ಪುಟ್ಟನ ಮನೆಯಲಿ ನಾಗರಹಾವು…(ಮಕ್ಕಳ ಕವನ)
ಪುಟ್ಟನ ಮನೆಯಲಿ
ನಾಗರವೊಂದು
ಅಡಗಿ ಕುಳಿತಿತ್ತು.
ವಿಷಯವ ತಿಳಿದು
ಪುಂಗಿಯ ಊದಿ
ತಲೆಯನು ಕೆಡಿಸಿದ್ದ.
ರೋಷದಿ ಹಾವು
ಬುಸ್ ಬುಸ್ ಎಂದು
ಕೋಪವ ಸೂಸಿತ್ತು.
ಪುಟ್ಟನ ಪುಂಗಿ
ಸದ್ದನೆ ಮಾಡದೆ
ಪಿ.ಪಿ ಎಂದಿತ್ತು.
ಹಾವಿನ ಕೋಪ
ನೆತ್ತಿಗೆ ಹೇರಿ
ಹೆಡೆಯನು ಎತ್ತಿತ್ತು.
ಹೆಡೆಯನು ಕಂಡು
ಹೆದರುತ ಬೆಂದು
ಈಚೆಗೆ ಓಡಿದನು.
ಮಂಚದ ಕೆಳಗೆ
ಇಲಿ ಬಿಲದೊಳಗೆ
ಅಡಗಿ ಕುಳಿತಿತ್ತು.
ರೋಷದಿ ಪುಟ್ಟ
ದೊಣ್ಣೆಯ ಹಿಡಿದು
ರಭಸದಿ ಬಂದಿದ್ದ.
ಕಾಣಲೆ ಇಲ್ಲ
ಮನೆಯೊಳಗೆಲ್ಲ
ಹಲ್ಲನು ಕಡಿದಿದ್ದ.
ಹಾವಿನ ರೋಷ
ನನಗಿದೆಯೆಂದು
ಡಬ್ಬವ ಹಿಡಿದಿದ್ದ
ಬಿಲವನು ಹುಡುಕಿ
ಮದ್ದನು ಸುರಿದು
ಸಮಯವ ಕಾದಿದ್ದ.
ಹಾವು ಬಾರದೆ
ಪುಟ್ಟನು ಬಿಡದೆ
ಸಮಯವು ಕಳೆದಿತ್ತು.
ಮದ್ದಿನ ವಾಸನೆ
ಮೂಗಿಗೆ ಬಡಿದು
ಹಾವು ನೊಂದಿತ್ತು.
ಕಷ್ಟವ ಸಹಿಸದೆ
ಬಾದೆಯ ತಾಳದೆ
ಹೊರಗಡೆ ಬಂದಿತ್ತು.
ಪುಟ್ಟನ ದೊಣ್ಣೆಗೆ
ಹಾವಿನ ಬರುವಿಗೆ
ಸಮಯವು ಕೂಡಿತ್ತು.
ಪುಟ್ಟನ ಕೋಪಕೆ
ಹಾವಿನ ಸಾವಿಗೆ
ಸಂತಸ ತಂದಿತ್ತು…
ವಸಂತ್
Rating
Comments
ಉ: ಪುಟ್ಟನ ಮನೆಯಲಿ ನಾಗರಹಾವು…(ಮಕ್ಕಳ ಕವನ)