ಕಾರಣ ಹೇಳಿ ಹೋಗು ಒಮ್ಮೆ ಇನಿಯ
ಕಲ್ಪನಾ ಲೋಕದಲಿ ಸ್ವಚ್ಚಂದವಾಗಿ ಹಾರಾಡುತ್ತಿದ್ದ
ನನ್ನ ಬಾಳಿನಲಿ ಬಿರುಗಾಳಿಯಂತೆ ಬಂದೆ ನೀನು
ಮುಚ್ಚಿದ್ದ ನನ್ನ ಹೃದಯದ ಬಾಗಿಲನ್ನು ಮೆತ್ತಗೆ
ತಟ್ಟಿ ಒಳಗೆ ಬಂದು ಕುಳಿತು ನನ್ನನ್ನಾವರಿಸಿದೆ ನೀ...
ಬಂಜರು ಭೂಮಿಯಂತಿದ್ದ ನನ್ನ ಹೃದಯದಲ್ಲಿ
ಪ್ರೀತಿಯ ಬೀಜವ ಬಿತ್ತಿ ಹೊಸಬಾಳಿನ ಕನಸ ಹುಟ್ಟು ಹಾಕಿದೆ
ನೀನಿಲ್ಲದೆ ನಾನಿಲ್ಲ ನಾನಿಲ್ಲದೆ ನೀನಿಲ್ಲ ಎಂದು
ಮಧುರ ಮಾತುಗಳನ್ನಾಡಿದೆ ನೀನಂದು...
ನೀ ಬಿತ್ತಿದ ಪ್ರೀತಿಯ ಬೀಜ ಮೊಳಕೆಯೊಡೆದು
ಗಿಡವಾಗಿ ಮರವಾಗಿ ಫಲವೀಯುವ ಹೊತ್ತಿನಲ್ಲಿ
ನೀ ನನ್ನ ತೊರೆದು ಹೊರಟು ನಿಂತಿರುವೆ
ಕಾರಣ ಹೇಳಿ ಹೋಗು ಒಮ್ಮೆ ಇನಿಯ....
Rating