ಪಕ್ಷಿನೋಟ - ಜೂನ್ ಮಾಸದಲ್ಲಿ ಸಂಪದ

ಪಕ್ಷಿನೋಟ - ಜೂನ್ ಮಾಸದಲ್ಲಿ ಸಂಪದ

ಸಂಪದಿಗರಿಗೆ


ಕಳೆದೆರಡು ತಿಂಗಳುಗಳಿಂದ ಮಾಸದ ಪಕ್ಷಿನೋಟ ಮಾಡುತ್ತಿದ್ದ ಪಾರ್ಥಸಾರಥಿ ಅವರನ್ನು ಕೇಳದೆ ಈ ಬಾರಿ ನಾನು ಮಾಡುತ್ತಿದ್ದೇನೆ. ನಿಮ್ಮ ಅತ್ಯಮೂಲ್ಯ ಸಲಹೆಗಳನ್ನು ಪ್ರತಿಕ್ರಿಯೆಗಳ ಮೂಲಕ ತಿಳಿಸಿ. ಏಕೆಂದರೆ ಒಂದು ವೇಳೆ ನಾನೆಲ್ಲಾದರೂ ತಪ್ಪು ಮಾಡಿದ್ದರೆ ತಿದ್ದಿಕೊಳ್ಳಲು ಸಹಾಯವಾಗುತ್ತದೆ.


ನಿರ್ವಹಣಾ ತಂಡದವರಿಗೆ  


ಕಳೆದ ಬಾರಿ ಪಾರ್ಥಸಾರಥಿಯವರು ಹೇಳಿದಂತೆ ಕಥೆ/ಕಥಾಮಾಲಿಕೆಗಳಿಗೆ ಬೇರೆಯದೇ ಆದ ವಿಭಾಗವಿದ್ದರೆ ಚಂದ ಎಂದೆನಿಸುತ್ತದೆ. ಹಾಗೆಯೇ ಕೆಲವೊಮ್ಮೆ ಪ್ರತಿಕ್ರಿಯೆಗಳು ಹಾಕಿದಾಗ ಹಿಂದುಮುಂದಾಗುತ್ತಿದೆ. ಮೊದಲು ಹಾಕಿದ ಪ್ರತಿಕ್ರಿಯೆ ಕೊನೆಗೆ ಹೋಗುತ್ತಿದ್ದೆ. ನಂತರ ಬಂದ ಪ್ರತಿಕ್ರಿಯೆಗಳು ಮೊದಲು ಬರುತ್ತಿವೆ. ಇದು ಸರಿಪಡಿಸಬಹುದೆ?. ಹಾಗೆಯೇ ಕವನಗಳನ್ನು ಪ್ರಕಟಿಸುವಾಗ ಚಿತ್ರಗಳನ್ನು ಸೇರಿಸುವ ಹಾಗಿದ್ದರೆ ಚೆನ್ನಾಗಿರುತ್ತೆ. ಯಾಕೆಂದರೆ ಕೆಲವೊಮ್ಮೆ ಕವನಗಳಿಗೆ ಪೂರಕವಾಗಿರುವ ಚಿತ್ರಗಳನ್ನು ಹಾಕಬೇಕಾದಲ್ಲಿ ಅದು ಕವನದ ವಿಭಾಗದಲ್ಲಿ ಸಾಧ್ಯವಾಗದೆ ಬ್ಲಾಗ್ ಬರಹದಲ್ಲಿ ಪ್ರಕಟಿಸುತ್ತಿದ್ದೇವೆ.


