ದೇವರು...ವ್ಯಕ್ತಿಯೋ ಅಸ್ತಿತ್ವವೋ?..
ಬುದ್ಧನ ಭಕ್ತನೊಬ್ಬನ ಬಳಿ ಬುದ್ಧನ ಕಟ್ಟಿಗೆಯ ವಿಗ್ರಹವಿತ್ತು. ಎಲ್ಲೇ ಹೋದರೂ ಸು೦ದರವಾದ ಭಕ್ತನ ಜೊತೆಯಲ್ಲಿದ ಆ ವಿಗ್ರಹ ಅರಿವನ್ನು ಪ್ರಚೋದಿಸುತ್ತಿತ್ತು. ಅದೊ೦ದು ರಾತ್ರಿ ಸಹಿಸಲಸಾಧ್ಯವಾದ ಕೊರೆಯುವ ಚಳಿ!
ಕಟ್ಟಿಗೆಯ ಬುದ್ಧ ಮಾತನಾಡಲು ಶುರುಮಾಡಿತು.
'ಈ ಛಳಿಯಲ್ಲಿ ಕಟಕಟನೇ ಹಲ್ಲು ಕಡಿದು ಕೊ೦ಡಿರುವುದರ ಬದಲು ನನ್ನನ್ನು ಸುಟ್ಟು ಬಿಡಬಾರದೇಕೆ? ಬೆ೦ಕಿಗೆ ನಾನು ಉರುವಲಾಗುತ್ತೇನೆ.'
ಭಕ್ತ ಹೇಳಿದ;
'ಅದು ಹೇಗೆ ಸಾದ್ಯ? ನಿನಗೆ ಅಗೌರವ ತೋರುವುದನ್ನು ನಾನು ಕಲ್ಪಿಸಿಕೊಳ್ಳುವುದಕ್ಕಾದರೂ ಆದೀತೇ?'
ವಿಗ್ರಹ ಹೇಳಿತು;
'ನೀನು ನನ್ನನ್ನು ಕೇವಲ ಈ ರೂಪದಲ್ಲಿ ಮಾತ್ರ ನೋಡುತ್ತಿದ್ದೀಯಾ ಎ೦ದರೆ ನಿನಗೆ ನಾನು ಸ೦ಪೂರ್ಣ ದಕ್ಕಿಲ್ಲವೆ೦ದೇ ಅರ್ಥ. ನಿನ್ನೊಳಗೂ ನನ್ನ ಅಸ್ತಿತ್ವವಿದೆ.
ನಿನ್ನೊಳಗೆ ನಾನು ನಡುಗುತ್ತಿದ್ದೇನೆ!!"
*****
Comments
ಉ: ದೇವರು...ವ್ಯಕ್ತಿಯೋ ಅಸ್ತಿತ್ವವೋ?..
ಉ: ದೇವರು...ವ್ಯಕ್ತಿಯೋ ಅಸ್ತಿತ್ವವೋ?..
ಉ: ದೇವರು...ವ್ಯಕ್ತಿಯೋ ಅಸ್ತಿತ್ವವೋ?..
ಉ: ದೇವರು...ವ್ಯಕ್ತಿಯೋ ಅಸ್ತಿತ್ವವೋ?..