ನಿರೀಕ್ಷೆಯ ಮಾಡದಿರು ಹುಸಿ!

ನಿರೀಕ್ಷೆಯ ಮಾಡದಿರು ಹುಸಿ!

ನಿರೀಕ್ಷೆಯ ಮಾಡದಿರು ಹುಸಿ!

ಎಂದೂ ಒಂಟಿಯೆಂದು ಎಣಿಸದಿರು ಜೀವನದೀ ಪಯಣದಲಿ
ನೋವು ನಲಿವುಗಳ ಹಂಚಿಕೊಂಬವನಿದ್ದೇನಲ್ಲ ಜೊತೆಯಲಿ

ಒಂದರ ನಂತರ ಇನ್ನೊಂದು ಕಷ್ಟ ನಮ್ಮೀ ಜೀವನದಿ ನಿತ್ಯ
ಸಮಸ್ಯೆಗಳಿಗೆಲ್ಲಾ ಪರಿಹಾರ ಇದೆ ಇದು ನಾ ಕಂಡ ಸತ್ಯ

ನಿನ್ನ ಅವಸರದ ನಡೆ ಅನ್ಯರಿಗೆ ನೀಡದಂತಿರಲಿ ನೋವು
ನಿನ್ನ ಬದುಕು ನಿನ್ನದಷ್ಟೇ ಅಲ್ಲ ಜೊತೆಯಲಿದ್ದೇವೆ ನಾವೂ

ನೀನು ನನಗೆಷ್ಟು ಇಷ್ಟವೆಂದು ನಾನೀಗ ಹೇಗೆ ನುಡಿಯಲಿ
ಆಡುವ ಮಾತುಗಳೂ ಅಪಾರ್ಥವಾಗುವ ಭಯ ಮನದಲಿ

ನಿನ್ನ ಮನದ ಭಾರ ಇಳಿಸಲು ಸದಾ ಇವೆ ನನ್ನೀ ಕಿವಿಗಳು
ನಿನಗಾಗಿಯೇ ಈ ಹೃದಯದೊಳೂ ಇದೆ ಜಾಗ ಮೀಸಲು

ಬಾಳಿನಲಿ ನೀ ಸಾಧನೆಗೈದು ಮೇಲಕ್ಕೇರಿದರೆನಗೆ ಖುಷಿ
ನಿನ್ನೊಳಿತ ಬಯಸುವ ನನ್ನ ನಿರೀಕ್ಷೆಯ ಮಾಡದಿರು ಹುಸಿ
**********

Rating
No votes yet

Comments