ಬಿಳಿಗಿರಿಯ ಬೆಟ್ಟಕ್ಕೆ ಹೋಗೋಣ ಬನ್ನಿ !!! ದಾರಿಯಲ್ಲಿ ಕಾಣುವ ಯಳಂದೂರಿನ ವಿಸ್ಮಯ ದೇಗುಲ ನೋಡಿಬನ್ನಿ!!!! !!! ಪಯಣ ..01 .!!!
ದಾರಿ ದರ್ಶನ!!! |
ಮನೆಯಲ್ಲಿ ಸಡಗರವೋ ಸಡಗರ ಬಿಳಿಗಿರಿ ರಂಗನ ಬೆಟ್ಟದಲ್ಲಿ ದಿನಾಂಕ ೨೭/೦೫/೨೦೧೧ ರಂದು ನಡೆಯಲಿದ್ದ ಮನೆಯ ಕಾರ್ಯಕ್ರಮ ಒಂದರ ತಯಾರಿ ನಡೆದಿತ್ತು. ಹಿರಿಯರು ಮನೆಯ ನೆಂಟರು, ಎಲ್ಲರೂ ಕಾದಿದ್ದ ಆ ದಿನ ಬಂದಿತು. ಬಿಳಿಗಿರಿ ರಂಗನ ಬೆಟ್ಟದ ಕಡೆ ಪಯಣ ಶುರುವಾಯಿತು.ಎಲ್ಲರಿಗೂ ಆ ಬೆಟ್ಟದ ಬಗ್ಗೆ ಏನೋ ವಿಶೇಷ ಒಲವು,ಪ್ರಕೃತಿಯ ಒಡಲಲ್ಲಿ ನಲಿದಿರುವ ಆ ಸ್ಥಳದ ಬಗ್ಗೆ ಕುತೂಹಲ !!!. ಎಷ್ಟು ಬಾರಿ ತೆರಳಿದರೂ ಹೊಸದಾಗಿ ಕಾಣುವ ಪ್ರಕೃತಿ ಚೆಲುವು, ವನ್ಯ ಜೀವಿಗಳ ದರ್ಶನ ,ಹಾಗು ಚೆಲುವ ಬಿಳಿಗಿರಿ ರಂಗನ ಬಗ್ಗೆ ಹರಡಿರುವ ಹಲವಾರು ಕಥೆಗಳು ಇವೆಲ್ಲಾ ಇಲ್ಲಿನ ವಿಶೇಷ.ಪಯಣ ಮೈಸೂರಿನಿಂದ ಹೊರಟು ಟಿ. ನರಸೀಪುರ , ಸಂತೆ ಮರಹಳ್ಳಿ , ಯಳಂದೂರು ತಲುಪುವಷ್ಟರಲ್ಲಿ ಕೆಲವರಿಗೆ ಕಾಫಿ ಕುಡಿಯುವ ಹಂಬಲ.ಹಾಗಾಗಿ ಸ್ವಲ್ಪ ವಿರಾಮಕ್ಕಾಗಿ ಅಲ್ಲಿ ನಿಲ್ಲ ಬೇಕಾಯಿತು. ಕಾಫಿ ಕುಡಿಯುತ್ತಾ ಹಾಗೆ ಕಣ್ಣು ಹಾಯಿಸಿದರೆ ಅಲ್ಲಿ ಕಂಡಿದ್ದು ಒಂದು ಹಳೆ ದೇವಾಲಯ ಸಂಕೀರ್ಣ , ಹತ್ತಿರ ಹೋಗಿ ನೋಡಿದಾಗ ಅದ್ಭುತ ವೆನ್ನುವ ಮಾಹಿತಿ ದೊರಕಿತು.ಸುಮಾರು ಒಂದು ಘಂಟೆ ಕಾಲ ನನ್ನ ಕ್ಯಾಮರಾಗೆ ಬಿಡುವಿಲ್ಲದ ಕೆಲಸ. ಮನೆಗೆ ಬಂದು ಇತಿಹಾಸದ ಪುಸ್ತಕ ತೆರೆದಾಗ ಸಿಕ್ಕ ಮಾಹಿತಿ ಅಚ್ಚರಿ ಹುಟ್ಟಿಸಿತ್ತು.ಬನ್ನಿ ದೇವಾಲಯ ಪರಿಚಯ ಮಾಡಿಕೊಳ್ಳೋಣ.