ಈ ತಿಂಗಳು ಹುಟ್ಟು ಹಬ್ಬ ಆಚರಿಸಿಕೊಂಡ ಸಂಪದಿಗರಾದ ಶ್ರೀ ರಾಘವೇಂದ್ರ ನಾವಡ, ಶ್ರೀ ಜ್ನಾನದೇವ್, ಶ್ರೀ ಶ್ರೀಹರ್ಷ ಸಾಲಿಮಠ್ ಹಾಗೂ  ಶ್ರೀಮತಿ ಶ್ಯಾಮಲಾ ಜನಾರ್ಧನ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಹಾಗೆಯೇ ಎಚ್.ಎಸ .ವಿ ಅವರಿಗೂ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಹಾಗೂ ವೈವಾಹಿಕ ಜೀವನಕ್ಕೆ ಕಾಲಿಟ್ಟ ತೇಜಸ್ವಿ ಅವರಿಗೆ ಶುಭಾಶಯಗಳು. 


ಲೇಖನಗಳು


ಈ ತಿಂಗಳು ಒಟ್ಟು ಪ್ರಕಟವಾದ ಲೇಖನಗಳು 83. ಈ ಲ್ಲಿ ಮನ್ಸೋರೆ ಅವರು "ಪ್ರೊಡಕ್ಷನ್ no.1 ಎಂದು ಸಿನೆಮಾ ಶುರು ಮಾಡಿದರೆ ನಾನು ಅದಕ್ಕೆ "ಒಂದು ಸಿನೆಮಾ ನಟಿಯ ಕಥೆ" ಎಂದು ಹೆಸರಿಟ್ಟೆ. ಕರ್ನೂಲ್ ರಮೇಶ್ ಬಾಬು ಅವರು ವೈದ್ಯಲೋಕದ ವಿಸ್ಮಯಗಳನ್ನೊಳಗೊಂಡ "ಹಂಸ ಹಾಡುವ ಹೊತ್ತು" ಮೂಲಕ ಉತ್ತಮ ಕಥಾಮಾಲಿಕೆಯನ್ನು ಸಂಪದಿಗರಿಗೆ ಒದಗಿಸಿಕೊಟ್ಟರು. ಚೇತನ್ ಕೋಡುವಳ್ಳಿ ಅವರು  ಮುಂಗಾರಿನ ಮೋಡಗಳೇ ಸ್ವಲ್ಪ ಇಲ್ಲಿ ನೋಡಿ ಎಂದು ಮಳೆಯನ್ನು ಕರೆತಂದರು. ಮಧ್ವೇಶ್ ಅವರು ತಿರುಪತಿ ತಿರುಮಲ ಯಾತ್ರೆಯನ್ನು ಅರ್ಧಕ್ಕೆ ಕೈ ಬಿಟ್ಟಂತಿದೆ. ಕೋಮಲ್ ಅವರು ಬಹಳ ದಿನದ ನಂತರ "ಸಿದ್ದನ ಮದುವೆಯನ್ನು ಡಿಪ್ಪರ್ ಜೊತೆ ಮಾಡಿಸಿ ಮತ್ತೆ ಕಾಣೆಯಾಗಿಬಿಟ್ಟರು. ಚೇತನ ಹೊನ್ನವಿಲೆ ಅವರು