ಮಳೆ..ಇಳೆ ......ನಾವು

ಮಳೆ..ಇಳೆ ......ನಾವು

ಕವನ

       ಆಕಾಶ  ಧೋ....ಎಂದು  ಅತ್ತಾಗ

      ಭೂತಾಯಿ ಕೆರೆ ನದಿಗಳೆಂಬ ಪಾತ್ರೆ  ಹಿಡಿದು

      ಕಂಬನಿ ತುಂಬಿಸಿಕೊಳ್ಳುವ  ಸಹನಶೀಲೆ

      ನಭದ ಕಂಬನಿ ಕೋಡಿಯಾದಾಗ

      ಮನುಷ್ಯ ಬದುಕು..ತೇಲುವದು ಕಸವಾಗಿ

 

      ಮಳೆ..ಬಿಡದೇ ಅಂಟಿಕೊಂಡರೆ.....!

     

      ಬಸ್ ಸ್ಟ್ಯಾಂಡಿನಲ್ಲಿ  ಕೈಚೆಲ್ಲಿ ಕುಳಿತ ಕೂಲಿಯ

     ಕೆಲಸವಿಲ್ಲದ ಕೈಯಲ್ಲೊಂದು ಮೋಟು ಬೀಡಿ

      ತುಟಿ ಸುಡುವವರೆಗೂ....

      ಸುಡುತ್ತಿದೆ....!

 

      ಮಳೆಯ ಹೊಡೆತಕ್ಕೆ......1

      ತೊಯ್ದು ತೊಪ್ಪೆಯಾಗಿ  ನಿಂತ  ಯುವತಿಗೆ

       ನೆಪಕ್ಕಷ್ಟೆ ...ಮರೆಮಾಡುವ  ಬಣ್ಣದ  ಛತ್ರಿ.!

       ಛತ್ರಿಯಂತ.. ಹುಡುಗರಿಗೆ

       ಮೈಯೆಲ್ಲಾ ....ಕಣ್ಣು..!

       ನೋಟದ  ಮೊಳೆಯ ...ಹೊಡೆತ

      

       ಮಣ ಭಾರ ಪುಸ್ತಕ ಹೊತ್ತು..!

       ಬಾಗಿದರೂ ..ಬೀಗಿ ನಡೆಯುವ

       ಪುಟಾಣಿಗಳ....ಮಂದೆ

       ಕೈ ಹಿಡಿದು ಶಾಲೆಗೊಯ್ಯುವ...

       ಅಪ್ಪಂದಿರೇ......ಮುಂದೆ  !

       ಬಲವಂತದ ಮಾಘ ಸ್ನಾನ

      

       ಮೊದಲ ಮಳೆ ಖುಷಿಯ  ಮಧುಪಾತ್ರೆ

       ಉಲ್ಲಾಸ ಮೊಳೆಯುತ್ತದೆ.

       ಸುದೀರ್ಘವಾದರೆ.......ಕೊಳೆಯುತ್ತದೆ

       ಆದರೆ.....

       ನವಕಾಂತಕಾಂತೆಯರ......ಏಕಾಂತಕ್ಕೆ ಮಾತ್ರ

       ವರ್ಷಕಾಲ.....ಅಯಸ್ಕಾಂತವಂತೆ..!

     

     

Comments