ಆಷಾಢಮಾಸ ಬರುತಿರಲು

ಆಷಾಢಮಾಸ ಬರುತಿರಲು

ಕವನ

ಆಷಾಢಮಾಸ ಬರುತಿರಲು, ಅತ್ತೆಯವರು ಮನೆಗೆ ಬಂದಿರಲು
ನನ್ನಾಕೆ ಹೊರಟು ನಿಂತಿರುವಳು ತವರು ಮನೆಗೆ ಒಂದು ತಿಂಗಳು

ಷರ್ಟು ಸೀರೆ ಬೆಳ್ಳಿ ಲೋಟ ಸಿಹಿ ಮತ್ತು ಖಾರ ತಿನಿಸು ಜೊತೆಗೊಂದು
ಪುಸ್ತಕ ಪೆನ್ನು ಇಷ್ಟೆಲ್ಲಾ ಆಷಾಢಪಟ್ಟಿಯಲ್ಲಿಟ್ಟು ಉಪಚರಿಸಿದರು ಅತ್ತೆಯವರು.

ಆಷಾಢಪಟ್ಟಿಯ ಕೈಯಲ್ಲಿ ಇಟ್ಟು ಮಗಳನ್ನು ಕರೆದೊಯ್ಯುವೆ ಎಂದರು
ಇಷ್ಟೆಲ್ಲಾ ಉಪಚಾರವಿದ್ದರೆ ಪ್ರತಿವರ್ಷ ಆಷಾಢಕ್ಕೆ ಕರೆದೊಯ್ಯಿರೆಂದೆ

ಒಲ್ಲದ ಮನಸಿನಿಂದ ಹೊರಡುತಿಹಳು ನನ್ನಾಕೆ ತವರಿಗೆ
ಹೇಗೆ ನನ್ನಗಲಿ ಹೋಗುವುದೆಂದು ಬೇಸರವಾಗಿದೆ ಅವಳಿಗೆ..

ಮದುವೆಯಾಗಿ ಕಳೆದಿದೆ ಕೇವಲ ನಾಲ್ಕು ತಿಂಗಳುಗಳು
ಮತ್ತೊಮ್ಮೆ ನಾನಾಗುತಿರುವೆ ಬ್ರಹ್ಮಚಾರಿ ತಿಂಗಳಾಮಟ್ಟಿಗೆ

Comments