ನನ್ನ ಚೆನ್ನೈ ಡೈರಿ ಇಂದ  ಎಂದು ಸಂಪದಕ್ಕೆ ಪಾದಾರ್ಪಣೆ ಮಾಡಿ ತಾವು ಚೆನ್ನೈ ನಲ್ಲಿ ಪಟ್ಟ ಪಾಡನ್ನು ತಿಳಿಸಿದರು. ಬೆಳ್ಲಾಲ  ಗೋಪಿನಾಥರಾಯರು ವಾಕ್ಪಥ ಹಾಗೂ ಎಚ್.ಎಸ್ವಿ ಯವರ ಅಭ್ಯಾಸದ ವಿವರಗಳನ್ನು ಸಂಪೂರ್ಣವಾಗಿ ಸಂಪದಿಗರಿಗೆ ನೀಡಿದರು.  ಡಾ. ಬಿ.ಆರ್ ಸತ್ಯನಾರಾಯಣ ಅವರು ಸಂದರ್ಭ ಸಹಿತ ಕುವೆಂಪು ಸೊಗಸನ್ನು ವರ್ಣಿಸುತ್ತಿದ್ದರೆ ವಿಶ್ವನಾಥ್ ಅವರು ಕನ್ನಡದಲ್ಲಿ ಆಟೋಕಾಡ್ ಕಲಿಯುವುದನ್ನು ಹೇಳಿಕೊಟ್ಟರು. ಪಾರ್ಥಸಾರಥಿಯವರು ಕಂಸನ ಚಿತ್ರಣವನ್ನು ವಿಭಿನ್ನ ದೃಷ್ಟಿಕೋನದಲ್ಲಿ ಚಿತ್ರಿಸಿ ಸಂಪದಿಗರ ಮೆಚ್ಚುಗೆಗೆ ಪಾತ್ರರಾದರು. ಕವಿನಾಗರಾಜ್ ಅವರು ತಮ್ಮ ಮುದ್ದಿನ ಮೊಮ್ಮಗಳ ಜನ್ಮದಿನವನ್ನು ಅನಾಥಬಾಲಕರ ಜೊತೆ ಆಚರಿಸಿದ್ದನ್ನು ಮನಮುಟ್ಟುವಂತೆ ವಿವರಿಸಿ ಆದರ್ಶಪ್ರಾಯವಾದರು. ಅನಿಲ್ ರಮೇಶ್ ಅವರು ಅಪ್ಪಂದಿರ ದಿನದ ಲೇಖನದ ಮೂಲಕ ಬಹಳ ದಿನದ ನಂತರ ಮತ್ತೆ ಸಂಪದದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಡಿ.ಎಸ. ರಾಮಸ್ವಾಮಿ ಅವರೂ ಸಹ ಅಪರೂಪಕ್ಕೆಂಬಂತೆ ಇಣುಕಿ ನೋಡಿದ್ದಾರೆ. ಇನ್ನು ಮುಂದೆ ನಿರಂತರ ತಮ್ಮ ಬರಹಗಳನ್ನು ಓದುವನ್ತಾದರೆ ಚೆನ್ನಾಗಿರುತ್ತದೆ. ಅಬ್ದುಲ್ ಅವರು ಜಗವ ನಿಯಂತ್ರಿಸುವ ಕೋಣೆಯನ್ನು ಸಂಪದಿಗರಿಗೆ ಪರಿಚಯಿಸಿಕೊಟ್ಟರು.


