ಪ್ರಜಾಪ್ರಭುತ್ವ(೩)- ಆಣೆ ಪ್ರಮಾಣಗಳು ಸಂವಿದಾನಕ್ಕೆ ಪೂರಕವಲ್ಲವೆ? ಮೂಡನಂಭಿಕೆಯೆ ?

ಪ್ರಜಾಪ್ರಭುತ್ವ(೩)- ಆಣೆ ಪ್ರಮಾಣಗಳು ಸಂವಿದಾನಕ್ಕೆ ಪೂರಕವಲ್ಲವೆ? ಮೂಡನಂಭಿಕೆಯೆ ?

ಪ್ರಜಾಪ್ರಭುತ್ವ(೩)-  ಆಣೆ ಪ್ರಮಾಣಗಳು ಸಂವಿದಾನಕ್ಕೆ ಪೂರಕವಲ್ಲವೆ? ಮೂಡನಂಭಿಕೆಯೆ ?

ಕರ್ನಾಟಕದ ಹಾಲಿ ಮುಖ್ಯಮಂತ್ರಿ ಶ್ರೀಯಡಿಯೂರಪ್ಪನವರು ಹಾಗು ಮಾಜಿ ಮು.ಮ. ಶ್ರೀ ಕುಮಾರಸ್ವಾಮಿಯವರ ಕದನಕುತೂಹಲರಾಗದ ಹಾಡು ತಾರಕ ಸ್ಥಾಯಿಗೆ ತಲುಪಿದ್ದು, ಕಡೆಗೆ ವೀರಾವೇಶದಿಂದ ಇಬ್ಬರು ಶ್ರೀಧರ್ಮಸ್ಥಳಮಂಜುನಾಥನ ಸನ್ನಿದಿಗೆ ಬಂದು ಸತ್ಯಪ್ರಮಾಣ ಮಾಡುವಲ್ಲಿಗೆ ಬಂದು ತಲುಪಿತು.
  ಆದರೆ ನಂತರ ಅಪಸ್ವರ ಪ್ರಾರಂಬವಾಯಿತು. ಕೆಲವು ಪಕ್ಷಗಳು, ನಾಗರೀಕ ಸಮಿತಿಗಳು ಮತ್ತು ವಿಚಾರವೇದಿಕೆಗಳ ಸದಸ್ಯರು ಈ ರೀತಿ ಪ್ರಮಾಣಮಾಡುವುದು ಸಂವಿದಾನಕ್ಕೆ ಅಪಚಾರ ಎನ್ನುವ ರೀತಿ ಮಾತನಾಡಿದರು. ಅಷ್ಟೆ ಅಲ್ಲ ಅದು ಎನೊ ಧಾರ್ಮಿಕವಿದಿಯೆಂಬಂತೆ ಬಿಂಬಿಸಲಾಯಿತು. ಅಷ್ಟೆ ಅಲ್ಲದೆ ಕೆಲವು ಧಾರ್ಮಿಕ ಮುಖಂಡರು ಮಠದ ಸ್ವಾಮಿಗಳು ಗಾಭರಿ ಬಿದ್ದವರಂತೆ ಆ ರೀತಿ ಪ್ರಮಾಣಮಾಡುವುದು ಬೇಡವೆಂದು ಅಪ್ಪಣೆ ಕೊಡಿಸಿದರು. ಅವರುಗಳಿಗೆ ಏನೊ ಬೀತಿ ಮು.ಮ.ಗಳಿಗೆ ಏನಾದರು ಆಗುವುದು ಅಥವ ಇಬ್ಬರು ಸುಳ್ಳರ ಮದ್ಯೆ ಸಿಲುಕಿ ಶ್ರೀ ಮಂಜುನಾಥನ ಮರ್ಯಾದೆ ಬೀದಿಗೆ ಬರುವುದೊ ಎಂಬ ಆತಂಕ. ಆದರಲ್ಲಿ ಈ ರೀತಿ ಪ್ರಮಾಣ ಮಾಡುವದರಲ್ಲಿ ಏನು ತಪ್ಪು ಎಂದು ಯಾರಿಗು ಅರ್ಥವಾಗುತ್ತಿಲ್ಲ. ಇನ್ನು ಕೆಲವರು ಈ ರೀತಿ ಪ್ರಮಾಣಮಾಡುವ ಬದಲು ಇದು ಕೋರ್ಟಿನ ವ್ಯಾಪ್ತಿಯಲ್ಲಿ ವಿಚಾರಣೆ ನಡೆಯಬೇಕು ಎಂದರು.
