ಈರುಳ್ಳಿ.... ಮೇಷ್ಟ್ರು ! ಮತ್ತು ಮಕ್ಕಳ ಕೇಕೆ !
ಸುತ್ತ ಗಂಭೀರ ಕಾಡು...! ದಾರಿಯ ಪಕ್ಕ
ನಳನಳಿಸುವ ಹಸಿರು......
ಆ ಹಳ್ಳಿಯ...ಶಾಲೆಗೆ..
ಲಂಗ ಎತ್ತಿ, ಅಂಗಿ ಮಡಚಿ...
ಪುಟ್ಟ ಹಳ್ಳ ದಾಟಿ ಬರುವ ಪುಟಾಣಿಗಳು.!
ಅಂದು ... ಶಾಲೆಗೆ ಬೇಗನೆ ಹಾಜರ್...
ಎಲ್ಲರ ಕೈಯಲ್ಲೂ...ಈರುಳ್ಳಿ !
ಮೇಷ್ಟ್ರಿಂದ ಇಂದು ...
ಪ್ರಾಯೋಗಿಕ ಪಾಠ
ಮೇಜಿನ ಮೇಲೆ
ಮಕ್ಕಳು..ತಂದ ಈರುಳ್ಳಿಯ ರಾಶಿ...!
ಒಂದನ್ನೇ ಕತ್ತರಿಸಿ...
ಮೇಷ್ಟ್ರಿಂದ...ಈರುಳ್ಳಿಯ ಪದರುಗಳ ವಿವರಣೆ
ಆದರೆ...............
ಮಕ್ಕಳ ಕಣ್ಣಲ್ಲಿ ನೀರು !
ಏಕೆಂದರೆ
ಮಕ್ಕಳು ತಂದ ಈರುಳ್ಳಿ
ಮೇಷ್ಟ್ರ ಚೀಲ ಸೇರಿ ನಗುತ್ತಿತ್ತು !
ಆ ವಾರವಿಡೀ ..
ಮೇಷ್ಟ್ರು ಸಂತೆಯಲ್ಲಿ ಈರುಳ್ಳಿ ಕೊಳ್ಳಲೇ ಇಲ್ಲ.. !
ಇಂತಹ ನೂರಾರು ಕಾರಣಗಳಿಗೋ ಏನೋ....
ಎಲ್ಲೆಡೆ ಪುಟಾಣಿ ಮಕ್ಕಳ ಕನಸು...
ಶಾಲೆ ಬಿಟ್ಟ ಮೇಲೆ ಅರಳುತ್ತದೆ......
ಅದಕ್ಕಾಗೆ,,,,ಅವರು
ಕೇಕೆ ಹಾಕುತ್ತ ಖುಷಿಯಿಂದ ಮನೆಗೆ ಓಡುತ್ತಾರೆ !