ಕವಿಗಳಾಗೋಣ!

ಕವಿಗಳಾಗೋಣ!

ಕವನ

ಕವಿಗೆ ನದಿ ಧ್ಯಾನ ದೊರಕಿಸುವ ದೈವಸ್ವರೂಪಿ.
ಮರಳದೋಚುವ ಮಂದಿಗೆ ಬೆಲೆಬಾಳುವ ಮಾಲು.

ಕವಿಗೆ ಅಕ್ಷಯ ಕಾನನ ಹಲವು ಅಚ್ಚರಿಯ ಒಡಲು.
ಮರವ ದೋಚುವ ಖದೀಮರಿಗೆ ಕಾಡು,
ಲಾರಿಗೆ ತುಂಬುವ ಕಳ್ಳನಾಟ.

ಕವಿಗೆ ಕೋಗಿಲೆಯ ಕಂಡು ನೆನಪಾಗಿದ್ದು ಪಂಪ.
ಗುರಿಯಿಟ್ಟ ಬೇಟೆಗಾರನಿಗೆ ಕೋಗಿಲೆ ಸಂಜೆಯ ಖರ್ಚಿಗೆ ಕಾಸು.

ಎಲ್ಲರೂ ಕವಿಗಳಾಗಲಿ.
ಅಥವಾ ಎಲ್ಲರ ಹೃದಯವು ಕವಿಹೃದಯವಾಗಲಿ.