  ಆದರೆ ಮದ್ಯದಲ್ಲಿ ಎಲ್ಲರು ಒಂದು ವಿಷಯ ಮರೆತು ಹೋದರು. ನಮ್ಮ ಸಂವಿದಾನ ಈ ರೀತಿಯ ಆಣೆ ಪ್ರಮಾಣಗಳನ್ನು ಒಪ್ಪುತ್ತದೆ ಮತ್ತು ಪುರಸ್ಕರಿಸುತ್ತದೆ. ಇದೆ ರಾಜಕೀಯ ಮುಖಂಡರು ಸಂವಿದಾನಬದ್ದವಾಗಿ ಅಧಿಕಾರ ಸ್ವೀಕರಿಸುವಾಗ ದೇವರ ಹೆಸರಲ್ಲಿ ಪ್ರಮಾಣ ಮಾಡಲು ಅವಕಾಶವಿದೆ. ಅಲ್ಲಿ ನಾವು ಒಪ್ಪಿಕೊಳ್ಳುವಾಗ ಇಲ್ಲೇಕೆ ಸಾದ್ಯವಿಲ್ಲ. ಹಾಗೆಯೆ ಒಂದು ವೇಳೆ ಇದು ಕೋರ್ಟ್ ವ್ಯಾಪ್ತಿಗೆ ಬಂದಲ್ಲಿ , ಕೋರ್ಟ್ ಸಹ ಸಾಕ್ಷಗಳನ್ನು ಸ್ವೀಕರಿಸುವಾಗ , ನಾನು ನಿಜವನ್ನೆ ಹೇಳುತ್ತಿದ್ದೇನೆ ಎಂದು ಸಾಕ್ಷಿ ಹೇಳುವಾಗ, ಧರ್ಮಗ್ರಂಥಗಳಾದ ಭಗವದ್ಗೀತೆ, ಕುರಾನ್, ಬೈಬಲ್ ಮೇಲೆ ಪ್ರಮಾಣ ಮಾಡಲು ಹೇಳುತ್ತದೆ !  ಹಾಗಿರುವಾಗ ಮಂಜುನಾಥನ ಮೇಲೆ ಪ್ರಮಾಣಮಾಡುವುದು ಸಂವಿದಾನ ವಿರೋದಿಯು ಅಲ್ಲ , ಕೋರ್ಟಗಳ ವಿರೋದಿಯು ಅಲ್ಲ.
  ಮಠದ ಸ್ವಾಮಿಗಳ ಅಷ್ಟೊಂದು ಗಾಬರಿಯಾಗುವ ಕಾರಣವಿಲ್ಲ , ಇಬ್ಬರು ಮುಖ್ಯಮಂತ್ರಿಗಳ ಸಹ ಎಷ್ಟು ಬೇಕಾದರು ಸುಳ್ಳನ್ನು, ಸುಳ್ಳು ಪ್ರಮಾಣಗಳನ್ನು ಜೇರ್ಣಿಸಿಕೊಳ್ಳಬಲ್ಲ ಶಕ್ತಿಯುಳ್ಳವರು. ಮತ್ತು ಮಂಜುನಾಥನಾದರು ನಿರಾಕಾರ ನಿರ್ವಿಕಾರ ನಿರ್ಗುಣ ನಿರಹಂಕಾರ ..........

 ಈ ಪ್ರಸಂಗದಲ್ಲಿ ಸಮತೋಲನದಿಂದ ವರ್ತಿಸಿದವರೆಂದರೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರು, ಇಬ್ಬರು ಮುಖ್ಯಮಂತ್ರಿಗಳು ಸಾಮನ್ಯರಂತೆ ಬಂದಲ್ಲಿ , ವಿಧಿಯನ್ನು ಏರ್ಪಾಡುಮಾಡಲು ಸಿದ್ದ ಅಂದರು. ಯಾರು ಕೇಳಿಸಿಕೊಳ್ಳಲಿಲ್ಲ. ದೇವರಿಗೆ ಮುಖ್ಯಮಂತ್ರಿ ಹಾಗು ಒಬ್ಬ ಕೂಲಿಯವನು ಇಬ್ಬರ ನಡುವೆ ಯಾವ ವೆತ್ಯಾಸವು ಇಲ್ಲ.

 

Rating
No votes yet

Comments