ಕವಿ ಮತ್ತು ದನಗಾಯಿ

ಕವಿ ಮತ್ತು ದನಗಾಯಿ

ಕವನ

ಸೂರ್ಯೋದಯವ ನೋಡಲು ಹೊರಟರಿಬ್ಬರು;
ಒಬ್ಬ ಕವಿ,ಮತ್ತೊಬ್ಬ ಹಳ್ಳಿಯ ದನಗಾಯಿ.
ಇಬ್ಬರು ಏರಿ ಕುಳಿತರು ಆ ಬೆಟ್ಟದ ತುದಿ,
ನಿಧಾನಕ್ಕೆ ಮೂಡಣ ರಂಗೇರಿ ಗೋಚರಿಸಿದ ರವಿ
ಚದುರಿಸಿದ ಧರೆಗೆ ಕೃಪೆತೆರದಿ ಕಿರಣ.

ರವಿಯ ಚೆಲುವಿಗೇ ಕವಿ ಭಾವಪರವಶನಾದ.
ಕವಿಮೊಗ ಕಾಂತಿಯಿಂದ ಪ್ರಜ್ವಾಲಿಸುತಿದೆ.
ಕವಿಯ ನರನಾಡಿಯಲ್ಲಿ ಚೈತನ್ಯಸಂಚಾರ.
ದುಮ್ಮಿಕಿ ಹರಿಯುತಿದೆ ಭಾವಝರಿ.
ಒಂದರಿಂದೇ ಒಂದರಂತೇ ಕವಿತೆಗಳು ಮೂಡತೊಡಗಿವೆ ಮೂಡಣದ ರವಿಯ ಜೊತೆಗೂಡಿ.

ಪಕ್ಕದಲ್ಲೆ ಇದ್ದ ದನಗಾಯಿ ಹಳ್ಳಿಗ. ನೋಡುತ್ತಿದ್ದ ಆ ಅರುಣೋದಯವ.
ಉದಯರವಿಯ ಚೆಲುವ ಕಂಡು,ದನಗಾಯಿಯ ಮನದಲ್ಲಿ ಏನೋ ಹೇಳಬೇಕೆಂಬ ಭಾವ, ಪದಗಳೇ ಇಲ್ಲ ಆ ಅನಕ್ಷರಸ್ತ ಕವಿಗೆ.ಕೊನೆಗೆ ಹೊರಬಂತು ಒಂದೇ ಒಂದು ಮಾತು,
'ಅಬ್ಬಾ!',
ಆ ಒಂದು ಶಬ್ದದಲ್ಲಿ ಎಲ್ಲವೂ ಇತ್ತು.
ಹಳ್ಳಿಗನೆದೆಯ ಮೂಕಕವಿ 'ಅಬ್ಬಾ' ಎನ್ನುವ ಶಬ್ದದಲ್ಲಿ ಎಲ್ಲವನ್ನು ಕಟ್ಟಿಕೊಟ್ಟಿದ್ದ.