ ಬೀಜ ಬಿತ್ತದಿರು.

ವಿನಯ ವಿವೇಕದ ಪೀಠದಲಿ ಕುಳಿತು

ತರ್ಕ ತತ್ವಗಳ ಜಾಣ್ಮೆಯರಿತು

ನನ್ನಾತ್ಮ  ಗೌರವದ ಕೈ ಹಿಡಿದಿರು.

- ಚಂದ್ರಹಾಸ ( ೬ - ೨೨ - ೨೦೧೧)