ಕನಿಕರಿಸು ತಾಯೇ ಕನಿಕರದಿಂದೀಯೇ

ಕನಿಕರಿಸು ತಾಯೇ ಕನಿಕರದಿಂದೀಯೇ

ಕನಿಕರಿಸು ತಾಯೇ ಕನಿಕರದಿಂದೀಯೇ
ಸತ್ಕುಲಪ್ರಸೂತೆಯಾದೊಬ್ಬ ಜಾಯೆಯ
ಕನಿಕರಿಸಿ ತಾರೇ ಕನಿಕರದಿಂ ತೋಱೇ
ಸಿರಿದೇವಿಯಂ ಮಿಗಿಸಿರ್ಪ ಚೆಲುವೆಯ

ಮೊದಲ ಮದುವೆಯ ಮೊದಲ ಕನ್ನೆ ಅವಳಾಗಿರಲಿ
ಬೇಟದೋಟವನ್ನೋಡಿದವಳಾಗದಿರಲಿ
ಮೊದಲ ಬೇಟವನ್ನೆನೆಗಾಗಿ ಕಾಪಿಡುತ್ತ
ಮೊದಲ ಕೂಡಿಕೆಗಾಗಿ ಕಾದವಳಾಗಿರಲಿ

ನಿಡುಚಡ್ಡಿಗಳ ತೊಟ್ಟರೂ ನಿತ್ಯಾ
ಅಡುಗೆಲಸಗಳ ಕೂಡೆ ಮಾಡಲೊಲ್ಲೆ
ಮನೆಯ ಕೆಲಸಗಳ ಮಾಡಿದರೂ ನಿತ್ಯಾ
ಮುತ್ತುಗಳ ಮೞೆಗಳ ಸುರಿಯಿಸಲೊಲ್ಲೆ

ಕೂಡಿಕೞೆಯುವ ಮುನ್ನ ಕೂಡೆ ಮಲಗುತ್ತ
ಸವಿಮಾತುಗಳ ಕಿವಿಯೊಳೊರೆಯಬಲ್ಲೆ
ಕೂಡುಬಾೞ್ವೆಯ ಬಲು ಗುಟ್ಟುಗಳನ್ನಱುಹುತ್ತ
ಸಗ್ಗಸೊಗಗಳ ನಿತ್ಯಾ ತೋಱಬಲ್ಲೆ

ಕನಿಕರಿಸು ತಾಯೇ ಕನಿಕರದಿಂದೀಯೇ ಸಿರಿದೇವಿಯಂ ಮಿಗಿಸಿರ್ಪ ಚೆಲುವೆಯ

ಹೆಚ್ಚಿಲ್ಲದೆ ಕಲಿತಿರಲಿ ಕೆಚ್ಚಿಲ್ಲದೆ ಜೊತೆಗಿರಲಿ
ತಾಯಿತಂದೆಯರನ್ನನುಸರಿಸಿ ಬಾೞುತ್ತಿರಲಿ
ಕಾರ್ಯದೊಳು ಕೀೞಾಗಿ ಕರಣದೊಳು ಮೇಲಾಗಿ
ಮನವಾೞ್ತೆಗಳ ವಹಿಸಿಕೊಂಬವಳಾಗಿರಲಿ
ಇರದ ವಾಹನದ ಬಲ್ಗನಸುಗಳ ಕಾಣದ ಅಲ್ಪತೃಪ್ತಳವಳಾಗಿರಲಿ

ಹೆರವ ಗಂಡರ ಕಣ್ಣೆತ್ತಿಯೂ ನೋಡದ
ಪತಿಭಕ್ತಿ ಪರಾಯಣೆಯಾಗಿರಲಿ
ಮುದದಿಂದ ರಂಗೋಲಿಗಳನ್ನನುದಿನವೂ ಬರೆದಿಡುವ
ಸಾಧ್ವಿ ಮಲ್ಲಮ್ಮ ಅವಳಾಗಿರಲಿ
 
ತನ್ನ ಕಾರ್ಯಗಳ ತಾನೇ ಮಾಡುವ
ಬಲು ಜಾಣೆ ತಾನಾಗಿರಲಿ
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಡ್ಡಿಗಳ ಮಾಡದ
ಬಲು ಉದಾರಿ ಅವಳಾಗಿರಲಿ

ಇಂತಿಪ್ಪ ಜಾಯೆಯನ್ನೆಂತಾದರೂ ಒದಗಿಸಿಕೊಡು ತಾಯೇ ಮಧುರೆಯ ಮೀನಾಕ್ಷೀ!

 

 

Rating
No votes yet

Comments