ವಿಸ್ಮಯ ಲೋಕಕ್ಕೆ ಹೋಗಿಬರೋಣ. "ಯಳಂದೂರು" ಕರ್ನಾಟಕದ ಅತಿ ಚಿಕ್ಕ ತಾಲೂಕು ಕೇಂದ್ರವಾಗಿದ್ದು, ಚಾಮರಾಜ ನಗರ ಜಿಲ್ಲೆಗೆ ಸೇರಿದೆ.ಕೇವಲ ಅರವತ್ತ ಮೂರು ಗ್ರಾಮಗಳ ತಾಲೂಕು ಇದು.ಎರಡು ಹೋಬಳಿ ಕೇಂದ್ರಗಳನ್ನು ಹೊಂದಿದೆ.ಈ ಊರಿನ ಅಸ್ತಿತ್ವದ ಬಗ್ಗೆ ಒಂದು ಸ್ವಾರಸ್ಯಕರವಾದ ಕಥೆ ಹೀಗಿದೆ, ನೀಲಗಿರಿಯಲ್ಲಿ ತಪಸ್ಸನ್ನು ಆಚರಿಸುತ್ತಿದ್ದ "ಕಪಿಲ ಋಷಿ " ತನ್ನ ಕಮನ್ದಲದಲ್ಲಿ ಗಂಗೆಯ ನೀರನ್ನು ಉತ್ತರಾಭಿಮುಖವಾಗಿ ಪ್ರೋಕ್ಷಣೆ ಮಾಡಿ ನದಿಯನಾಗಿ ಮಾಡಿ ಹರಿಸಬೇಕೆಂದು ನಂದೀಶ್ವರನು ಪ್ರಾರ್ಥಿಸಿದನೆಂದೂ , ಆ ಪ್ರಾರ್ಥನೆಯಂತೆ "ಕಪಿಲ ಋಷಿ" ಗಂಗಾ ನದಿ ನೀರನ್ನು ಪ್ರೋಕ್ಷಣೆ ಮಾಡಲಾಗಿ "ಸುವರ್ಣಾವತಿ" ನದಿ ಹುಟ್ಟಿತೆಂದೂ, ಆ ನಂತರ ಬ್ರಹ್ಮ ದೇವನು ನದಿಯ ದಡದ ಮೇಲೆ "ಎಳೆಯನ್ದೂರು" ಎಂಬ ಹೆಸರಿನ ಪಟ್ಟಣ ಸ್ಥಾಪಿಸಿದನೆಂದು ಹೇಳುತ್ತಾರೆ. ಇದನ್ನು "ಎಪಿಗ್ರಾಫಿಯಾ ಕರ್ನಾಟಕ" ದಲ್ಲೂ ತಿಳಿಸಲಾಗಿದೆ
ಯಳಂದೂರು ಪಟ್ಟಣ ಮೊದಲು ಹದಿನೈದು ಹದಿನಾರನೇ ಶತಮಾನದಲ್ಲಿ ಚೋಳರ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿದ್ದು ಅಲ್ಲಿ ಅನೇಕ ಕುರುಹುಗಳನ್ನು ಕಾಣಬಹುದಾಗಿದೆ. ಅಂತಹ ಒಂದು ವಿಸ್ಮಯ ದೇಗುಲವೇ 'ಗೌರೀಶ್ವರ " ದೇವಾಲಯ. ಸುಂದರ ಕೆತ್ತನೆಯ ಕಲಾ ದೇಗುಲದಲ್ಲಿ ವಿಸ್ಮಯ ಗೊಳಿಸುವ ಅದ್ಭುತ ಶಿಲ್ಪಕಲೆಗಳನ್ನು ನೋಡಬಹುದಾಗಿದೆ. ಬನ್ನಿ ವಿಸ್ಮಯ ಲೋಕಕ್ಕೆ ಹೋಗಿಬರೋಣ . | ||||
ಕಲ್ಲಿನ ಬಳೆಯ ವಿಸ್ಮಯ ಇಲ್ಲಿದೆ!!
