ದುಡಿಮೆಯ ಮಹಿಮೆ

ದುಡಿಮೆಯ ಮಹಿಮೆ

ಕವನ

 ಇರಬೇಕು ಎಲ್ಲರಿಗು

ಏನಾದರು ದುಡಿಮೆ,

ಇಲ್ಲವಾದಲ್ಲಿ ಮನವಾಗುವುದು

ಸೈತಾನನ ಕುಲುಮೆ.

ದುಡಿಮೆ ಹೆಚ್ಚಿಸುವುದು

ಮಾನವನ ಹಿರಿಮೆ,

ನ್ಯಾಯಯುತವಾದಲ್ಲಿ

ಯಾವುದೂ ಅಲ್ಲ ಕಡಿಮೆ.

ಕಾಲಹರಣವಾಗದಿರಲಿ

ಅರಿಯದೆ ದುಡಿಮೆಯ ಮಹಿಮೆ,

ಇದ್ದಲ್ಲಿ ತಲೆ ಖಾಲಿ

ಬುದ್ಧಿಗೂ ಹಿಡಿಯಬಹುದು ಭ್ರಮೆ.

Comments