ಬ್ಲಾಗ್ ಬರಹಗಳು


ಈ ತಿಂಗಳು ಒಟ್ಟು ಪ್ರಕಟವಾದ ಬ್ಲಾಗ್ ಬರಹಗಳು 160.  ಕವಿನಾಗರಾಜರು ತಮ್ಮ ಮೂಢ ಉವಾಚದಿಂದ ಈ ತಿಂಗಳ ಬ್ಲಾಗ್  ಬರಹವನ್ನು ಶುರುಮಾಡಿದರು. ಅತ್ರಾಡಿ ಸುರೇಶ ಹೆಗ್ಡೆಯವರು ತಮ್ಮ ಎಂದಿನ ಶೈಲಿಯಲ್ಲಿ ಸಂಪದಿಗರಿಗೆ ಉತ್ತಮ ಹಿಂದಿ ಚಿತ್ರಗೀತೆಗಳ ಭಾವಾನುವಾದವನ್ನು ನೀಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿಯಲಿ. ಕ್ರಿಷ್ಣಪ್ರಕಾಶ್ ಬೊಳುಂಬು ಅವರು ಭಾರತ ಎಂಬ ಮೂರಕ್ಷರದಲ್ಲಿ ಭಾರತದ ಸುಂದರ ವರ್ಣನೆ ಮಾಡಿದರು. ರಶ್ಮಿ ಪೈ ಅವರು ಆಗೊಮ್ಮೆ ಈಗೊಮ್ಮೆ ಎಂಬಂತೆ ಬಂದು ತಮ್ಮ ಬಾಲ್ಯವನ್ನು ಪರಿಚಯಿಸಿದರೆ ಡಾ. ಮೀನಾ ಸುಬ್ಬರಾವ್ ಅವರು ದಶಕಗಳ ಹಿಂದೆಯೇ ಜಿ.ಪಿ.ಎಸ ಆಗಿದ್ದನ್ನು ವಿವರಿಸಿದರು. ರಾಘವೇಂದ್ರ ನಾವಡರು ಯೋಚಿಸಲೊಂದಿಷ್ಟು ಎಂದು ನುಡಿಮುತ್ತುಗಳನ್ನು ನೀಡಿ ಸಂಪದಿಗರು ಯೋಚಿಸುವಂತೆ ಮಾಡಿದ್ದರೆ, ಹೊಳೆನರಸಿಪುರ ಮಂಜುನಾಥ ಅವರು ತಮ್ಮ ನೆನಪಿನಾಳದಲ್ಲಿ ತಮ್ಮ ತಾಯಿಯ ಬಿಡುಗಡೆಯ ಬಗ್ಗೆ ಬರೆದು ಸರ್ಕಾರಿ ನೌಕರರ ಕ್ರೂರ ವರ್ತನೆಗಳ ಬಗ್ಗೆ ತಿಳಿಸಿದ್ದರು. ಗಣೇಶಣ್ಣ ತಮ್ಮ ತಂದೆ ಯವರ ದೇಹದಾನ ಮಾಡಲು ಆಗದೆ ನೊಂದಿದ್ದನ್ನು ಭಾವಪೂರ್ಣವಾಗಿ ತಿಳಿಸಿಕೊಟ್ಟರು. ಹಂಸಾನಂದಿಯವರು ತಾವು ಓದಿದ ಮರೆಯಲಾರದ ಹಳೆಯ ಕಥೆಗಳು ಕಾದಂಬರಿ ಬಗ್ಗೆ ವಿವರವಾಗಿ ಪರಿಚಯಿಸಿದರು. ಹರಿಹರಪುರ ಶ್ರೀಧರ್ ಅವರು ತಮ್ಮ ಯಶವಿ ವೃತ್ತಿ  ಜೀವನ ಪೂರೈಸಿ ಸ್ವಯಂ ನಿವ್ರುತ್ತಿಯಾಗಿದ್ದನ್ನು ಹಂಚಿಕೊಂಡರು.  ಸಂತೋಷ್ ಆಚಾರ್ಯರು ಏಕೆ ಈಗ ಕವಿತೆ ಬರೆಯುವುದಿಲ್ಲ ಎಂದು ಒಂದು ಕವಿತೆ ಬರೆದೆ ಬಿಟ್ಟರೆ ವಸಂತ್ ಅವರು ಚಂದ್ರನ್ನೇ ಮದುವೆಯಾಗುತ್ತೇನೆ ಎಂದು ಹಠಕ್ಕೆ ಬಿದ್ದಿದ್ದಾರೆ.  ವಿನುತಾ ಕುಂಸಿ ರಾಜಾರಾವ್ ಕಗ್ಗದ ಯೋಚನಾ ಲಹರಿಯನ್ನು ಹರಿಬಿಟ್ಟರೆ, ಪ್ರಸನ್ನ ಕುಲಕರ್ಣಿ ಅವರು ಕಾಯುತ್ತಿದ್ದಾಳೆ ಜಾನಕಿ ಎಂದರು. ನಾಗರತ್ನ ವಿನಾಯಕ್ ಜೋಷಿ ಅವರು ಹುಟ್ಟು ಸಾವಿನ ಗುಟ್ಟನ್ನು ರಟ್ಟು ಮಾಡಿಬಿಟ್ಟರು. ಶಶಿಧರ ಹೆಬ್ಬಾಡಿ ಅವರು ಮಳೆಗಾಲದ ಬಗ್ಗೆ ಪ್ರಬಂಧ ಬರೆದರೆ  ಗೋಪಾಲ್ ಕುಲಕರ್ಣಿ ಅವರು ಗರಂ ಚಹಾ ಕುಡಿಸಿದರು. ಚೇತನ್ ಕೋಡುವಳ್ಳಿ ಅವರು ನೈಂಟಿ ya ಮಹಿಮೆ ತೋರಿಸಿದರೆ ಹೇಮಾ ಪವಾರ್ ಅವರು ಮತ್ತೆ ಬೊಂಡಾ ಜಾಮೂನು ತಿನ್ನಿಸಿದರು.