|
|
||||||
vi
ಅಂದಿನ ಸಂಪ್ರದಾಯದ ಜನರೇ ಇವರು !!! |
ಯಾವ ಶಿಲ್ಪಿಯ ಕಲ್ಪನೆಯ ಕನಸೋ ಇದು!!! |
ಅವಸಾನ ವಾಗುತ್ತಿರುವ ನಮ್ಮನ್ನು ನೋಡಿ ನಿಮ್ಮ ಮನ ಕರಗದೆ??? |
ಎಂತಹ ಅದ್ಭುತ ಶಿಲ್ಪಕಲೆ ಆಲ್ವಾ !!! ಈ ದೇವಾಲಯವನ್ನು ] ಪದಿನಾಡಿನ ಪ್ರಥಮ ಪ್ರಭುವಾದ "ಸಿಂಗದೇಪಭೂಪ "[ದೇಪೇಂದ್ರ] ಕಟ್ಟಿಸಿದ್ದಾಗಿಯೂ, ಈ "ಗೌರೀಶ್ವರ" ದೇವಾಲಯವನ್ನು ಕ್ರಿ.ಶ. 1535-1560 ರೊಳಗೆ ನಿರ್ಮಾಣವಾಗಿರುವುದಾಗಿ ಎಪಿಗ್ರಾಫಿಯಾದಲ್ಲಿ ಅಂದಾಜಿಸಲಾಗಿದೆ. ವಿಕಿ ಪೀಡಿಯಾದಲ್ಲಿ ಹೀಗೆ ಬರೆಯಲಾಗಿದೆ Gaurishwara temple was built in 1550 A.D during the reign of Devabhupala (Singadepa) of the Chola dynasty. This temple was rebuilt in 1654 -1655 by Muddabhupa, grand son Devabhupala, as the old temple was highly dilapidated. The temple has some unique features which makes it very distinctive. Though there is no towering entrance gopura (as is common in South Indian temples), it has a mahadwara or gate called “Bale Mantapa” (Bangle entrance) which has exquisitely stone carved themes, on the walls and pillars, depicting mythological stories of Andhakasura [1] (slaying of demon Andhakasura0, Narasimha (Half Man – Half Lion God) in various manifestations of Dakshinamurthy and Sharaba, Bhirava, Kalingamardhana krishna, Vali and Sugriva. Monolithic stone chains (stone carved rings - 20 cm each) adorn the four corners and the door side of the entrance which gives the name of Bale (Bangle) Mantapa to the temple entrance.
Historic importance
It was under the rule of the Chola Kingdom of Tamilnadu in the 15th and 16th centuries. When it came under the rule of Wodeyars of Mysore, in the early 18th century, Dewan Poorniah, a notable Dewan from here, was gifted the land of Yalandur and its surrounding villages by Krishnaraja Wodeyar III - the King of Mysore, in appreciation of the great service rendered to the Mysore State by Poorniah as Dewan or the Prime Minister. Poorniah was instrumental in making the Mysore state into a strong empire and greatly admired, as son of the soil, for having developed the region with several visionary works.
ಕಾಫಿಗಾಗಿ ನಿಂತು ಒಂದು ಅದ್ಭುತವಾದ ದೇವಾಲಯವನ್ನು ದರ್ಶಿಸುವ ಭಾಗ್ಯ ನಮ್ಮದಾಯಿತು ದೇವಾಲಯ ಬಾಗಿಲು ಮುಚ್ಚಿದ್ದ ಕಾರಣ ಒಳಗಡೆ ಹೋಗಲಾಗಲಿಲ್ಲ . ನೀವೂ ಒಮ್ಮೆ ಇಲ್ಲಿಗೆ ಭೇಟಿ ಕೊಡಿ , ಒಳ್ಳೆಯ ವಿಸ್ಮಯ ಸವಿಯುವ ಭಾಗ್ಯ ನಿಮಗೆ ಸಿಗುತ್ತದೆ. ಮುಂದೆ ನಮ್ಮ ಪಯಣ ಬಿಳಿಗಿರಿರಂಗನ ಬೆಟ್ಟಕ್ಕೆ ಸಾಗಿತು !!!
ಕಾನನದ ಹಾದಿ ಬಿಳಿಗಿರಿ ರಂಗನ ಸನ್ನಿಧಿಗೆ!!! |
ಮುಂದಿನ ಸಂಚಿಕೆಯಲ್ಲಿ ಬಿಳಿಗಿರಿ ರಂಗನ ಬೆಟ್ಟದ ಅನುಭವದ ಬಗ್ಗೆ ಬರೆಯುವೆ ನಮಸ್ಕಾರ.
Comments
ಉ: ಬಿಳಿಗಿರಿಯ ಬೆಟ್ಟಕ್ಕೆ ಹೋಗೋಣ ಬನ್ನಿ !!! ದಾರಿಯಲ್ಲಿ ಕಾಣುವ ...
In reply to ಉ: ಬಿಳಿಗಿರಿಯ ಬೆಟ್ಟಕ್ಕೆ ಹೋಗೋಣ ಬನ್ನಿ !!! ದಾರಿಯಲ್ಲಿ ಕಾಣುವ ... by Jayanth Ramachar
ಉ: ಬಿಳಿಗಿರಿಯ ಬೆಟ್ಟಕ್ಕೆ ಹೋಗೋಣ ಬನ್ನಿ !!! ದಾರಿಯಲ್ಲಿ ಕಾಣುವ ...