ಉಸಿರಿಗೆ ಉಸಿರು ಸೋಕಿಸುತ ನನ್ನ ಸಾಯಿಸಿದೆ

ಉಸಿರಿಗೆ ಉಸಿರು ಸೋಕಿಸುತ ನನ್ನ ಸಾಯಿಸಿದೆ

ಉಸಿರಿಗೆ ಉಸಿರು ಸೋಕಿಸುತ ನನ್ನ ಸಾಯಿಸಿದೆ ಇಲ್ಲೇ
ಕನಸಿಗೆ ಕನಸು ತೋರಿಸುತ ನಾ ಪುನಃ ಜನಿಸಿದೆ ನಲ್ಲೇ

ಕನಸಿನ ಕೊಳದಿ ಕಾಗದದ ದೋಣಿಯಲಿ ಹುಟ್ಟಿಡುತ
ಕಾಣದ ತೀರದಿ ನಿನ್ನ ನಾ ವಿಚಾರಿಸಿದೆ
ಉಸಿರಿನ ಆಳದಿ ಮನದ ಓಣಿಯಲಿ ಹುಂಗುಟ್ಟುತ
ಕಾರಣ ಹೇಳದೆ ನನ್ನ ನೀ ನೇವರಿಸಿದೆ 
||ಉಸಿರಿಗೆ ಉಸಿರು ||

ಯಾರಿರದ ಚಂದಿರನೂರಿನ ಕಡಲತಡಿಯಲಿ ಅಲೆಯುತ
ನನ್ನನು ನಾ ಯಾರೆಂದು ಕೇಳಿದೆ
ಯಾರರಿಯದೆ ಒಂದೊಂದಾಗಿ ಕಾಲಡಿಯಲಿ ಮುತ್ತಿಡುತ
ಅಲೆಯು ನಾ ನೀನಾಗಿರುವೆ ಎಂದಿದೆ ||
ಉಸಿರಿಗೆ ಉಸಿರು ||

ನೆನಪಿನ ಜಾತ್ರೆಯ ಮೆರವಣಿಗೆಯಲಿ ನಿನ್ನ ಅರಸುತ
ವಿರಹಿ ಭಾವದಿ ನನ್ನೇ ನಾ ಕಳಕ್ಕೊಂಡೆ
ಜೀವನ ಯಾತ್ರೆಯ ಮನಮಳಿಗೆಯ ಕದ ಬಡಿಯುತ
ನಿಂತಿಹ ನಿನ್ನಲಿ ನನ್ನೇ ನಾ ಕಂಡುಕ್ಕೊಂಡೆ  
||ಉಸಿರಿಗೆ ಉಸಿರು ||

ನಿಮ್ಮ
ಕಾಮತ್ ಕುಂಬ್ಳೆ

Rating
No votes yet

Comments