ಕವನಗಳು  


ಈ ತಿಂಗಳು ಒಟ್ಟು ಪ್ರಕಟವಾದ ಕವನಗಳು ೯೦.  ಜೀವನದ ಜೋಕಾಲಿಯನ್ನು ನೋವಿನಲಿ ತೂಗಿಸುತ ಶುರುಮಾಡಿದರು ಮಹಾಂತೇಶ್ ಅವರು ಶಿವಶಂಕರ ವಿಷ್ಣು ಯಳವತ್ತಿ ಅವರು ಮೂರು ಮುತ್ತುಗಳನ್ನು ಉದುರಿಸಿದರೆ ನಾರಾಯಣ ಭಾಗ್ವತ ಅವರು ಜಾತ್ರೆಯ ನಂತರ ಜೀವನವನ್ನು ಸುಂದರವಾಗಿ ಕಟ್ಟಿಕೊಟ್ಟರು. ಸದಾನಂದ್ ಅವರು ಬಹಳ ದಿನದ ನಂತರ "ಕೌತುಕ" ದಿಂದ ಬಂದರೆ ರಘು ಮುಳಿಯ ಅವರು ನಿಜವ ನುಡಿದರೆ ಎಂದು ಹೇಳಿ ಹೊರಟು ಹೋದರು . ನಂದೀಶ್ ಬಂಕೆನಹಳ್ಳಿ ಅವರು ಮಗುವೇ ಕಲಿಸಿಕೊಡು ಎನ್ನುತ್ತಿದ್ದರೆ ಡಿ.ಎಸ. ರಾಮಸ್ವಾಮಿ ಅವರು "ಯುದ್ಧ" ಮಾಡಲು ಹೊರಟಿದ್ದರು. ದಯಾನಂದ ಚಂದರಪ್ಪ ಅವರು ಅಮೆರಿಕೆಯಲ್ಲಿ ಕುಳಿತು "ಮಾಯೆ" ಮಾಡಿದರೆ ಎಂ.ಎ. ಸನದಿ ಅವರು ದುಬೈ ನಲ್ಲಿ ಕುಳಿತು "ಕನ್ನಡದ ಗಿಳಿ ಕೋಗಿಲೆಗಳು" ಬಗ್ಗೆ ತಿಳಿಸಿದ್ದರು. ಗಾರ್ಗಿ ಭಟ್ ಅವರು "ಗರ್ವ" ದಿಂದ "ಸಂಭ್ರಮ" ಪಟ್ಟರು. ಇನ್ನುಳಿದಂತೆ  ಅನೂಪ್, ಬಸವರಾಜು ಕ್ಯಾಶವಾರ , ರಾಜೀವ್ ಬಚ್ಚು, ಪ್ರೀತಂ,  ಪ್ರಶಸ್ತಿ , ಅನಿತಾ, ಪ್ರದೀಪ್ ಅವರೂ ಸಹ ತಮ್ಮ ಕಾವ್ಯ ಕೌಶಲವನ್ನು ತೋರಿಸಿದ್ದಾರೆ. 


ಲೇಖನದ ಅಳತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯ್ದ ಬರಹ,ಕವನ, ಲೇಖನಗಳನ್ನಷ್ಟೇ ಪ್ರಸ್ತಾಪಿಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಉತ್ತಮ ಬರಹಗಳ ನಿರೀಕ್ಷೆಯಲ್ಲಿ ನಿಮ್ಮವ..


ಜಯಂತ್.

Comments