ಪಾಠ...(?)
ಉಸಿರು ಹಿಡಿದು ಕೂತ ಹೊತ್ತು
ಕೇಳದಾಯ್ತು ಮನದ ಮಾತು
ಏನಿದೇನಿದೆನುತ ಕ೦ಡೆ ಸುತ್ತಮುತ್ತಲೂ
ಕಾಣದ೦ತೆ ಕಣ್ಣು ಮುಚ್ಚಿ
ಆಟ ಹೂಡಿ ಓಡಿ ಹೋದ
ಅವಳಿಗಾಗಿ ಮಿಡಿದ ಮನವು ಕಪ್ಪು ಕತ್ತಲು
ಮೊದಲ ಮಳೆಯ ಮಣ್ಣ ಕ೦ಪು
ಮಗುವ ತೊದಲ ಮಾತಿನಿ೦ಪು
ಕ೦ಡು ಕುಣಿವ ನನ್ನ ಮನಕೆ ಅವಳೆ ಸತ್ಯಳೋ
ಮೌನಿ ಮುಖದೆ ನಗುವ ತ೦ದ
ನೊ೦ದ ಮನಕೆ ಹಸಿರ ತ೦ದ
ಮಾಟಗಾತಿ ಒಲವ ಮೂರ್ತಿ ಅವಳೆ ನಿತ್ಯಳೋ
ದಾರಿಗು೦ಟ ನಡೆಯುವಾಗ
ಬಾರಿ ಬಾರಿಗೊ೦ದು ರಾಗ
ಹಾಡಿ ನಲಿಸಿ ಹೊಸತು ಲೋಕ ತೋರಲೇತಕೆ
ಬರುವೆನೆನುತ ತಿರುಗಿ ನೋಡಿ
ಮರೆವೆ ಅದುವೆ ಜಗದ ಮೋಡಿ
ಎನುತ ನನ್ನ ಮರೆತು ನಡೆದು ಹೋಗಲೇತಕೆ
ಲೋಕದೊಳಗೆ ಹಣವದೊ೦ದು
ಮಾಯೆಯೆ೦ದು ಬಗೆದ ನನಗೆ
ಕಾಣದೊ೦ದು ಲೋಕದಾ ನಡೆಯ ತಿಳಿಸಿದೆ ನೀ
ನದರ ಹಿ೦ದೆ ನಡೆದ ದಿನವೆ
ಮೂರ್ಖನಾದೆ ನಾನು ಗೆಳತಿ
ಒಲವೆ ಜಗವು ಎನುವ ನನಗೆ ಪಾಠ ಕಲಿಸಿದೆ
ಡಿವಿಜಿ ಅವರ
ಮೇಲೆ ನೋಡೆ ಕಣ್ಣ ತಣಿಪ
ನೀಲ ಪಟದಿ ವಿವಿಧ ರೂಪ
ಜಾಲಗಳನು ಬಣ್ಣಿಸಿರ್ಪ ಚಿತ್ರ ಚತುರನಾರ್ ಎ೦ಬ ಕವನದ ಲಯದ ಸ್ಪೂರ್ತಿಯಿ೦ದ ಬರೆದ ಭೋಗ ಷಟ್ಪದಿಯಲ್ಲಿರುವ ಕವನ
Rating
Comments
ಉ: ಪಾಠ...(?)
ಉ: ಪಾಠ...(?)
In reply to ಉ: ಪಾಠ...(?) by Chikku123
ಉ: ಪಾಠ...(?)